ಅಯ್ಯಪ್ಪ ಮಾಲಾಧಾರಿಗಳಿಗೆ ಕೊನೆಗೂ ಸಿಕ್ಕ ಜಯ-Ayyappa Maladharis finally get victory

SUDDILIVE || SHIVAMOGGA

ಅಯ್ಯಪ್ಪ ಮಾಲಾಧಾರಿಗಳಿಗೆ ಕೊನೆಗೂ ಸಿಕ್ಕ ಜಯ-Ayyappa Maladharis finally get victory   

Victory, Maladhari

ಮಾಧ್ಯಮಗಳ ನಿರಂತರ ಸುದ್ದಿಯ ಬೆನ್ನಲ್ಲೇ ಅಯ್ಯಪ್ಪ ಮಾಲೆಗಳಿಗೆ ಜಯ ಸಿಕ್ಕಿದೆ. ಏರಿಮಲೈಯಲ್ಲಿ ಕೇರಳ ಪೊಲೀಸರ ದಬ್ಬಾಳಿಕೆಯನ್ನ ಖಂಡಿಸಿ ನಡೆಯುತ್ತಿದ್ದ ಹೋರಾಟಕ್ಕೆ ಕರ್ನಾಟಕದ ಅದರಲ್ಲೂ ಶಿವಮೊಗ್ಗ ಭದ್ರಾವತಿಯ ಮಾಲಾಧಾರಿಗಳಿಗೆ ಜಯ ಸಿಕ್ಕಿದೆ. 

ಸಂಕ್ರಂತಿಯ ಹಿನ್ನಲೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಶಬರಿ ಮಲೆಗೆ ಭೇಟಿ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದರು. ಕೇರಳ ಸರ್ಕಾರ ಗಡಿ ಭಾಗದಲ್ಲಿ ಬರುವ ಕರ್ನಾಟಕ ಮಾಲಾಧಾರಿಗಳಿಗೆ ಮಾತ್ರ ಅವರ ಬಸ್ ನಲ್ಲಿ ಪಂಪಗೆ ಹೋಗಬೇಕು. ಪಾರ್ಕಿಂಗ್ ಶುಲ್ಕವನ್ನ ಮನಸ್ಸೋಇಚ್ಛೆ ವಿಧಿಸಿತ್ತು. 

ಇದನ್ನ ಖಂಡಿಸಿ ಮಾಲಾಧಾರಿಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆಎಚ್ಚರಿಕೆ ನೀಡಿದ್ದರು.  ನಿರಂತರ ಮಾಧ್ಯಮಗಳ ವರದಿಯಿಂದ ಎಚ್ಚೆತ್ತುಕೊಂಡ ಕೇರಳ ಸರ್ಕಾರ, ಕನ್ನಡಿಗರಿಗೆ ಶಬರಿ ಮಲೈಗೆ ಹೋಗಲು ಕೇರಳ ಸರ್ಕಾರ ಅನುವು ಮಾಡಿಕೊಟ್ಟಿದೆ. 

ಬೆಳಗ್ಗೆಯಿಂದ ಮಾಲಾಧಾರಿಗಳನ್ನು ತಡೆದಿದ್ದ ಕೇರಳ ಪೊಲೀಸರು, ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ  ಮಾಲಾಧಾರಿಗೆ ರಕ್ಷಣೆ ನೀಡಿ ಮುಂದಿನ ಯಾತ್ರೆಗೆ ಅನುವು ಮಾಡಿಕೊಟ್ಟಿದೆ. ಕರ್ನಾಟಕದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ಕರ್ನಾಟಕದ ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ ಮುಂದಿನ ಪ್ರಯಾಣ ಬೆಳೆಸಿದ್ದಾರೆ. 

Ayyappa Maladharis finally get victory

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close