ಮಿಳಘಟ್ಟದ ಬೇಕರಿ ಮೇಲೆ ಎಸಿ ಸತ್ಯನಾರಾಯಣ ನೇತೃತ್ವದಲ್ಲಿ ದಿಡೀರ್ ದಾಳಿ- Sudden raid led by AC Satyanarayana on a bakery in Milaghatta

 SUDDILIVE || SHIVAMOGGA

ಮಿಳಘಟ್ಟದ ಬೇಕರಿ ಮೇಲೆ ಎಸಿ ಸತ್ಯನಾರಾಯಣ ನೇತೃತ್ವದಲ್ಲಿ ದಿಡೀರ್ ದಾಳಿ-  Sudden raid led by AC Satyanarayana on a bakery in Milaghatta  

Sudden, raid


ಉಪವಿಭಾಗಾಧಿಕಾರಿ ಜಿ.ಎಸ್ ಸತ್ಯನಾರಾಯಣ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಬೇಕರಿಗಳ ಮೇಲಿನ ದಾಳಿ ಮುಂದುವರೆದಿದೆ. ಸ್ವಚ್ಛತೆ, ಮತ್ತು ಕೇಕು ಬ್ರೆಡ್ ಗಳಿಗೆ ಬಳಸುವ ವಸ್ತುಗಳ ಬಗ್ಗೆ ಗುಣಮಟ್ಟದ ವಸ್ತುಗಳ ಬಳಕೆ ಮಾಡುವಂತೆ ಅಧಿಕಾರಿಗಳು ನೋಟೀಸ್ ನೀಡಿ ಬಂದಿದ್ದಾರೆ.

ಇಂದು ಸಂಜೆ ಮಿಳಘಟ್ಟದ ಮಂಜುನಾಥ ಬಡಾವಣೆಯ 8 ನೇ ತಿರುವಿನಲ್ಲಿರುವ ಆಕಾಶ್ ಬ್ರೆಡ್ ಅಂಡ್  ಬೇಕರಿಗೆ ಭೇಟಿ ನೀಡಿರುವ ತಂಡ ಪರಿಶೀಲನೆ ನಡೆಸಿವೆ. ಈ ರೀತಿಯ ದಾಳಿ ಇದೇನೋ ಹೊಸದಲ್ಲ. ಈ ಹಿಂದೆ, ಅಧಿಕಾರಿಗಳು ಹಲವು ಬೇಕರಿಗಳನ್ನ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಆಕಾಶ್ ಬೇಕರಿಯಲ್ಲಿ ಪರವಾನಗಿಯಿದ್ದು, ಅಲ್ಲಿ ಬಳಸುವ ಈಸ್ಟ್ ಓಲ್ಡ್ ಸ್ಟಾಕ್ ಆಗಿತ್ತು. ಅದನ್ನ ಅಧಿಕಾರಿಗಳು ತೆಗೆಸಿ ಒಂದು ವಾರದಲ್ಲಿ ಬೇಕರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮತ್ತು ಬಳಸುವ ವಸ್ತುಗಳನ್ನ‌ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆನೂ ಎಚ್ಚರಿಕೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ  ತಾಲೂಕು ಆರೋಗ್ಯ ಅಧಿಕಾರಿರವರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಸಿಬ್ಬಂದಿರವರು ಉಪಸ್ಥಿತರಿದ್ದರು.

Sudden raid led by AC Satyanarayana on a bakery in Milaghatta

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close