ಮೆಗ್ಗಾನ್ ಮುಂಭಾಗದಲ್ಲಿರುವ ಫುಟ್ ಪಾತ್ ತಿಂಡಿಗಾಡಿಗಳ ತೆರವು ಕಾರ್ಯಾಚರಣೆ- Meggan hospital next food cart clearance operation

 SUDDILIVE || SHIVAMOGGA

ಮೆಗ್ಗಾನ್ ಮುಂಭಾಗದಲ್ಲಿರುವ ಫುಟ್ ಪಾತ್  ತಿಂಡಿಗಾಡಿಗಳ ತೆರವು ಕಾರ್ಯಾಚರಣೆ- Meggan hospital next food cart clearance operation         

Clearance, operation


ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮುಂಭಾಗದಲ್ಲಿ ತಿಂಡಿ ಗಾಡಿಗಳಿಗೆ ಪಾಲಿಕೆ ಮೂಹೂರ್ತ ಫಿಕ್ಸ್ ಮಾಡಿದೆ. ತಿಂಗಳುಗಟ್ಟಲೆ ಆಸ್ಪತ್ರೆಯ ಮುಂಭಾಗದ ಫುಟ್ ಪಾತ್ ನಲ್ಲಿ ಹಾಗೆ ಉಳಿಸಿಕೊಂಡಿರುವ ತಳ್ಳುವ ಗಾಡಿಗಳನ್ನ ಕ್ರೇನ್ ಮತ್ತು ಲಾರಿ ತರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಬೀದಿ ಬದಿಯ ಸ್ಕ್ರಾಪ್ ಆಗಿರುವ ಅಥವಾ ನಿಷ್ಕ್ರಿಯಗೊಂಡಿರುವ ತಿಂಡಿಗಾಡಿಗಳು, ಕಬ್ಬಿನ ಹಾಲಿನ ಮಳಿಗೆ, ಇತರೆ ಬಳಕೆ ಮಾಡದೆ ಬೀದಿ ಬದಿಯಲ್ಲೇ ಬಿಟ್ಟು ಹೋಗಿರುವ ಬಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ತಿಂಗಳುಗಳ ಹಿಂದೆ ಡಿಜಿಟಲ್ ಮಾಧ್ಯಮಗಳ ಪ್ರಕಟಣೆಯನ್ನೂ ಹೊರಡಿಸಿತ್ತು. ತಳ್ಳುವ ಗಾಡಿಗಳನ್ನ ಫುಟ್ ಪಾತ್ ಮೇಲೆ ಬಿಡದೆ ವ್ಯವಹಾರ ಮುಗಿಸಿ ಗಾಡಿಗಳನ್ನ ತೆಗೆದುಕೊಂಡು ಹೋಗುವಂತೆಯೂ ಸಹ ಸೂಚಿಸಲಾಗಿತ್ತು. 

ಮೆಗ್ಗಾನ್ ಆಸ್ಪತ್ರೆಯ ಮುಂದೆ ಅನಧಿಕೃತ ಗಾಡಿಗಳನ್ನು ನಿಲ್ಲಿಸಿ ವ್ಯವಹಾರ ಮಾಡದೆ ನಿಷ್ಕ್ರಿಯ ವಾಗಿದ್ದ ತಿಂಡಿ ಗಾಡಿಗಳಿಗೆ ಪಾಲಿಕೆ ಮೂಹೂರ್ತ ಫಿಕ್ಸ್ ಮಾಡಿದೆ. ಬೆಳ್ಳಂಬೆಳಿಗ್ಗೆ ಮಹಾನಗರ ಪಾಲಿಕೆ ಇದುವರೆಗೂ 4 ತಳ್ಳುವ ವಾಹನಗಳನ್ನ ವಶಕ್ಕೆ ಪಡೆದಿದೆ

ಬೀದಿಬದಿ ವ್ಯಾಪಾರ ಗುರುತಿ ನ ಹೊಂದಿದ್ದು ವ್ಯವಹಾರ ಮಾಡದೆ ಫುಟ್ಪಾತ್ ನಲ್ಲಿ ಗಾಡಿಗಳನ್ನು ನಿಲ್ಲಿಸಿದ ಬಗ್ಗೆ ಅವರಿಗೆ ತೆರವಿಗೆ ನೋಟಿಸ್ ನೀಡಲಾಗಿತ್ತು. ಆದರೂ ಸ್ಪಂದಿಸದೆ ಇರುವ ವ್ಯಕ್ತಿಗಳ ಗಾ ಡಿಗಳನ್ನು ಪಾಲಿಕೆ ಇಂದು ತೆರೆವುಗೊಳಿಸಿದೆ. 

Meggan hospital next food cart clearance operation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close