ನೊಣಬೂರು ಗ್ರಾಂ ಪಂ ವ್ಯಾಪ್ತಿಯಲ್ಲಿ ಚಿರತೆಯ ಮರಿ ಪ್ರತ್ಯಕ್ಷ - ರಕ್ಷಣೆ-Leopard cub sighted in Nonaburu village limits - protection

SUDDILIVE || THIRTHAHALLI

ನೊಣಬೂರು ಗ್ರಾಂ ಪಂ ವ್ಯಾಪ್ತಿಯಲ್ಲಿ ಚಿರತೆಯ ಮರಿ ಪ್ರತ್ಯಕ್ಷ - ರಕ್ಷಣೆ-Leopard cub sighted in Nonaburu village limits - protection

Leopard, sighted


ನೊಣಬೂರು ಗ್ರಾಮದ ಅಂಬುತೀರ್ಥ ಅರಣ್ಯ ಪ್ರದೇಶದಲ್ಲಿ ಅತಂತ್ರವಾಗಿದ್ದ ಚಿರತೆಮರಿಯನ್ನು  ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಸೇರಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಆಹಾರದ ಅಭಾವದಿಂದ ಕೂಗುತ್ತಿದ್ದ ಮರಿಯು ನಾಯಿಗಳ ದಾಳಿಗೆ ತುತ್ತಾಗುವ ಸಾಧ್ಯತೆಯಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಮರಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯೊಂದು ಪ್ರಾಣಿಗಳಿಗೆ ಹೊಂಚು ಹಾಕುತ್ತಿತ್ತು. ಒಂದೆರಡು ಹಸುಗಳನ್ನು ಬೇಟೆಯಾಡಿರುವ ಶಂಕೆಯೂ ಇತ್ತು.

ಅಧಿಕಾರಿ ವಿಕ್ರಂ ಚೇತನ್ ನೇತೃತ್ವದಲ್ಲಿ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಈಗ ಮರಿ ರಕ್ಷಣೆಯಾಗಿದೆ. ಆದರೆ ಮರಿಯನ್ನು ಕಳೆದುಕೊಂಡ ತಾಯಿ ಚಿರತೆ ಗ್ರಾಮದ ಸುತ್ತಮುತ್ತಲೇ ಹುಡುಕಾಟ ನಡೆಸುವ ಸಾಧ್ಯತೆ ಇದೆ. ಸಾರ್ವಜನಿಕರು ಜಾಗರೂಕರಾಗಿ ಇರುವಂತೆ ಅರಣ್ಯ ಇಲಾಖೆಯು ಎಚ್ಚರಿಕೆ ನೀಡಿದೆ.

Leopard cub sighted in Nonaburu village limits - protection

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close