ಬಟ್ಟೆ ಅಂಗಡಿ ಮತ್ತು ಡೈಮೆಂಡ್ ಜ್ಯೂಸ್ ಸೆಂಟರ್ ನಲ್ಲಿ ಬೆಂಕಿ-Fire at clothing store and Diamond Juice Center

 SUDDILIVE || SHIVAMOGGA

ಬಟ್ಟೆ ಅಂಗಡಿ ಮತ್ತು ಡೈಮೆಂಡ್ ಜ್ಯೂಸ್ ಸೆಂಟರ್ ನಲ್ಲಿ ಬೆಂಕಿ-Fire at clothing store and Diamond Juice Center     

Fire, catch

BH ರಸ್ತೆಯಲ್ಲಿರುವ ಡೈಮೆಂಡ್ ಜ್ಯೂಸ್ ಸೆಂಟರ್ ಮತ್ತು ಬಾಂಬೆ ಸೇಲ್  ಬಟ್ಟೆ ಅಂಗಡಿಯಲ್ಲಿ ಬೆಂಕಿ ಹೊತ್ತುಕೊಂಡಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಮೊಹಮದ್ ಗೌಸ್ ಎಂಬುವರ ಬಟ್ಟೆ ಅಂಗಡಿಯ ಹಿಂಭಾಗದಲ್ಲಿ ಹಾಕಿದ ಕಸಗಳಿಗೆ ಅಪರಿಚಿತರು ಹಾಕಿದ ಬೆಂಕಿಯ ಪರಿಣಾಮ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ‌. 

ಶಿವಮೊಗ್ಗದ ಕರ್ನಾಟಕ ಸಂಘ ಸಮೀಪ ತಗಡು ಶೀಟ್‌ಗಳನ್ನು ಬಳಸಿ ನಿರ್ಮಿಸಿದ್ದ ಮಳಿಗೆಯಲ್ಲಿ ಇಂದು ಸಂಜೆ ಬೆಂಕಿ ಹೊತ್ತುಕೊಂಡಿದೆ. ಅಂಗಡಿಯಲ್ಲಿದ್ದ ಬಟ್ಟೆ ಸಂಪೂರ್ಣ ಸುಟ್ಟು ಹೋಗಿದೆ. ಜ್ಯೂಸ್‌ ಸೆಂಟರ್‌ನಲ್ಲಿದ್ದ ರೆಫ್ರಿಜರೇಟರ್‌, ಮಿಕ್ಸಿ ಸೇರಿದಂತೆ ಹಲುವು ವಸ್ತುಗಳು ಆಹುತಿಯಾಗಿವೆ.


ಇನ್ನು, ಅಂಗಡಿಯಲ್ಲಿ ಸಣ್ಣ ಅಡುಗೆ ಸಿಲಿಂಡರ್‌ ಇತ್ತು. ಅದರಲ್ಲಿ ಗ್ಯಾಸ್‌ ಖಾಲಿಯಾಗಿತ್ತು ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್‌ ಅಪಾಯ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗದ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಅಗ್ನಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕದಳದ FSTO,ಮಕ್ತುಂ ಹುಸೇನ್, LF ಸುನಿಲ್, FD ಸತೀಶ್, FM ಯರಿಸ್ವಾಮಿ ಮನೋಜ್ ಭಾಗಿಯಾಗಿದ್ದರು. 

Fire at clothing store and Diamond Juice Center

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close