ಬಸ್ ನ ಟಯರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವು-Biker dies after bus tire explodes

 SUDDILIVE || BHADRAVATHI

ಬಸ್ ನ ಟಯರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವು-Biker dies after bus tire explodes    

Biker, explodes


ಚಲಿಸುತ್ತಿರುವ ಖಾಸಗಿ ಬಸ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ಬಸ್ ನ ಪಕ್ಕದಲ್ಲಿ ಚಲಿಸುತ್ತಿದ್ದ ಬೈಕ್ ಚಲಾಯಿಸುತ್ತಿದ್ದ ಸವಾರನ ತಲೆಗೆ ಬಸ್ ನ ಕಬ್ಬಿಣದ ವಸ್ತು ತಗುಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಬಿಆರ್ ಪಿಯ ಹೆಚ್ ಕೆ ಜಂಕ್ಷನ್ ನಲ್ಲಿ ನಡೆದಿದೆ.

ಭದ್ರಾವತಿಯ ಕಣಗಲಸರದಿಂದ ರಂಗೇನಹಳ್ಳಿ ಆಸ್ಪತ್ರೆಗೆ ಕೂಲಿ ಮಹಿಳೆಯನ್ನ ಬೈಕ್ ನಲ್ಲಿ  ಕರೆದುಕೊಂಡು ಬೀರು (42) ಎಂಬುವರು  ಕರೆದುಕೊಂಡು ಹೋಗುತ್ತಿದ್ದರು. ಬೀರು ಅವರು ಹೆಚ್ ಕೆ ಜಂಕ್ಷನ್ ನ ಅಂಗಳ ಪರಮೇಶ್ವರಿ ದೇವಸ್ಥಾನದ ಬಳಿ ಬರುವಾಗ ಪಕ್ಷದಲ್ಲಿ ಹಾದು ಹೋಗುತ್ತಿದ್ದ ಕೆಎ 20 ಎಎ 7676 ಕ್ರಮ ಸಂಖ್ಯೆ ಬಸ್ ಸೈಡು ಹಾಕಿದೆ. 

ಬೈಕ್ ನಿಂದ ಮುಂದೆ ಹೋಗುತ್ತಿದ್ದಂತೆ ಬಸ್ ನ ಟಯರ್ ಬ್ಲಾಸ್ಟ್ ಆಗಿದೆ. ಚಲಿಸುತ್ತಿದ್ದ ಬಸ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ಕಬ್ಬಿಣದ ಚೂರೊಂದು ಬೈಕ್ ಚಲಿಸುತ್ತಿದ್ದ ಬೀರುವಿನ ತಲೆಗೆ ಹೊಡೆತಬಿದ್ದಿದ್ದ ಬೈಕ್ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳೆ ಮತ್ತು ಬೀರು ಕೆಳಕ್ಕೆ ಬಿದ್ದಿದ್ದಾರೆ. 

ತಕ್ಷಣವೇ ಇವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿತ್ತು. ಮೆಗ್ಗಾನ್ ನಲ್ಲಿ ಲಕ್ಷ್ಮೀ ಅವರು ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಬೀರುವನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ನಂತರ ಮಣಿಪಾಲಿಗೆ ಕರೆದೊಯ್ಯಲಾಗಿದೆ. ನಂತರ ಮತ್ತೆ ಮೆಗ್ಗಾನ್ ಗೆ ಕರೆದು ತರಲಾಗಿದೆ ನಿನ್ನೆ ಬೀರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 

Biker dies after bus tire explodes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close