ಅಯ್ಯಪ್ಪ ಮಾಲಾಧಾರಿಗಳಿಗೆ ಕೇರಳ ಗಡಿಯಲ್ಲಿ ನಿರ್ಭಂಧ, ವಿನೂತನ ಪ್ರತಿಭಟನೆ- Ayyappa devotees face restrictions at Kerala border, new protest

SUDDILIVE || SHIVAMOGGA

ಅಯ್ಯಪ್ಪ ಮಾಲಾಧಾರಿಗಳಿಗೆ ಕೇರಳ ಗಡಿಯಲ್ಲಿ ನಿರ್ಭಂಧ, ವಿನೂತನ ಪ್ರತಿಭಟನೆ- Ayyappa devotees face restrictions at Kerala border, new protest    

Kerala, ayyappa

ಕರ್ನಾಟಕದ ಶಬರಿ ಮಲೆ ಯಾತ್ರಿಗಳಿಗೆ ಕೇರಳದಲ್ಲಿ ನಿರ್ಭಂಧಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಕೇರಳ ಪೊಲೀಸರ ವಿರುದ್ಧ ಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.   ಯಾತ್ರಾರ್ಥಿಗಳು ರಸ್ತೆಯಲ್ಲೇ ಕುಳಿತು ಭಜನೆ ಮಾಡುತ್ತಿರುವುದಾಗಿ ತಿಳಿದಿ ಬಂದಿದೆ. 

ಶಿವಮೊಗ್ಗದ ಭದ್ರಾವತಿ ಸೇರಿದಂತೆ ಕರ್ನಾಟಕದ ಹಲವು ಮಾಲಾದಾರಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ಕೇರಳದ ಎರುಮಲೈಯಲ್ಲಿ ಮಾಲಾದಾರಿಗಳಿಂದ ಪ್ರತಿಭಟನೆ ನಡೆಯುತ್ತಿದೆ.ಕರ್ನಾಟಕದ ನೊಂದಣಿ ಇರುವ ವಾಹನಗಳಿಗೆ ನಿರ್ಭಂಧದ ಆರೋಪದ ಅಡಿ ಮಾಲಾಧಾರಿಗಳಿಂದ ಈ ಕ್ರಮ ನಡೆಯುತ್ತಿದೆ. 


ಮಾಲಾದಾರಿಗಳಿಗೆ ಎರುಮಲೈಯಿಂದ ಮುಂದೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.ಕೇರಳ ಹಾಗೂ ಇತರೆ ವಾಹನಗಳಿಗೆ ಮಾತ್ರ ಒಳಗೆ ಬಿಡಲಾಗುತ್ತಿದೆ ಎಂದು  ಮಾಲಾದಾರಿಗಳು ಆರೋಪಿಸುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿದ ಮಾಲಾದಾರಿಗಳಿಂದ ಕೇರಳ ಪ್ರವೇಶಿಸಲು ನೂತನ ಪ್ರತಿಭಟನೆ ಹಮ್ಮಿಕೊಂಡಿದ್ದರೆ. 

ಎರಿಮಲೈಯಿಂದ ಪಂಪಗೆ ಹೋಗಲು ಕೇರಳ ಬಸ್ ಗಳಲ್ಲಿ ಹೋಗುವಂತೆ ಹಾಗೂ ಕರ್ನಾಟಕದಿಂದ ವಾಹನ ಮಾಡಿಕೊಂಡು ಬರುವ ಯಾತ್ರಾತ್ರಿಗಳಿಗೆ ಪಾರ್ಕಿಂಗ್ ಗೆ ಹಣಪಡೆಯಲಾಗುತ್ತಿದೆ. ಇದು ಕೇರಳ ಸರ್ಕಾರದ ಲೂಟಿ ಎಂದು ಆರೋಪಿಸಿರುವ ಮಾಲಾಧಾರಿಗಳು ರಾಜ್ಯದ ಸಿಎಂ, ಡಿಸಿಎಂ ಹಾಗೂ ಕೇಂದ್ತದ ಕುಮಾರ ಸ್ವಾಮಿ ಸಹಾಯಕ್ಕೆ ಧಾವಿಸುವಂತೆ ಕೋರಿದ್ದಾರೆ.

Ayyappa devotees face restrictions at Kerala border, new protest 




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close