301 ವೀಣನುಡಿಸುವವರ ನಡುವೆ ಕುಳಿತು ವೀಣವಾದಕರಾದ ಸಂಸದ ಯಧುವೀರ್-MP Yadhuveer, who sat among 301 veena players, became a veena player

SUDDILIVE || SHIVAMOGGA

301 ವೀಣನುಡಿಸುವವರ ನಡುವೆ ಕುಳಿತು ವೀಣವಾದಕರಾದ ಸಂಸದ ಯಧುವೀರ್-MP Yadhuveer, who sat among 301 veena players, became a veena player    

Yadhuveer, MP

ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.

ಉದ್ಘಾಟಕರೇ 301 ವೀಣಾ ವಾದಕರ ನಡುವೆ ಕುಳಿತು ನುಡಿಸಿರುವುದು ವಿಶೇಷವಾಗಿತ್ತು. ಒಂದೇ ವೇದಿಕೆಯಲ್ಲಿ '301 ವೀಣಾ ನಾದ ಝೇಂಕಾರ' ಮೊಳಗಿದ್ದು ನಿಜಕ್ಕೂ ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವ ನೀಡಿದೆ. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯವನ್ನ ಶ್ಲಾಘಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಡಿ. ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ್ ಸರ್ಜಿ ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಶ್ರೀ ಕೆ. ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು, ಶ್ರೀಮತಿ ರೇವತಿ ಕಾಮತ್, ಶ್ರೀ ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆ ಮೇಲೆ ಗಣ್ಯರು ಉಪಸ್ಥಿತರಿದರು.

MP Yadhuveer, who sat among 301 veena players, became a veena player  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close