33 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದವನ ಪ್ರಕರಣ ಮುಕ್ತಾವಾಗಿದ್ದು ಹೇಗೆ?How is it that a man who has been appearing in court for 33 years is still acquitted?

 SUDDILIVE || SHIVAMOGGA

33 ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದವನ ಪ್ರಕರಣ ಮುಕ್ತಾವಾಗಿದ್ದು ಹೇಗೆ?How is it that a man who has been appearing in court for 33 years is still acquitted?    

Case, accquitted


33 ವರ್ಷಗಳ ಹಿಂದೆ ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನ‌ ಸಾಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಸೂಚಿಸಿದ್ದ ದಂಡವನ್ನ ಭರ್ತಿ ಮಾಡಿದ ಹಿನ್ನಲೆಯಲ್ಲಿ ಪ್ರಕರಣ ಮುಕ್ತಾಗೊಂಡಿದೆ. 

ಸಾಗರ ಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ  29/1985 ಕಲಂ 448, 323 ಐ.ಪಿ.ಸಿ ಪ್ರಕರಣದ ಆರೋಪಿ ಕೆ. ಪಿ. ಮಯಡ್ಡಿ, ( 1985 ರಲ್ಲಿ 18 ವರ್ಷ, ಪ್ರಸ್ತುತ 60 ವರ್ಷ) ವಾಸ ತೊಬ್ಬಟ್ಟು ಗ್ರಾಮ, ಮಂಗಳೂರು ಈತನು ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 33 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ,  

ಮಾನ್ಯ PCJ & JMFC   ನ್ಯಾಯಾಲಯ ಸಾಗರದ  LPR ಪ್ರಕರಣ 20/1993 C.C. ಸಂಖ್ಯೆ  350/89 ರಲ್ಲಿ ಆರೋಪಿ ವಿರುದ್ಧ ಘನ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ. ಸದರಿ ಆರೋಪಿತನ ಪತ್ತೆ ಬಗ್ಗೆ ಡಿ.ವೈ.ಎಸ್.ಪಿ ಸಾಗರ ಪೊಲೀಸ್ ಉಪ ವಿಭಾಗ ರವರ ನೇತೃತ್ವದಲ್ಲಿ,   ಸಾಗರ ಪೇಟೆ ಪೊಲೀಸ್ ಠಾಣೆಯ  ASI ಪರಶುರಾಮ್, HC ರತ್ನಾಕರ, HC ತಾರಾನಾಥ HC ಶೇಕ್ ಫೈರೋಜ್ ಅಹಮದ್, PC ವಿಶ್ವಾನಾಥ, PC ರಾಮನ ಗೌಡ ಪಾಟೀಲ್ ಮತ್ತು PC ಜಗದೀಶ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ತಂಡವು ಆರೋಪಿ ಕೆ. ಪಿ. ಮಯಡ್ಡಿಯನ್ನು ಪತ್ತೆ ಮಾಡಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ್ದು, ಆರೋಪಿ ತಪ್ಪು ಒಪ್ಪಿಕೊಂಡು ದಂಡ ಕಟ್ಟಿದ ಕಾರಣ ಘನ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯ ಮಾಡಿರುತ್ತದೆ.

How is it that a man who has been appearing in court for 33 years is still acquitted?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close