SUDDILIVE || SUDDILIVE
ನಾಳೆ ವಿದ್ಯುತ್ ವ್ಯತ್ಯಯ ಜೊತೆಗೆ ನಾಳೆ ಮತ್ತು ನಾಡಿದ್ದು ಕುಡಿಯುವ ನೀರು ಸರಬರಾಜಿನಲ್ಲಿಯೂ ವ್ಯತ್ಯಯ-Along with the power outage tomorrow, there will also be disruptions in the supply of drinking water
ನಾಳೆ ಕೆಲವೆಡೆ ಕರೆಂಟ್ ಇಲ್ಲವಾದರೆ, ಕುಡಿಯುವ ನೀರು ಸರಬರಾಜಿನಲ್ಲೂ ಎರಡು ದಿನ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪತ್ರಿಕಾ ಪ್ರಕಟಣೆಯನ್ನ ಹೊರಡಿಸಿದೆ.
ಮೊದಲಿಗೆ ಶಿವಮೊಗ್ಗ ಆಲ್ಕೋಳ ವಿವಿ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಜ.07 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ಸೋಮಿನಕೊಪ್ಪ ರಸ್ತೆ, ಕನಕನಗರ, ದೇವರಾಜ ಅರಸು ಬಡಾವಣೆ, ಶಾರದಮ್ಮ ಲೇಔಟ್, ಖಾಜೀ ಗಾರ್ಡನ್ ಏರಿಯಾ, ಪಿ&ಟಿ ಕಾಲೋನಿ ರಸ್ತೆ ಹಾಗೂ ಇನ್ನಿತರೆ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜ.07 ಮತ್ತು 08 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ
ಮೆಸ್ಕಾಂ ವತಿಯಿಂದ ತುರ್ತು ಕಾಮಗರಿಯಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಮಧ್ಯಂತರ ಯಂತ್ರಗಾರಕ್ಕೆ ಜ. 07 ರಂದು ವಿದ್ಯುತ್ ನಿಲುಗಡೆ ಮಾಡುವುದರಿಂದ ಜ.07 ಮತ್ತು 08 ರಂದು ಸೋಮಿನಕೊಪ್ಪ, ತ್ಯಾವರೆಚಟ್ನಹಳ್ಳಿ, ಬೊಮ್ಮನಕಟ್ಟೆ, ಶಾಂತಿನಗರ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Along with the power outage tomorrow, there will also be disruptions in the supply of drinking water

