ಸಿಎಂ ಸಿದ್ದರಾಮಯ್ಯನವರ ಕೊನೆಯ ಅಧಿವೇಶನವಾಗುವ ಸಾಧ್ಯತೆ ಹೆಚ್ಚಾಗಿದೆ-ಶಾಸಕ ಚೆನ್ನಿ

 SUDDILIVE || SHIVAMOGGA

ಸಿಎಂ ಸಿದ್ದರಾಮಯ್ಯನವರ ಕೊನೆಯ ಅಧಿವೇಶನವಾಗುವ ಸಾಧ್ಯತೆ ಹೆಚ್ಚಾಗಿದೆ-ಶಾಸಕ ಚೆನ್ನಿ-It is highly likely that this will be CM Siddaramaiah's last session - MLA Chenni

Siddaramahia, session

ವಿಶೇಷ ಅಧಿವೇಶನ ಕರೆದಿರುವ ಹಿನ್ನಲೆಯಲ್ಲಿ ಕರೆದಿರುವ ಅಧಿವೇಶನವು ಸಿಎಂ ಸಿದ್ದರಾಮಯ್ಯನವರ  ಕೊನೆಯ ಅಧಿವೇಶನ ಎನಿಸುತ್ತದೆ ಎಂದು ಶಾಸಕ ಚೆನ್ನಬಸಪ್ಪ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಎರಡು ವರೆ ವರ್ಷದ ಕೊನೆಯ ಅಧಿವೇಶನ ಇದಾಗಿದೆ ಎನಿಸಿದೆ. ಬಜೆಟ್ ಗೆ ಅಧಿವೇಶನ ಕರೆಯಬೇಕಿತ್ತು. ಆದರೆ ಬಜೆಟ್ ದು ಅಲ್ಲ ಎನ್ನುವುದು ಕಂಡು ಬರುತ್ತಿದೆ. ಸಿಎಂ ಬದಲಾವಣೆ ಇಟ್ಟುಕೊಂಡು ಅಧಿವೇಶನ ಕರೆಯುತ್ತಿರುವ ಹಿನ್ನಲೆಯಲ್ಲಿ ಸಿಎಂನವರ ಕೊನೆಯ ಬಜೆಟ್ ಇದಾಗಿದೆ ಎಂದರು. 

ವಿಬಿಜೆ ರಾಮ್ ಜಿ ಗೆ ಅಧಿವೇಶನಕ್ಕೆ ಕರೆದಿರುವುದು ಶಾಸಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದರೂ ಬಿಜೆಪಿ ಪರವಾದ ವಾತಾವರಣವಿದೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಯ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ನೋಡಿದರೆ ನಮಗೆ ಪೂರಕವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. 

ಶಾಸಕರ‌ ಅನುದಾನದಲ್ಲಿ ಬಿಡುಗಡೆ ಯಾಗಬೇಕಿದ್ದ 50 ಕೋಟಿ ಹಣದಲ್ಲಿ  ಶಾಸಕರಿಗೆ 25 ಕೋಟಿ ರೂ. ಹಣ ಬಿಡುಗಡೆಯಾಗಿದೆ. 15 ನೇ ಹಣಕಾಸಿನ ಆಯೋಗದ ಹಣ ಬಂದಿಲ್ಲದಿರುವ ಕಾರಣ ಸ್ಥಳೀಯ ಸಂಸ್ಥೆಗೆ ಹಣ ಬಿಡುಗಡೆಯಾಗದ ಹಿನ್ನಲೆಯಲ್ಲಿ ಹಣ ಬಂದಿಲ್ಲ ಎಂದರು. 

ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಸುವ ಬಗ್ಗೆ ವಿಪಕ್ಷವಾದ ಬಿಜೆಪಿ ಹೋರಾಟ ಇಗಿಯಾಗಿ ನಡೆಸಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಯ ಚುನಾವಣೆಯನ್ನ ನಡೆಸಿಲ್ಲ. ಚುನಾವಣೆ ಆಯೋಗ ನ್ಯಾಯಾಲಯಕ್ಕೆ ಹೋಗಿತ್ತು. ಮೀಸಲಾತಿ ಕೊಡಿ ಎಂದು ನ್ಯಾಯಾಲಯ ಹೇಳಿದರೂ ಆಯೋಗ ಮತ್ತೆ ನ್ಯಾಯಾಲಯಕ್ಕೆ ಹೋಗುವ ಪರಿಸ್ಥಿತಿಯನ್ನ ಸರ್ಕಾರ ನಿರ್ಮಿಸಿದೆ. 

ಚುನಾವಣೆ ಆಯೋಗಕ್ಕೆ ಕಾಲಕಾಲಕ್ಕೆ ಚುನಾವಣೆ ನಡೆಸಲು ಸುಪ್ರೀಂ ಆದೇಶವಿದ್ದರೂ ನ್ಯಾಯಾಲಯದ ಮೂಲಕ ಸರ್ಕಾರ ಆಯೋಗಕ್ಕೆ ಕಟ್ಟಿಹಾಕುವ ಕೆಲಸ ಮಾಡಿದೆ ಎಂದು ದೂರಿದರು. 

ಸುಂದರಾಶ್ರಯದಿಂದ ಆಲ್ಕೊಳ ವೃತ್ತದವರೆಗೆ ಫ್ಲೈಓವರ್ ನಿರ್ಮಾಣದ ಬಗ್ಗೆ ಗೊತ್ತಿದೆ. ಸ್ಕೈ ಓವರ್ ಮತ್ತು ಅಂಡರ್ ಬಗ್ಗೆ ಕೆಲವರ ಸಲಹೆ ಇದೆ. ಈ ಬಗ್ಗೆ ಮಾಹಿತಿ ಇಲ್ಲ ಪಡೆಯಲ್ಲ. ಇರುವ ಅಂಡರ್ ಪಾಸ್ ಬಳಕೆಯಾಗುತ್ತಿಲ್ಲ ಎಂದರು.

ಅನವರತ ತಂಡದಿಂದ ರಾಷ್ಟ್ರಗಾಯನ ವಂದೇ ಮಾತರಂ ಗೆ 150 ನೇ ವರ್ಷ ಹಾಗೂ ನಮ್ಮ‌ನಾಡಗೀತೆಗೆ 100 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಜ.21 ರಂದು  ವಿವಿಧ ಕಾರ್ಯಕ್ರಮಗಳು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆದರೆ ಅಂದು ಸಂಜೆ  6-30 ಕ್ಕೆ ಕುವೆಂಪು ರಂಗಮಂದಿರದಲ್ಲಿ ನರ್ತನ ಸಂಭ್ರಮ ನಡೆಯಲಿದೆ. ನಟ ಶ್ರೀಮತಿ ತಾರಾ ಸಂಜೆಯ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ ಎಂದರು. 

ವಿವೇಕಾ ವಿದ್ಯಾನಿಧಯನ್ನ 5000 ರೂ ನಂತೆ 250 ಜನರಿಗೆ ನೀಡಲಾಗಿದೆ. 50 ರಿಂದ 250 ಕ್ಕೆ ಹೋಗಿದೆ. ಮೆರಿಟ್ ನಲ್ಲಿರುವ ಕೆಲವರಿಗೂ ಫೌಂಡೇಷನ್ ಚಿಂತಿಸಿದೆ ಎಂದರು.

It is highly likely that this will be CM Siddaramaiah's last session - MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close