ದರೋಡೆಗೆ ಹೊಂಚು ಹಾಕಿದವರಿಗೆ ಶಿಕ್ಷೆ ಪ್ರಕಟ-Punishment announced for those who set up an ambush for robbery

SUDDILIVE || SHIVAMOGGA

ದರೋಡೆಗೆ ಹೊಂಚು ಹಾಕಿದವರಿಗೆ ಶಿಕ್ಷೆ ಪ್ರಕಟ-Punishment announced for those who set up an ambush for robbery    

Punishnent, announced


ಭದ್ರಾವತಿಯ ಗೋಂದಿ ಕೈಮರದಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಐವರು ಆರೋಪಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡವಿಧಿಸಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಿನಾಂಕ: 01-02-2019 ರಂದು ರಾತ್ರಿ ಸಮಯದಲ್ಲಿ ಗೋಂದಿ ಕೈಮರದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಿದ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ, 5 ಜನ ಆರೋಪಿತರು ಮರದದೊಣ್ಣೆ, ಕಬ್ಬಿಣದ ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗಿ ಬರುತ್ತಿದ್ದ ವಾಹನಗಳನ್ನು ಅಡ್ಡಹಾಕಲು ಪ್ರಯತ್ನಿಸುತ್ತಿದ್ದರು. 

ನಂತರ ಅವರನ್ನು ಹಿಡಿದುಕೊಳ್ಳಲು ದಾಳಿ ಮಾಡಿದ್ದು, ಅದರಲ್ಲಿ ಒಬ್ಬ ಓಡಿ ಹೋಗಿದ್ದು,ಉಳಿದ ಆರೋಪಿತರನ್ನು ಹಿಡಿದುಕೊಂಡು ವಿಚಾರಿಸಲಾಗಿ ದರೊಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ತಿಳಿದು ಬಂದಿತ್ತು. ದೊಣ್ಣೆ, ಬಿಳಿ ಪೊಟ್ಟಣ ಕಟ್ಟಿ ಇಟ್ಟುಕೊಂಡಿದ್ದ ಕಾರದ ಪುಡಿ, ಕಬ್ಬಿಣದ ಚಾಕು, ಸ್ಟೀಲ್ ರಾಡ್, ಮರದ ದೊಣ್ಣೆಯನ್ನು ವಶಪಡಿಸಿಕೊಂಡು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಹುಚ್ಚಪ್ಪ ಎಎಸ್ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ತೀರ್ಪು ಪ್ರಕಟಿಸಿದ್ದಾರೆ.  

ಆರೋಪಿತರಾದ  ಎ1) ಇಮ್ರಾನ್ ಷರೀಫ್, 33 ವರ್ಷ, ವಾಸ 1 ನೇ ತಿರುವು ಟಿಪ್ಪು ನಗರ ಶಿವಮೊಗ್ಗ. ಎ2) ಅಬೀದ್ ಖಾನ್, 35 ವರ್ಷ, ವಾಸ ಕಡೇಕಲ್, ಶಿವಮೊಗ್ಗ. ಎ3) ಮುಜಾಹಿದ್, 40 ವರ್ಷ, ವಾಸ ಕಡೇಕಲ್ಲು ಶಿವಮೊಗ್ಗ.  ಎ4) ಹನೀಫುಲ್ಲಾ ಖಾನ್, 22 ವರ್ಷ, ವಾಸ 2 ನೇ ತಿರುವು, ಟಿಪ್ಪು ನಗರ ಶಿವಮೊಗ್ಗ. ಎ5) ನಸ್ರುಲ್ಲಾ, 29 ವರ್ಷ , ವಾಸ ಕಡೇಕಲ್ಲು ಶಿವಮೊಗ್ಗ ರವರಿಗೆ ಕಲಂ 399 ಐಪಿಸಿ ಕಾಯಿದೆಗೆ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂ ದಂಡ ತಪ್ಪಿದ್ದಲ್ಲಿ 5 ತಿಂಗಳು ಸಾದಾ ಸೆರೆವಾಸ, ಕಲಂ 402 ಐಪಿಸಿ ಕಾಯಿದೆಗೆ 7 ವರ್ಷ ಕಠಿಣ ಸಜೆ ಮತ್ತು ತಲಾ 30,000/- ರೂ ದಂಡವನ್ನು ಪಾವತಿಸಬೇಕು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಿದ್ದಾರೆ. 

Punishment announced for those who set up an ambush for robbery

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close