SUDDILIVE || SHIVAMOGGA
ಕಾರ್ತಿಕ ದೀಪ ಬೆಳಗಲು ಹೈಕೋರ್ಟ್ ಗ್ರೀನ್ ಸಿಗ್ನಲ್-ಈಶ್ವರಪ್ಪ ಫುಲ್ ಖುಷ್- High Court Green Signal to Light Kartika Dipa- Eshwarappa Full Khush
ತಮಿಳು ನಾಡಿನ ಮದುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ಇಂದು ಅನುಮತಿಸಿದ ಹಿನ್ನಲೆಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು ಹಿಂದುತ್ವಕ್ಕೆ ಮತ್ತೊಮ್ಮೆ ಜಯವಾಗಿದೆ ಎಂದಿದ್ದಾರೆ.
ಕುಂದ್ರಂ ಬೆಟ್ಟಕ್ಕೆ ಹಿಂದೂ ಶ್ರದ್ಧಾಕೇಂದ್ರಕ್ಕೆ ಇಂದೇ ಬೇಟಿ ನೀಡುವ ಅವಕಾಶ ಲಭಿಸಿದ ಹಿನ್ನಲೆಯಲ್ಲಿ ಪುತ್ರ ಕಾಂತೇಶ್, ಪತ್ನಿ ಜಯಶ್ರೀ ಮತ್ತು ಕುಟುಂಬಸ್ಥರ ಜೊತೆ ತೆರಳಿ ಸಾನಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪುತ್ರ ಕಾಂತೇಶ್ ಅವರ ಪೇಜ್ ನಲ್ಲಿ ವೀಡಿಯೀವೊಂದನ್ನ ಹರಿಬಿಟ್ಟಿದ್ದಾರೆ. ನಮ್ಮ ಸೌಭಾಗ್ಯ. ಹಿಂದೂ ವಿರೋಧಿ ಮನಃಸ್ಥಿತಿಯ ತಮಿಳುನಾಡು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಅಲ್ಲಿ ಹಿಂದೂಗಳು ಕಾರ್ತಿಕ ದೀಪೋತ್ಸವ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದವು.
ಇತ್ತೀಚೆಗೆ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರ ಏಕಸದಸ್ಯ ನ್ಯಾಯ ಪೀಠ ತಮಿಳುನಾಡು ಸರ್ಕಾರ ಮತ್ತು ವಕ್ಫ್ ಬೋರ್ಡಿನ ಅರ್ಜಿ ತಿರಸ್ಕರಿಸಿ ಹಿಂದೂಗಳಿಗೆ ದೀಪ ಬೆಳಗಿಸಲು ಅವಕಾಶ ನೀಡಿದ್ದರು. ಆದರೆ ಈ ತೀರ್ಪಿನ ವಿರುದ್ಧ ಹೈಕೋರ್ಟಿನ ಮದುರೈ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಆಗಿತ್ತು. ಇಂದು ಮಾನ್ಯ ಉಚ್ಚ ನ್ಯಾಯಾಲಯವೂ ಸಹಾ ಹಿಂದೂಗಳ ಪರವಾಗಿ ತೀರ್ಪು ನೀಡಿದೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.
ಈ ಮೊದಲು ತೀರ್ಪು ನೀಡಿದ್ದ ಜಸ್ಟೀಸ್ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ತಮಿಳುನಾಡು ಸರ್ಕಾರ ಮತ್ತು ಹಿಂದೂ ವಿರೋಧಿಗಳು ಸಜ್ಜಾಗಿದ್ದರು. ಇದಕ್ಕೆ 50 ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದರು, ಸಹಿ ಹಾಕಿದವರಲ್ಲಿ ಕರ್ನಾಟಕದ ಮೂರು ಸಂಸದರೂ ಸೇರಿದ್ದಾರೆ ಎಂಬುದು ಬೇಸರದ ಸಂಗತಿ. ಇಂದು ಮಾನ್ಯ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿಂದೂ ವಿರೋಧಿ ಮನಃಸ್ಥಿತಿಗಳ ಬಾಯಿ ಮುಚ್ಚಿಸಿದೆ. ಸತ್ಯಕ್ಕೆ, ಹಿಂದುತ್ವಕ್ಕೆ ಮತ್ತೊಮ್ಮೆ ಜಯವಾಗಿದೆ ಎಂದು ತಿಳಿಸಿದ್ದಾರೆ.
High Court Green Signal to Light Kartika Dipa- Eshwarappa Full Khush

