ಮುಂದಿನ ಮುಖ್ಯಮಂತ್ರಿಯಾಗುವ ಬಗ್ಗೆ ಡಿಕೆಶಿಯ ಕಾಲೈತಸ್ಮೈನಮಃ ಜಪ-DKSHI Kalaitasmainamaha Japa about becoming the next Chief Minister

SUDDILIVE || SHIVAMOGGA

ಮುಂದಿನ ಮುಖ್ಯಮಂತ್ರಿಯಾಗುವ ಬಗ್ಗೆ ಡಿಕೆಶಿಯ ಕಾಲೈತಸ್ಮೈನಮಃ ಜಪ-DKSHI Kalaitasmainamaha Japa about becoming the next Chief Minister     

DKSHI, -Kalaitasmainamaha




ಎಲ್ಲಾದಕ್ಕೂ ಕಾಲ ಉತ್ತರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಭದ್ರಾವತಿಯ ವಿಐಎಸ್‌ ಎಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುರುವಾರ ಸಂಜೆ ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ಬಂದಿಳಿದಿದ್ದ ಅವರು ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾಯಕತ್ವದ ಬದಲಾವಣೆ ವಿಚಾರ ಕುರಿತ ಮಾಧ್ಯಮದವರ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸಲು ನಿರಾಕರಿಸಿದ ಅವರು, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎನ್ನುವ ಮೂಲಕ ಕುತೂಹಲಕ್ಕೆ ಮುನ್ನುಡಿ ಬರೆದಿದ್ದು ವಿಶೇಷ ಎನಿಸಿತು.

ಮಾಧ್ಯಮದವರ ಪ್ರಶ್ನೆಗೂ ಮುನ್ನ ಅವರು, ಶಿವಮೊಗ್ಗ ಭೇಟಿ ಕುರಿತು ಮಾತನಾಡಿದರು. ಬಹಳ ದಿನದ ನಂತರ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. 37 ವರ್ಷದ ನಂತರ ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ‌ ನಡೆಯತ್ತಿದೆ. ಕನಕಪುರದಲ್ಲಿ ಕನಕೋತ್ಸವ ನಡೆಯುತ್ತಿದೆ. ಹಾಗೆಯೇ ಅಧಿವೇಶನವೂ ನಡೆಯುತ್ತಿದೆ. ಈ ನಡುವೆಯೇ ಬಂದಿದ್ದೇನೆ.ಕನಕಪುರದಲ್ಲಿ ಕನಕೋತ್ಸವ ಬಹಳ ವಿಶೇಷವಾಗಿ ನಡೆಸಲಾಗುತ್ತಿದೆ.ಐದು ಗ್ಯಾರಂಟಿಗಳ ಮನೆಗೊಂದು ರಂಗೋಲಿ ಸ್ಪರ್ಧೆಯಲ್ಲಿ 73 ಸಾವಿರ ಜನ ಭಾಗಿಯಾಗಿದ್ದಾರೆ‌‌. 11 ಸಾವಿರ ಮುಸ್ಲಿಂ ಭಾಂದವರು ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 5 ಸಾವಿರ ಮಕ್ಕಳು ಚಿತ್ರಕಲಾ ಸ್ಪರ್ಧೆಯಾಗಿದ್ದಾರೆ‌ಂದು ವಿವರಿಸಿದರು.

ಆ ಬಳಿಕ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ, ಪಕ್ಷ ಒಂದು ತೀರ್ಮಾನದ ತೆಗೆದುಕೊಳ್ಳುತ್ತದೆ ಎಂದರು. ಇನ್ನು ಜಾರ್ಜ್‌ ರಾಜೀನಾಮೆ ನೀಡಲಿದ್ದಾರೆನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಜಾರ್ಜ್ ಬಹಳ ಹಿರಿಯರು ಬಹಳ ಜವಾಬ್ದಾರಿಯಿಂದ ಕೆಲಸ ಮಾಡುವವರು. ಮಾಧ್ಯಮದವರಿಂದಲೇ ನನಗೆ ಈ ಮಾಹಿತಿ ಬಂದಿದೆ. ವಿರೋಧ ಪಕ್ಷದವರು ಕೇವಲ ಆರೋಪ ಮಾಡುತ್ತಾರೆಎಂದರು. ಕಾರ್ಯಕರ್ತರು ಬಂದಾಗ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೇಳುವುದು ಸಹಜವಾಗಿರುತ್ತದೆ ಎಂದರು.

