ಕಣ್ಣೀರು ಹಾಕಿ ಮಾತನಾಡಿ ಮೋಹನ್, ಎರಡೇ ಮಾತನಾಡಿದ ಅಶ್ವಿನಿ ರಾಜ್ ಕುಮಾರ್-Mohan spoke through tears, Ashwini Rajkumar spoke only once

 SUDDILIVE || BHADRAVATHI

ಕಣ್ಣೀರು ಹಾಕಿ ಮಾತನಾಡಿ ಮೋಹನ್, ಎರಡೇ ಮಾತನಾಡಿದ ಅಶ್ವಿನಿ ರಾಜ್ ಕುಮಾರ್-Mohan spoke through tears, Ashwini Rajkumar spoke only once           

Mohan, Ashwini


ಭದ್ರಾವತಿಯ ರೈಲ್ವೆ ನಿಲ್ದಾಣದ ಮುಂದೆ ನಟ ದಿ.ಪುನೀತ್ ರಾಜ್ ಕುಮಾರ್ ಮತ್ತು ಡಾ.ರಾಜ್ ಕುಮಾರ್ ಅವರ ದೇಗುಲ ಮತ್ತು ಕಂಚಿನ ಪ್ರತಿಮೆಯನ್ನ ನಟನ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದರು. 

ಕಣ್ಣೀರಿನಲ್ಲೇ ಭಾಷಣ ಮಾತನಾಡಿದ ನಗರ ಸಭೆ ಸದಸ್ಯ ಮೋಹನ್, ಡಾ. ಪುನೀತ್ ನಮ್ಮನ್ನೆಲ್ಲ ಅಗಲಿರಬಹುದು ಅವರು 6.5 ಕೋಟಿ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ. ಭದ್ರಾವತಿಯಲ್ಲಿ ಚಾಮೇಗೌಡ ಏರಿಯಾದಲ್ಲಿ ಭದ್ರಾವತಿಯಲ್ಲಿ ಅಭಿಮಾನಿಗಳಿದ್ದಾರೆ. 

50 ಲಕ್ಷ ರೂ ಯೋಜನೆಯಾಗಿದೆ. ಕೋರ್ಟ್ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನೇಮಿಸಬೇಕು. ಡಾ.ರಾಜ್ ಕುಮಾರ್ ರಸ್ತೆಯಿದೆ. ಹಣ ಎಲ್ಲರೂ ಗಳಿಸುತ್ತಾರೆ. ಪುನೀತ್ ನಿಧನದ ವೇಳೆ ಅವರ ಸಾಧನೆ ಏನು ಆಯಿತು ಎಂಬುದು ಇಡೀ ರಾಜ್ಯಕ್ಕೆ ಮಾದರಿಯಾದರು. 

ಅವರ ಹೆಸರಿನಲ್ಲಿ ರಾಜ್ಯಾದ್ಯಂತ ವೃದ್ಧಾಶ್ರಮ, ಅನಾಥಾಶ್ರಮ ಮತ್ತು 4 ಸಾವಿರ ಮಕ್ಕಳು ಡಾ.ಪುನೀತ್ ರಾಜ್ ಕುಮಾರ್ ಅವರನ್ನ‌ ನೆನಪಿಸಿಕೊಳ್ಳಬೇಕು. ಅಶ್ವಿನಿ ರಾಜ್ಕುಮಾರ್ ಅವರ ಸಹೋದರಿ ಭದ್ರಾವತಿಯ ಸೊಸೆಯಾಗಿದ್ದಾರೆ ಹಾಗಾಗಿ ನೀವು ಭದ್ರಾವತಿಯ ಸಹೋದರಿ ಎಂದು ಭಾವುಕರಾದರು. 

ಭದ್ರಾವತಿಯಲ್ಲಿ ಅಪ್ಪು ಹೆಸರಿನಲ್ಲಿ ಜೀವಿಸುತ್ತಿದ್ದಾರೆ. ಅಂಗಡಿ ಹೋಟೆಲ್ ಗಳ ಹೆಸರು ಇಡಲಾಗಿದೆ. ಗ್ರಾಮಾಂತರ ಭಾಗದಲ್ಲಿ ಪುನೀತ್ ಹೆಸರಿನ ಸರ್ಕಲ್ ಇದೆ. ಇಡೀ ರಾಜ್ಯದಲ್ಲಿ ತಂದೆ ನತ್ತು ಮಗನ ಪುತ್ಥಳಿ ಇದೇ ಮೊದಲು ಭದ್ರಾವತಿಯಲ್ಲಿ ನಿರ್ಮಿಸಲಾಗಿದೆ ಎಂದರು. 

ಶಾಸಕ ಬಿಕೆ ಸಂಗಮೇಶ್ವರ್ ಮಾತನಾಡಿ, ರಾಜ್ಯ 7.5 ಕೋಟಿ ಜನರಿಗೆ ಪುನೀತ್ ಅಭಿಮಾನಿ ದೇವರಾಗಿದ್ದಾರೆ. ಭದ್ರಾವತಿಯಲ್ಲಿ ನಿರ್ಮಿಸಲಾಗಿರುವ ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರ ದೇಗುಲದಲ್ಲಿ ದಿನನಿತ್ಯ ದೇವರಿಗೆ ನಡೆಯುವ‌ಪೂಜಾಕಾರ್ಯ ನಡೆಯಲಿದೆ ಎಂದರು. 

ಭದ್ರಾವತಿ ಜನತೆಗೆ ಅನಂತ ಧನ್ಯವಾದವೆಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅಷ್ಟೇ ಮಾತನಾಡಿಸಿ ಸಭೀಕರ ಹಾಗೂ ಅಭಿಮಾನಿಗಳಿಗೆ ಹೆಚ್ಚು ಮಾತನಾಡದೆ ಭಾಷಣ ಮುಗಿಸಿದ್ದು ವಿಶೇಷವಾಗಿತ್ತು.

Mohan spoke through tears, Ashwini Rajkumar spoke only once

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close