ಅರೆಬಿಳಚಿಯ ನಾಲೆಯಲ್ಲಿ ನಾಲ್ವರು ಮಿಸ್ಸಿಂಗ್- Four missing in Arbebilachi canal

 SUDDILIVE || HOLEHONNURU

ಅರೆಬಿಳಚಿಯ ನಾಲೆಯಲ್ಲಿ ನಾಲ್ವರು ಮಿಸ್ಸಿಂಗ್- Four missing in Arbebilachi canal    

Canal, arebilach


ಭದ್ರಾ ಎಡದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿದ್ದಾರೆ. ಬಟ್ಟೆ ತೊಳೆಯಲು ನಾಲೆಗೆ ತೆರಳಿದ ಒಂದೇ ಕುಟುಂಬದ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಭದ್ರಾವತಿ ತಾಲೂಕು ಅರಬಿಳಚಿ ಕ್ಯಾಂಪ್‌ನಲ್ಲಿ ಘಟನೆ ಸಂಭವಿಸಿದೆ. ನೀಲಾಬಾಯಿ, ಅವರ ಮಗ ರವಿಕುಮಾರ್‌, ಮಗಳು ಶ್ವೇತಾ, ಅಳಿಯ ಪರಶುರಾಮ್‌ ನಾಪತ್ತೆಯಾಗಿದ್ದಾರೆ


ಮಿಸ್ಸಿಂಗ್ ಆದವರು ಯಾರ‌್ಯಾರು
?

ಭದ್ರಾ ಎಡದಂಡೆ ನಾಲೆಯಲ್ಲಿ ಬಟ್ಟೆ ಒಗೆಲು ಬಂದಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಾಲೆಗೆ ಜಾರಿದವರ ರಕ್ಷಣೆಗೆ ಹೋದವರು ಒಬ್ಬೊಬ್ಬರಾಗಿ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. 


ಸದ್ಯ ನಾಲ್ವರ ಶೋಧ ಕಾರ್ಯ ನಡೆಯುತ್ತಿದ್ದು, ಅರಬಿಳಚಿಯ ಜಾತ್ರೆಯ ಹಿನ್ನೆಲೆಯಲ್ಲಿ ಅಳಿಯ ಪರಶುರಾಮ್‌ ಮತ್ತು ಪತ್ನಿ ಶ್ವೇತಾರ ಜೊತೆ ಮಾವನ ಮನೆಗೆ ಬಂದಿದ್ದರು. ಅರಬಿಳಚಿ ಮರಾಠ ಬೀದಿಯಲ್ಲಿದ್ದ ತಾಯಿ ನೀಲಾಬಾಯಿ(50) ಮತ್ತು ಮಗ ರವಿ (21) ಶಿಕಾರಿಪುರ ಬೆಂಡೆಕಟ್ಟಿಯ ಅಳಿಯ ಪರಶುರಾಮ್(33) ಮತ್ತು ಮಗಳಾದ ಶ್ವೇತಾ (28)  ನೀರುಪಾಲಾಗಿದ್ದಾರೆ. 


ಈಶ್ವರ್ ಮಲ್ಪೆ ಬರುವ ಸಾಧ್ಯತೆ?

ಹೊಳೆಹೊನ್ನೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮತ್ತು ಹೊಳೆಹೊನ್ನೂರು ಪಿಐ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಮಧ್ಯಾಹ್ನ 2-30 ರ ವೇಳೆಗೆ ನಡೆದ ಈ ಘಟನೆಯ ಶೋಧಕಾರ್ಯ ಸುಮಾರು 3-30 ರ ಸಮಯದಲ್ಲಿ ನಡೆದಿದೆ. ಸಧ್ಯಕ್ಕೆ ಅಗ್ನಿಶಾಮಕದಳದ ಶೋಧಕಾರ್ಯ ನಿಂತಿದೆ. ನಾಲೆಯಲ್ಲಿ ಹೆಚ್ಚಿನ ನೀರು ಇರುವುದರಿಂದ ಯಾವ ಫಲಿತಾಂಶವೂ ದೊರೆತಿಲ್ಲ. ಈಶ್ವರ್ ಮಲ್ಪೆ ಸಹ ಶೋಧಕಾರ್ಯದಲ್ಲಿ ನಾಳೆ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. 

Four missing in Arbebilachi canal

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close