ಕಾಡಿ ಬೇಡಿ ಪ್ರೀತಿಸಿ ಮದುವೆಯಾಗಿದ್ದ ಗೋಪಿ ಪತ್ನಿಯ ಕುತ್ತಿಗೆ ಹಿಸುಕಿ ಅಡ್ಡಡ್ಡ ಮಲಗಿಸಿದ್ದ- Gopi, who had married for love, had strangled his wife and made her lie down on her side

 SUDDILIVE || HOLEHONNURU

ಕಾಡಿ ಬೇಡಿ ಪ್ರೀತಿಸಿ ಮದುವೆಯಾಗಿದ್ದ ಗೋಪಿ ಪತ್ನಿಯ ಕುತ್ತಿಗೆ ಹಿಸುಕಿ ಅಡ್ಡಡ್ಡ ಮಲಗಿಸಿದ್ದ- Gopi, who had married for love, had strangled his wife and made her lie down on her side    

Love, Married


ಹೊಳೆಹೊನ್ನೂರು ಪಂಡರಹಳ್ಳಿಯಲ್ಲಿ 23 ವರ್ಷದ ಚಂದನ ಬಾಯಿಯ ಕತ್ತು ಹಿಸುಕಿ ಪತಿಯೇ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಗೋಪಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದೆ. 

 ಲವ್ ಮಾಡಿ ಚಂದನ ಬಾಯಿಯೇ ಬೇಕು ಎಂದು ಅಂತರ್ಜಾತಿಯ ಮದುವೆಯಾಗಿದ್ದ ಗೋಪಿ ದಿಡೀರ್ ಎಂದು ಮೃತ ಚಂದನ ಬಾಯಿಯ 19 ನೇ ವರ್ಷದ ಸಹೋದರಿ ಕಾವ್ಯಳ ಹೆಸರನ್ನ ಹಚ್ಚೆಯಾಗಿ ಎದೆ ಮೇಲೆ ಹಾಕಿಸಿಕೊಂಡಿದ್ದ. ಕೇಳಿದ್ದಕ್ಕೆ ಆಕೆ ನನ್ನ ಮಗಳಿದ್ದಂತೆ ಇದ್ದಂತೆ ಎಂದು  ಧಮ್ಕಿ ಹಾಕಿದ್ದ.

ಕೊಲೆಯಾದ ದಿನ ಭಾನುವಾರ ಮಧ್ಯಾಹ್ನ 12-30 ಕ್ಕೆ ಮನೆಯ ಒಳಗಿಂದ ಬಂದ ಗೋಪಿ ಕಾವ್ಯ ಅಕ್ಕ ಎಲ್ಲಿ ಎಂದಿದಕ್ಕೆ ಒಳಗೆ ಮಲಗಿದ್ದಾಳೆ ಎಂದು ಹೇಳಿ ಹೊರಗೆ ಹೋಗಿದ್ದ. ಮನೆಯ ಒಳಗೆ 23 ವರ್ಷದ ಚಂದನ ಬಾಯಿಯಲ್ಲಿ ರಕ್ತ ಕಾರಿಕೊಂಡು ಅಸುನೀಗಿದ್ದಳು. 

ಸುಮಾರು ನಾಲ್ಕು ವರ್ಷದ ಹಿಂದೆ ಪಂಡರಹಳ್ಳಿ ಗೋಪಿ ಮತ್ತು ಡಿಬಿ ಹಳ್ಳಿಯ ಚಂದನ ಬಾಯಿ ಪ್ರೀತಿಸಿ ಮದುವೆಯಾಗಿದ್ದರು. ಡಿಬಿಹಳ್ಳಿಯಲ್ಲಿ 7 ನೇ ತರಗತಿ ಮಾತ್ರ ಇದ್ದುದ್ದರಿಂದ 8 ನೇ ತರಗತಿಗೆ ಸೇರಲು ಚಂದನ ಬಾಯಿ ತಮ್ಮ ಗ್ರಾಮದಿಂದ ಎರಡೂವರೆ ಕಿಮಿ ದೂರ ಇರುವ ಕಲ್ಲಿಹಾಳ್ ಗೆ ಹೋಗಿ ಬರುತ್ತಿದ್ದಳು. SSLC ಗೆ ಬಂದ ಚಂದನಬಾಯಿಯನ್ನ ಶಾಲೆಗೆ ಹೋಗುವಾಗಲೆ ಗೋಪಿ ಬೆನ್ನು ಬಿದ್ದಿದ್ದ. 

