SUDDILIVE || SHIVAMOGGA
ನ್ಯಾಯಲಯದ ಕಲಾಪಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಗಳು ಅಂದರ್-The accused who absconded without appearing in court proceedings are Andar
ಫೋರ್ಜರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಸೊರಬ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಸೊರಬ ಪೋಲೀಸ್ ಠಾಣೆ ಯಲ್ಲಿ ಸಂಖ್ಯೆ 222/2016 ಕಲಂ -341,143,147,504,427,506,149 ಐಪಿಸಿ ರ ಪ್ರಕರಣದ ಆರೋಪಿತರಾದ 1] ಶಾಂತಪ್ಪ ತಂದೆ ಚನ್ನಬಸಪ್ಪ 43ವರ್ಷ ಲಿಂಗಾಯತ ಜನಾಂಗ ಕೂಲಿ ಕೆಲಸ ಕೌಲಿ ಗ್ರಾಮ ಶಿಕಾರಿಪುರ ತಾ!! ಹಾಗೂ 2]ಶಿವಕುಮಾರ್ ತಂದೆ ಈರಪ್ಪ 36 ವರ್ಷ ಲಿಂಗಾಯತ ಜನಾಂಗ ಕೂಲಿ ಕೆಲಸ ಕೌಲಿ ಗ್ರಾಮ ಶಿಕಾರಿಪುರ ತಾ!! ಇವರುಗಳು ಕಳೆದ ಸುಮಾರು 7 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು,
ಮಾನ್ಯ PCJ &JMFC ನ್ಯಾಯಾಲಯ ಸೊರಬದ CC ನಂ 50/2021 (splitup cc 418/2019) ರಲ್ಲಿ ಮಾನ್ಯ ನ್ಯಾಯಾಲಯವು ಆರೋಪಿತರ ವಿರುದ್ಧ ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಿದ್ದು, ಮಹಾಂತೇಶ್ ಕೆ ಲಂಬಿ ಸಿಪಿಐ ಸೊರಬ ವೃತ್ತ ಮತ್ತು ಶ್ರೀ ನವೀನ್ ಪಿಎಸ್ಐ ಸೊರಬ ಪೊಲೀಸ್ ಠಾಣೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸೋಮಾನಾಯ್ಕ, CHC 68 ಸೊರಬ ಪೊಲೀಸ್ ಠಾಣೆ ರವರನ್ನು ಆರೋಪಿ ದಸ್ತಗಿರಿ ಕರ್ತವ್ಯಕ್ಕೆ ನೇಮಕ ಮಾಡಲಾಗಿದ್ದು, ಸದರಿಯವರು ಪ್ರಕರಣದ ಆರೋಪಿತರನ್ನು ಪತ್ತೆ ಮಾಡಿ ದಿನಾಂಕಃ 05-01-2026 ರಂದು ಕೌಲಿ ಗ್ರಾಮದಲ್ಲಿ ಪತ್ತೆಮಾಡಿ ವಶಕ್ಕೆ ಪಡೆದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಸದರಿಯವರಿಗೆ ಜಾಮೀನು ನೀಡಿರುತ್ತದೆ.
ಎಸ್ಪಿ ನಿಖಿಲ್ ಬಿ ಐಪಿಎಸ್, ಸಿಬ್ಬಂಧಿಯವರ ಉತ್ತಮ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
The accused who absconded without appearing in court proceedings are Andar

