ಭದ್ರಾವತಿ-ಕರಡಿ ದಾಳಿ-ಇಲಾಖೆಗೆ ಮಾಹಿತಿ ಇಲ್ಲ- Bhadravati-bear attack-department has no information

SUDDILIVE || SHIVAMOGGA

ಭದ್ರಾವತಿ-ಕರಡಿ ದಾಳಿ-ಇಲಾಖೆಗೆ ಮಾಹಿತಿ ಇಲ್ಲ-  Bhadravati-bear attack-department has no information   

Bhadravathi, bearattack
ಸಾಂಧರ್ಭಿಕ ಚಿತ್ರ


ಅರೆ ಮಲೆನಾಡಿನ. ಭಾಗದಲ್ಲಿ ಮನುಷ್ಯ ಹಾಗೂ ವನ್ಯ ಜೀವಿಗಳ ಸಂಘರ್ಷ ಮುಂದುವರೆದಿದೆ. ಸಂಘರ್ಷದಲ್ಲಿ ವ್ಯಕ್ತಿಯೊಬ್ಬನಿಗೆ ಗಂಭೀರ ಗಾಯವಾಗಿದ್ದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಉಕ್ಕುಂದದಲ್ಲಿ ಕರಡಿಯೊಂದು ದಾಳಿ ನಡೆಸಿದೆ.  ದಾಳಿಯಲ್ಲಿ 54 ವರ್ಷದ ವ್ಯಕ್ತಿಗೆ ಗಾಯಗಳಾಗಿವೆ. ತಲೆ ಹಾಗೂ ಕಿವಿಯ ಮೇಲ್ಭಾಗದಲ್ಲಿ ಗಾಯಗಳಾಗಿವೆ.

ದಾಳಿಗೊಳಗಾದ ವ್ಯಕ್ತಿಯನ್ನ ದೇವರಾಜ್ ಬಿನ್ ಗಿರಿಯಪ್ಪ (54) ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಚ್ಚರಿ ಎಂದರೆ ಕರಡಿ ದಾಳಿ ನಡೆದಿರುವ ಬಗ್ಗೆ ಭದ್ರಾವತಿ ಅರಣ್ಯ ಇಲಾಖೆ ವನ್ಯ ಜೀವಿ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿರುವುದು ಕುತೂಹಲ ಮೂಡಿಸಿದೆ. 


ಈ ದಾಳಿ ನಿನ್ನೆ ರಾತ್ರಿ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಆಸ್ಪತ್ರೆಯಲ್ಲಿ ಕರಡಿ ದಾಳಿಗೊಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆ ಪಕ್ಕದಲ್ಲಿಯೇ ಇರುವ ಅಡಿಕೆ ತೋಟದಲ್ಲಿ ನೀರು ಕಟ್ಟಲು ನಿನ್ನೆ ರಾತ್ರಿ ದೇವರಾಜ್ ಹೋಗಿದ್ದಾಗ ಕರಡಿ ದಾಳಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ. 

Bhadravati-bear attack-department has no information

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close