SUDDILIVE || BHADRAVATHI
ಭದ್ರಾವತಿ- ರಾಬರಿ ಪ್ರಕರಣದ ಆರೋಪಿ ಅಂದರ್-Accused arrest in BHADRAVATHI robbery case
ಹೊಸವರ್ಷದ ಮೊದಲ ರಾಬರಿ ಪ್ರಕರಣವನ್ನ ಭದ್ರಾವತಿಯ ನ್ಯೂಟೌನ್ ಪೊಲೀಸರು ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕಃ-05-01-2026 ರಂದು ಬೆಳಿಗ್ಗೆ ಶ್ರೀಮತಿ ಭಾಗ್ಯ, 23 ವರ್ಷ ಗೃಹಿಣಿ ವಾಸ ಜೇಡಿಕಟ್ಟೆ ಭದ್ರಾವತಿ ಟೌನ್ ರವರು ಮನೆಯ ಬಾಗಿಲನ್ನು ತೊಳೆಯಲು ಮನೆಯ ಪಕ್ಕದಲ್ಲಿರುವ ಡ್ರಮ್ ನಿಂದ ನೀರನ್ನು ತೆಗೆದುಕೊಳ್ಳಲು ಹೋದಾಗ ಯಾರೋ ಒಬ್ಬ ಅಸಾಮಿಯು ತನ್ನ ಕೈಯಲ್ಲಿ ಚಾಕುವನ್ನು ಹಿಡಿದುಕೊಂಡು ಬಂದು ನಿನ್ನ ತಾಳಿಸರ ಕೊಡು ಇಲ್ಲದಿದ್ದರೆ ನಿನ್ನನ್ನು ಚಾಕು ಹಾಕಿ ಸಾಯಿಸುತ್ತೇನೆ. ಅಂತಾ ಹೇಳಿ 50,000/-ರೂ ಬೆಲೆಯ ಬಂಗಾರದ ಎರಡು ತಾಳಿ ಮತ್ತು ಒಂದು ಲಕ್ಷ್ಮಿ ತಾಳಿ ಇರುವ ಮತ್ತು ಬಂಗಾರದ 04 ಗುಂಡುಗಳಿರುವ ಕರಿಮಣಿ ಸರವನ್ನು ಅವರಿಂದ ಬಲವಂತವಾಗಿ ಬಿಚ್ಚಿಸಿಕೊಂಡು ಹೋಗಿದ್ದು ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ನಂತರ ಈ ಪ್ರಕರಣದ ತನಿಖೆಯ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐ.ಪಿ.ಎಸ್ ಹಾಗೂ ಅಡಿಷನಲ್ ಎಸ್ಪಿಗಳಾದ ಎ.ಜಿ ಕಾರಿಯಪ್ಪ ಮತ್ತು ರಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಮತಿ ನಾಗಮ್ಮ.ಕೆ ರವರ ಮೇಲ್ವಿಚಾರಣೆಯಲ್ಲಿ, ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ಟಿ. ರಮೇಶ್ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಕವಿತಾ ಪಿ.ಎಸ್.ಐ, ಟಿ.ಪಿ.ಮಂಜಪ್ಪ ಎ.ಎಸ್.ಐ, ಆದರ್ಶ ಹೆಚ್ ಸಿ 408, ರವಿಕಿರಣ್ ಬಿ.ಪಿ ಸಿಪಿಸಿ-1094, ಪ್ರಸನ್ನ ಸಿಪಿಸಿ 1675, ಪ್ರಕಾಶ.ಜಿ.ಕೆ ಸಿಪಿಸಿ 1514, ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಸಿಲಾಗಿರುತ್ತದೆ.
ಸದರಿ ತನಿಖಾ ತಂಡವು ದಿನಾಂಕಃ- 05-01-2026 ರಂದು ಈ ಪ್ರಕರಣದಲ್ಲಿ ಆರೋಪಿಯಾದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಹೊಸಪಾಳ್ಯ ಗ್ರಾಮದ ಪ್ರತಾಪ್.ಬಿ ಬಿನ್ ಬಸಪ್ಪ (25) ಇವನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಕೃತ್ಯಕ್ಕೆ ಬಳಸಿದ 1)ಒಂದು ಸಣ್ಣ ಚಾಕು. 2) 75000/- ರೂ ಬೆಲೆಯ ಹೀರೋ ಸ್ಪಲೆಂಡರ್ ಪ್ಲಸ್ ಬೈಕ್ ಹಾಗು 3) 75000/- ರೂ ಬೆಲೆಯ ಬಂಗಾರದ ಎರೆಡು ತಾಳಿ ಮತ್ತು ಒಂದು ಲಕ್ಷ್ಮಿ ತಾಳಿ ಇರುವ ಮತ್ತು ಬಂಗಾರದ 04 ಗುಂಡುಗಳಿರುವ ಕರಿಮಣಿ ಮಾಂಗಲ್ಯಸರ ಸೇರಿ ಒಟ್ಟು ಅಂದಾಜು ಮೌಲ್ಯ 1,50,000/- ರೂ ಗಳ ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Accused arrest in BHADRAVATHI robbery case


