ಜನಪ್ರತಿನಿಧಿಗಳು ಬುರುಡೆ ಬಿಡುವುದನ್ನ‌ನಿಲ್ಲಿಸಿ, ಕೆಲಸಮಾಡಿ- ತೀನಾಶ್ರೀ ಆಗ್ರಹ-Stop letting people's representatives down - Teenashree demands

 SUDDILIVE || SHIVAMOGGA

ಜನಪ್ರತಿನಿಧಿಗಳು ಬುರುಡೆ ಬಿಡುವುದನ್ನ‌ನಿಲ್ಲಿಸಿ ಕೆಲಸ ಮಾಡಿ- ತೀನಾಶ್ರೀ ಆಗ್ರಹ-Stop letting people's representatives down - Teenashree demands     

Teenashri, demands


ಶರಾವತಿ ಮುಳುಗಡೆ ಸಂತ್ರಸ್ತರ ಬವಣೆಯ ಬಗ್ಗೆ ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕರ ಶ್ರೀನಿವಾಸ್ ಇಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಸಂಸದರು ಸಚಿವ ಮಾಧವ ಬಂಗಾರಪ್ಪ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಯ ಕಾರ್ಯದರ್ಶಿಯವರಿಗೆ ತೆಗೆದುಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ಸಂಸದರು ಮತ್ತು ರಾಜ್ಯ ಸರ್ಕಾರದ ಮಧು ಬಂಗಾರಪ್ಪನವರು ಸುದ್ದಿಗೋಷ್ಠಿಯಲ್ಲಿ ಪಂಕಾನು ಕೊಂಕವಾಗಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಕೊನೆಯ ಹಂತಕ್ಕೆ ಬಂದಿದೆ ಎಂದು ಭಾಷಣ ದಲ್ಲಿ ಹೇಳುತ್ತಿದ್ದಾರೆಯೇ ವಿನಹ ಯಾವುದೋ ಸಹ ಅಂತಿಮ ತೀರ್ಮಾನಕ್ಕೆ ಬಂದಿಲ್ಲವೆಂದು ಸ್ಪಷ್ಟಪಡಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ 2024ನೇ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಕಾರ್ಯದರ್ಶಿ ಕೇಂದ್ರ ಸರ್ಕಾರದ ಕಾರ್ಯದರ್ಶಿ ಪರಸ್ಪರ ಕುಳಿತು ಮಾತನಾಡಿ ಶರವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಆದೇಶಿಸಿತ್ತು ಆದರೆ ಮೂಲವಾಗಿ ಜಿಲ್ಲಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಮಸ್ಯ ಬಗ್ಗೆ ಹರಿಸಲು ಗಂಭೀರವಾದ ಕ್ರಮ ಕೈಗೊಂಡೇ ಇಲ್ಲ ಎಂದು ಆಗ್ರಹಿಸಿದ್ದಾರೆ.

ಆದರೆ ಶರಾವತಿ ಮುಳುಗಡೆ ಸಂತ್ರಸ್ತರ ಗಂಭೀರ ವಿಚಾರದ ಬಗ್ಗೆ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳನ್ನು ವಿಚಾರಿಸಿದಾಗ ಜಿಲ್ಲಾಧಿಕಾರಿ ಕಚೇರಿಯಿಂದ ಡಿ ನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಣರಾಜ್ಯೋತ್ಸವದ ದಿನದಂದು ಸಚಿವ ಮಧು ಬಂಗಾರಪ್ಪನವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸದ್ಯದಲ್ಲಿ ಶರಾವತಿ ಮುಳುಗಡೆ ಸಂತರಸ್ಥರ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಶೀಘ್ರ ಕಳಿಸಲಾಗುವುದು ಎಂದಿದ್ದಾರೆ.

ಜಿಲ್ಲಾಧಿಕಾರಿಯಿಂದ ಅರಣ್ಯ ಇಲಾಖೆ ಸಿಸಿಎಫ್ ಕಚೇರಿಗೆ ಅಲ್ಲಿಂದ ಬೆಂಗಳೂರಿನ ಅರಣ್ಯ ಭವನಕ್ಕೆ ನಂತರ ಅರಣ್ಯ ಇಲಾಖೆ ಕಾರ್ಯದರ್ಶಿಯವರಿಗೆ ಅರಣ್ಯ ಇಲಾಖೆ ಕಾರ್ಯದರ್ಶಿಯಿಂದ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಗೆ ಆಗುವ ಸುಪ್ರೀಂಕೋರ್ಟಿಗೆ ಪ್ರಸ್ತಾವನೆ ಕಳುಹಿಸಿ ತೀರ್ಮಾನ ಆಗಬೇಕಿದೆ. ಕೆಪಿಸಿ ಲಿಂಗಂಕೆ ಅಣೆಕಟ್ಟು ಕಟ್ಟಲು ಭೂಸ್ವಾದವನ್ನು ಮಾಡಿಕೊಂಡ ಸಾವಿರಾರು ಎಕರೆ ಭೂಮಿಯನ್ನು ಇನ್ನು ಅಣೆಕಟ್ಟಿಗೆ ಅಥವಾ ಯೋಜನೆಗೆ ಯಾವುದೇ ರೀತಿ ಯಾಗಿ ಭೂಮಿಯನ್ನು ಬಳಸಿಕೊಂಡಿಲ್ಲ.

 ಆ ಪ್ರದೇಶಗಳಲ್ಲಿ ಮುಳುಗಡೆ ಸಂತ್ರಸ್ತರು ಹಾಗೂ ಭೂಹಿತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಕರ್ನಾಟಕ ಭೂಸ್ವಾಧೀನಕಾದೆ ಅಡಿಯಲ್ಲಿ ಯಾವುದೇ ರೈತರು ಭೂಮಾಲೀಕರ ಜಮೀನನ್ನು ಸರ್ಕಾರ ಯಾವುದೇ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡರೆ ಐದು ವರ್ಷದ ಒಳಗಾಗಿ ಭೂಮಿಯನ್ನು ಬಳಸಿಕೊಳ್ಳಬೇಕೆಂದು ಇದೆ, 

ಇಲ್ಲವಾದಲ್ಲಿ ಆ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ಕೊಡಬೇಕೆಂದು ಕಾಯ್ದೆಯಲ್ಲಿ ಇದ್ದರೂ ಸಹ ಯಾವುದೇ ಕ್ರಮ ಆಗಿಲ್ಲ. ಈ ಕುರಿತು ಕಾಗೋಡು ತಿಮ್ಮಪ್ಪನವರು ಸಚಿವರು ಇದ್ದಾಗ ಭೂಮಿ ಸರ್ವೆಗೆ ಆದೇಶ ಮಾಡಿದ್ದರು ಕೂಡಲೇ ಈ ಭೂಮಿ ಸರ್ವೆಯನ್ನು ಮಾಡಿಸಬೇಕು ಎಂದು ಅವರು  ಆಗ್ರಹಿಸಿದ್ದಾರೆ.

Stop letting people's representatives down - Teenashree demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close