ಎಸ್ಪಿ ವಿರುದ್ಧದ ಕ್ರಮವನ್ನ ಸಮರ್ಥಿಸಿಕೊಂಡ ಸಚಿವ ಜಾರಕಿಹೊಳೆ- Minister Jarkihole defends action against SP

SUDDILIVE ||SHIVAMOGGA

ಎಸ್ಪಿ ವಿರುದ್ಧದ ಕ್ರಮವನ್ನ ಸಮರ್ಥಿಸಿಕೊಂಡ ಸಚಿವ ಜಾರಕಿಹೊಳೆ- Minister Jarkihole defends action against SP   

Sathish, jarakiholi


ಶಿವಮೊಗ್ಗದಲ್ಲಿ ವಾಲ್ಮೀಕಿ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ ಎಂದು  ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಸಿಎಂ ಎತ್ತುವ ವಿಚಾರದಲ್ಲಿ ಸಿಎಂ ಬದಲಾವಣೆ ವಿಚಾರವು ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ದಿಲ್ಲಿಯ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಆದರೂ ನಾನು ಕಾದು ನೋಡುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಅದು ದೊಡ್ಡ ಮ್ಯಾಚ್ ಎಂದರು

ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಸಚಿವರು, ಈ ವಿಷಯದಲ್ಲಿ ಅಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಹಾಗಾಗಿ ಅಲ್ಲಿಯ ಎಸ್ಪಿಯ ವಿರುದ್ಧ ಕ್ರಮ ಜರುಗಿಸಲಾಗಿದೆ.ಸರ್ಕಾರದ ಈ ನಿರ್ಧಾರ ಸರಿಯಾಗಿ ಇದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಲ್ಲಿನ ಎಸ್ ಪಿ ವಿಫಲ ಆಗಿದ್ದಾರೆ ಎಂದರು.

ಈ ಬಗ್ಗೆ ಅಲ್ಲಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ. ಹಾಗಾಗಿ ಸಿಬಿಐ ತನಿಖೆಯ ಅಗತ್ಯ ಕಂಡು ಬರುವುದಿಲ್ಲ. ಈಗ ವಾತಾವರಣ ತಿಳಿಯಾಗಿದೆ ಎಂದರು.

ನರೇಗಾ ವಿಚಾರದಲ್ಲಿ ಹೋರಾಟ

ನರೇಗಾ ಯೋಜನೆಯ ಹೆಸರು ಬದಲಾವಣೆ ವಿಚಾರದಲ್ಲೂ ಪ್ರತಿಕ್ರಿಯಿಸಿದ ಜಾರಕಿಹೊಳಿ ಈ ವಿಷಯದಲ್ಲಿ ರಾಜ್ಯ ಸರ್ಕಾರ ಹೋರಾಟ ಮುಂದುವರಿಸಲಿದೆ. ಏಕೆಂದರೆ ಯೋಜನೆಯ ಅಡಿ ಕೆಲಸದ ದಿನಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ

ಅಷ್ಟೇ ಅಲ್ಲ ಯಾವ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬುದನ್ನು ದಿಲ್ಲಿಯಲ್ಲಿ ಕುಳಿತು ನಿರ್ಧರಿಸಲಾಗುತ್ತದೆ. ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ ಹಾಗಾಗಿ ಕೇಂದ್ರದ ಈ ನಿರ್ಧಾರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ

ಇವಿಎಂ ಬಗ್ಗೆ ಅರಿವು ಮೂಡಿಸಲಾಗಿವುದು


ರಾಜ್ಯದಲ್ಲಿ ಇವಿಎಂ ಬಳಕೆಯ ಬಗ್ಗೆ ಜನರು ತೃಪ್ತಿ ವ್ಯಕ್ತಪಡಿಸಿರುವ ವಿಚಾರದಲ್ಲಿ ನಮ್ಮ ಪಕ್ಷ ಹೇಳುತ್ತಿರುವ ವಿಷಯವನ್ನು ಜನರು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿ ಜನತೆಗೆ ಈ ವಿಷಯದಲ್ಲಿ ಇನ್ನಷ್ಟು ಅರಿವನ್ನು ಮೂಡಿಸುವ ಅಗತ್ಯ ಕಾಣುತ್ತಿದೆ ಎಂದ ಸತೀಶ್ ಜಾರಕಿಹೊಳಿ

Minister Jarkihole defends action against SP   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close