ಅರುಣನ ಕೊಲೆ ಆರೋಪಿಗಳು ಸರೆಂಡರ್-Accused of Aruna's Murder surrendered

 SUDDILIVE || SHIVAMOGGA

ಅರುಣನ ಕೊಲೆ ಆರೋಪಿಗಳು ಸರೆಂಡರ್-Accused of Aruna's Murder surrendered

Aruna, Murder

ವಿನೋಬ ನಗರದ ಶಕ್ತಿ ವೈನ್ ಶಾಪ್ ಮುಂದೆ ನಿಂತಿದ್ದ ಅರುಣ ಯಾನೆ ಬೋಂಡಾ ಎಂಬ ಯುವಕನನ್ನ ರಾಡಿನಿಂದ ಹೊಡೆದು ಕೊಲೆ ಮಾಡಿದ ಆರೋಪಿಗಳು ನ್ಯಾಯಾಲಯಕ್ಕೆ ಸರೆಂಡರ್ ಆಗಿದ್ದು, ಇಬ್ಬರನ್ನೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. 

ಡಿ.29 ರಂದು ಸಂಜೆ ಶಕ್ತಿ ವೈನ್ಸ್ ಮತ್ತು ಅಪೋಲೋ ಮೆಡಿಕಲ್ ಶಾಪ್  ಬಳಿ ನಿಂತಿದ್ದ ಅರುಣನನ್ನ ಬೈಕಿನಲ್ಲಿ ಬಂದು ರಾಡಿನಿಂದ ಹೊಡೆದ ಅರುಣನ ಪತ್ನಿಯ ಸಹೋದರ ಮಾವ, ಮಂಜುನಾಥ್ ಮತ್ತು ತಂದೆ ತಿಪ್ಪೇಶಿ ರಾಡಿನಿಂದ ಹೊಡೆದು ಹತ್ಯೆಗೈದಿದ್ದರು.‌ಈ ಮೊದಲು ಅರುಣ ಕಾಶೀಪುರದಲ್ಲಿ ಯಶಸ್ವಿನಿ ಎಂಬ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದನು. 


ಗಾರೆ ಕೆಲಸ ಮಾಡಿಕೊಂಡಿದ್ದ ಅರುಣ ಡೊಳ್ಳು ಹೊಡೆಯುತ್ತಿದ್ದ, ಆರ್ ಎಕ್ಸ್ 100 ಬೈಕ್ ಇಟ್ಟುಕೊಂಡಿದ್ದ‌. ಡೊಳ್ಳು ಮತ್ತು ಆರ್ ಎಕ್ಸ್ 100 ಬೈಕ್ ನ್ನ ಓಡಿಸುವ ಸ್ಟೈಲಿಗೆ ಯುವತಿ ಮನಸೋತಿದ್ದಳು. ಮೂರು ವರ್ಷಗಳ ಹಿಂದೆ ಅರುಣ ಯಶಸ್ವಿಯನ್ನ ಮದುವೆಯಾಗಿದ್ದನು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಕೆಲಸದ ವಿಚಾರದಲ್ಲಿ ಗಲಾಟೆಯಾಗುತ್ತಿತ್ತು. ಗಲಾಟೆಯಾದುದರಿಂದ ಯಶಸ್ವಿನಿ ತಾಯಿಮನೆಗೆ ಹೋಗುತ್ತಿದ್ದಳು. 


ಅರುಣ ಕರೆದುಕೊಂಡು ಬರಲು ಹೋಗುತ್ತಿದ್ದ. ಗಲಾಟೆ ಹೆಚ್ಚಾದಂತೆ ಅರುಣ ಮದ್ಯಪಾನ ಮಾಡಲು ಶುರುವಿಟ್ಟುಕೊಂಡಿದ್ದ. ಹೆಂಡತಿಯನ್ನ‌ಮನೆಗೆ ಕಳುಹಿಸಿ ಎಂದು ಗಲಾಟೆ ಮಾಡುತ್ತಿದ್ದ ಅರುಣನಿಗೆ ಹೆಂಡತಿ ಮನೆಯವರು ರಾಡಿನಲ್ಲಿ ಹೊಡೆದು ಕಳುಹಿಸಿದ ಉದಾಹರಣೆಗಳಿವೆ. ನಮ್ಮ ಮನೆಯ ಹುಡುಗಿಯನ್ನ ಓಡಿಸಿಕೊಂಡು ಮದುವೆಯಾಗಿದ್ದೀಯ ಎಂಬುದು ಯಶಸ್ವಿನಿ,  ತಂದೆ ತಿಪ್ಪೇಶಿ, ತಾಯಿ ಕಮಲಾಕ್ಷಿ, ಸಹೋದರ ಮಾವ ಮಂಜು ವಿರುದ್ಧ ದೂರು ದಾಖಲಾಗಿತ್ತು. 

ಎರಡು ದಿನಗಳ ಹಿಂದೆ ಕೊಲೆ ಆರೋಪಿಗಳಾದ ತಿಪ್ಪೇಶಿ ಮತ್ತು ಮಂಜುನಾಥ ಅವರು ಕೋರ್ಟ್ ಗೆ ಹೋಗಿ ಸರೆಂಡರ್ ಆಗಿದ್ದಾರೆ. ಈಗ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಕಮಲಾಕ್ಷಿ ಮತ್ತು ಯಶಸ್ವಿನಿಗೆ ಬಲೆ ಬೀಸಲಾಗಿದೆ ಎಂಬುದು ಪೊಲೀಸ್ ಇಲಾಖೆಯ ಸ್ಪಷ್ಟನೆಯಾಗಿದೆ. ಆದರೆ ಮಾಹಿತಿ ಪ್ರಕಾರ ಇಬ್ಬರನ್ನೂ ಬಂಧಿಸಿರುವುದಾಗಿ ಹೇಳಲಾಗುತ್ತಿದೆ. 

Accused of Aruna's Murder surrendered


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close