ಶತಾಯುಷಿ ಸುಶೀಲಮ್ಮ ನಿಧನ- Centenarian Sushilamma passes away

SUDDILIVE || SHIVAMOGGA

ಶತಾಯುಷಿ ಸುಶೀಲಮ್ಮ ನಿಧನ- Centenarian Sushilamma passes away   

Centenaran, sushilamma

ಸ್ವಾತಂತ್ರ ಹೋರಾಟಗಾರರು, ಶಿವಮೊಗ್ಗ ಕ್ಷೇತ್ರದ ಪ್ರಥಮ ಶಾಸಕರು ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಸ್ಥಾಪನಾ ಸದಸ್ಯರಾಗಿದ್ದ ಎಸ್.ಆರ್.ನಾಗಪ್ಪಶೆಟ್ಟಿ ಅವರ ಪತ್ನಿ ಶತಾಯುಷಿ ಸುಶೀಲಮ್ಮ (104) ಶನಿವಾರ ವಯೋಸಹಜ‌ ಅನಾರೋಗ್ಯದಿಂದ ಗಾಜನೂರಿನ ಶರಣ್ಯ ಆರೈಕೆ ಕೇಂದ್ರದಲ್ಲಿ ನಿಧನರಾದರು.


ಸ್ವಾತಂತ್ರ ಹೋರಾಟದಲ್ಲಿ ಪತಿಯೊಂದಿಗೆ ಜೊತೆಯಾಗಿದ್ದ ಸುಶೀಲಮ್ಮ ರವರು, ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಜೀವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್, ಶಾಸಕ‌ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಆರ್.ಕೆ.ಸಿದ್ದರಾಮಣ್ಣ, ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ, ಡಿ.ಜಿ.ರಮೇಶ್, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಪಿ.ಮೈಲಾರಪ್ಪ, ಅನಂತದತ್ತ ಸೇರಿದಂತೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು, ನೌಕರರ ವೃಂದ ಹಾಗೂ ಕುಟುಂಬ ವರ್ಗ ಅಂತಿಮ ದರ್ಶನ ಪಡೆದರು.

Centenarian Sushilamma passes away   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close