Ksrtc ಬಸ್ ಹತ್ತುವಾಗ ಬ್ಯಾಗಲಿದ್ದ ಚಿನ್ನಾಭರಣಗಳು ಮಂಗಮಾಯ-Gold jewellery in bag theft in shimoga Ksrtc bus stand

 SUDDILIVE || SHIVAMOGGA

Ksrtc ಬಸ್ ಹತ್ತುವಾಗ ಬ್ಯಾಗಲಿದ್ದ ಚಿನ್ನಾಭರಣಗಳು ಮಂಗಮಾಯ-Gold jewellery in bag theft in shimoga Ksrtc bus stand

Shivamogga, KSRTC


ನಗರದ KSRTC ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಉಂಟಾದ ಜನದಟ್ಟಣೆಯನ್ನು ಬಳಸಿಕೊಂಡ ಕಳ್ಳರು, ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು ₹70,000 ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.

ದಾವಣಗೆರೆ ಮೂಲದ ಜ್ಯೋತಿ ಎಂಬುವವರು ಶಿವಮೊಗ್ಗ ಬಸ್ ನಿಲ್ದಾಣದಿಂದ ಬಸ್ ಹತ್ತಲು ಪ್ರಯತ್ನಿಸುತ್ತಿದ್ದರು. ಈ ಸಮಯ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಜ್ಯೋತಿ ಅವರು ಬಸ್‌ ಹತ್ತಿ ಟಿಕೆಟ್ ಗೆ ದಾಖಲಾತಿ ತೆಗೆಯುವಾಗ ಶಾಕ್ ಆಗಿದೆ.  ವ್ಯಾನಿಟಿ ಬ್ಯಾಗ್‌ನ ಒಳಗಿದ್ದ 10 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 5 ಗ್ರಾಂ ತೂಕದ ಚಿನ್ನದ ಕಿವಿಯ ಓಲೆಗಳು ಕಳುವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಈ ವರ್ಷದ ಮೊದಲ ಚಿನ್ಬಾಭರಣಗಳ ಕಳುವಿನ ಪ್ರಕರಣ ದಾಖಲಾಗಿದೆ. ಕಳೆದ ವರ್ಷ 13-15 ಚಿನ್ನಾಭರಣದ ಕಳುವು ದಾಖಲಾಗಿತ್ತು. 

Gold jewellery in bag theft in shimoga Ksrtc bus stand

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close