ಸೈಕಲ್ ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ಚಂದನಳನ್ನ ಗೋಪಿ ಪರಿಚಯ ಮಾಡಿಕೊಂಡು ಅವಳನ್ನ ಹಿಂಬಾಲಿಸುವುದು, ಪ್ರೀತಿಸುವಂತೆ ಕಾಟಕೊಡುತ್ತಿದ್ದ. ಗೋಪಿ ತನ್ನ ತಂದೆ ಮತ್ತುಸಹೋದರನ ಜೊತೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಪ್ರೀತಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದ. ಗೋಪಿ ಮಾಡುತ್ತಿದ್ದ ಕ್ವಾಟ್ಲೆಯನ್ನಲ್ಲಾ ಮನೆಯಲ್ಲಿ ಹೇಳಿದ್ದರಿಂದ ಚಂದನಬಾಯಿಯ ಪೋಷಕರು ಶಾಲೆಯನ್ನೆ ಬಿಡಿಸಿ ಮನೆಯಲ್ಲಿ ಕೂರಿಸಿಕೊಂಡಿದ್ದರು. 

ಒಂದು ದಿನ ಗೋಪಿ ಚಂದನಳನ್ನ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಮನೆಯವರ ವಿರುದ್ಧ ಮದುವೆಯಾದರೂ ಪೋಷಕರು ಠಾಣೆಗೆ ದೂರು ನೀಡಿರಲಿಲ್ಲ. ಎರಡು ವರ್ಷಗಳ ಅಂತರದಲ್ಲಿ ಇಬ್ಬರು ಮಕ್ಕಳನ್ನ ಈ ಜೋಡಿ ಪಡೆದಿತ್ತು. ಯಾವಾಗ ಚಂದನ ಎರಡನೇ ಮಗು ಬಾಣಂತನಕ್ಕೆ ತಾಯಿ ಮನೆಗೆ ಹೋಗಿ ಬರುವುದರಲ್ಲಿ ಗೋಪಿ ಎದೆಯ ಮೇಲೆ ಚಂದನಳ ಸಹೋದರಿ ಕಾವ್ಯಳ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದ.

ಗೋಪಿಯ ರಂಗಿನ ಆಟವನ್ನ ಚಂದನ ಪ್ರಶ್ನಿಸಿದ್ದಕ್ಕೆ ಅವಳು ನನ್ನ ಮಗಳಿದ್ದಂತೆ. ಮಗಳ ಹೆಸರು ಹಾಕಿಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ. ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು ಎಂದು ಪತ್ನಿಯ ವಿರುದ್ಧ ಆವಾಜ್ ಹಾಕಿಸಿದ್ದ. 15 ದಿನಗಳ ಹಿಂದೆ ಮೊಮ್ಮಗುವಿನ ಕಾಲಿಗೆ ಗಾಯವಾಗಿದ್ದಕ್ಕೆ ಚಂದನಳ ತವರು ಕುಟುಂಬ ಪಂಡರಹಳ್ಳಿಯಲ್ಲಿರುವ ಅಳಿಯನ ಮನೆಗೆಬಂದು ನೆಲಸಿತ್ತು. 

ಜನವರಿ11 ರಂದು ಪತ್ನಿಯ ಜೊತೆ ಜಗಳವಾಡಿದ್ದ ಗೋಪಿ ಎಲ್ಲರೂ ಮನೆಯಲ್ಲಿಲ್ಲದ ವೇಳೆ ಕುತ್ತಿಗೆ ಹಿಸುಕಿ ಪತ್ನಿಯನ್ನ ಅಡ್ಡಡ್ಡ ಮಲಗಿಸಿ ಹೊರ ನಡೆದಿದ್ದ. ಕೂಗಿಕೊಂಡು ಬಂದ ಕಾರಣ ಅದೇ ಗೋಪಿ ಪತ್ನಿಯನ್ನ ಕರೆದುಕೊಂಡು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಂದನ ಕೊನೆ ಉಸಿರು ಎಳೆದಿದ್ದಳು. ಹೀಗೆ ಪತ್ನಿಯನ್ನ ಪ್ರೀತಿಸಿ ಬಯಸಿ ಮದುವೆಯಾದರೂ ಸಂಸಾರದ ಜಂಜಾಟದಲ್ಲಿ ಪತಿಯೊಬ್ಬ ವೈಫಲ್ಯ ಕಂಡ ಮತ್ತೊಂದು ಉದಾಹರಣೆ ಸೇರಿಕೊಂಡಿದೆ. 

Gopi, who had married for love, had strangled his wife and made her lie down on her side

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close