ಉದ್ಯೋಗ ಖಾತರಿ ಗಲಾಟೆ ಮತ್ತು ಸರ್ಕಾರ ನೀಡಿದ ಜಾಹೀರಾತು ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಮನರೇಗಾ ರಾಜ್ಯದ ಜನರಿಗೆ ಯಾವ ರೀತಿ ಅನುಕೂಲ ಆಗಿತ್ತು‌‌,  ಆ ಪ್ರಕಾರ ನಾವು ನಮ್ಮದೇ ರೀತಿಯಲ್ಲಿ  ಜಾಹೀರಾತು ನೀಡುತ್ತಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮನರೇಗಾದಲ್ಲಿ ರಾಜ್ಯಕ್ಕೆ ಪ್ರತಿ ವರ್ಷ 7 ಸಾವಿರ ಕೋಟಿ ರೂ ಕೇಂದ್ರದಿಂದ ಬರುತ್ತಿತ್ತು. ಉದ್ಯೋಗ ನೀಡುವ ಕುರಿತು ಪಂಚಾಯತಿ ಸದಸ್ಯರು ತೀರ್ಮಾನ ಮಾಡುತ್ತಿದ್ದರು. ಆದರೆ ಈಗ ಅವರ ಹಕ್ಕನ್ನು ಕೇಂದ್ರವು ಕಸಿದುಕೊಂಡಿದೆ. ನೀವಲ್ಲ ಈಗ ನಾವು ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಹೇಳುತ್ತಿದೆ. ಇದು ಹೇಗೆ ಎಂದು ಪ್ರಶ್ನಿಸಿದರು.

ಮನರೇಗಾದಲ್ಲಿ ವೈಯಕ್ತಿಕ ಕಾಮಗಾರಿಗಳು ಸಾಕಷ್ಟು ನಡೆಯುತ್ತಿದ್ದವು. ನನ್ನದೇ ಕ್ಷೇತ್ರದಲ್ಲಿ ನಾವು ಮನರೇಗಾದಲ್ಲಿ ಸಾಕಷ್ಟು ಕಾಮಗಾರಿ ಕೆಲಸ ಮಾಡಿದ್ದೇವೆ. ಅದರ ಬಗ್ಗೆ ಅನುಮಾನ ಪಟ್ಟರು. ಅವ್ಯವಹಾರ ಅಂತಲೂ ಹೇಳಿದರು. ಕೊನೆಗೆ ಆಗಿದ್ದೇನು, ಒಳ್ಳೆಯ ಕೆಲಸಕ್ಕೆ ನಮಗೆ ರಾಷ್ಟ್ರೀಯ ಪ್ರಶಸ್ತಿ ನೀಡಿದರು ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.

ಮನರೇಗಾ ಹೆಸರು ಬದಲಾಯಿಸಿ,  ಗಾಂಧೀಜಿ ಹೆಸರನ್ನು ತೆಗದು ಹಾಕಿದ್ದಾರೆ. ಇದರ ಕುರಿತು ಅಧಿವೇಶನದಲ್ಲಿ ಚೆರ್ಚೆ ನಡೆಯುತ್ತಿದೆ. ಮನರೇಗಾ ಜಾರಿ ಮಾಡಬೇಕೆಂದು ತೀರ್ಮಾನ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಅಲ್ಲದೆ ಪ್ರತಿ ಗ್ರಾಮ ಪಂಚಾಯತಿಗೂ ಗಾಂಧಿಜೀ ಹೆಸರನ್ನು ಹಾಕಬೇಕೆಂದು ಸೂಚಿಸಲಾಗಿದೆ. ಕೇಂದ್ರದವರು ಕೃಷಿ ಕೆಲಸ ಇರುವಾಗ ಕೆಲಸ‌ ಕೊಡಲ್ಲ ಎಂದು ಹೇಳಿದ್ದಾರೆ. ಇದು ಸರಿ ಅಲ್ಲ. ಕೇಂದ್ರ ಸರ್ಕಾರ ಈಗ ನೀಡಿರುವ ಕಾನೂನು ಮಾಡಿರುವುದು ಸರಿಯಲ್ಲ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಶೀಘ್ರವೇ ಸ್ಥಳೀಯ ಸಂಸ್ಥೆ ಚುನಾವಣೆ ನಾವು ನಡೆಸುತ್ತೇವೆ, ನಾಳೆ ನಾ‌ಡಿದ್ದು ಮೀಸಲಾತಿ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಾವು ಮಾಡುತ್ತಿವೆ ಎಂದರು. 

DKSHI Kalaitasmainamaha Japa about becoming the next Chief Minister

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close