ಬಂಗಾರದ ತೀರ್ಪ-Gold thief sentenced to three years in prison, fined Rs. 5,000

SUDDILIVE || SHIVAMOGGA

ಬಂಗಾರದ ತೀರ್ಪು-Gold thief sentenced to three years in prison, fined Rs. 5,000     

Gold, thief


ಗಾಂಧಿ ಬಜಾರ್ ನ ಬಂಗಾರದ ಅಂಗಡಿಗೆ ಬಂದು ಬಂಗಾರ ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕನಿಗೆ ಚಳ್ಳೆಹಣ್ಣು ತಿನ್ನಿಸಿ 96 ಗ್ರಾಂ ಚಿನ್ಬಾಭರಣ ಕದ್ದು ಪರಾರಿಯಾಗಿದ್ದ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ 5 ಸಾವಿರ ರೂ. ದಂಡ, ಮೂರು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ 11 ವರ್ಷದ ಹಿಂದೆ ನಡೆದ ಘಟನೆಗೆ ನಿನ್ನೆ ತೀರ್ಪು ದೊರೆತಿದೆ. 

ಆರೋಪಿ ದಾವಣಗೆರೆಯ ಹರಿಹರದ   ಅಬ್ಬಾಸ್ ಖಾನ್ @ ಅಬ್ಬಾಸ್ (40) ತಂದೆ: ಶಬ್ಬೀರ ಖಾನ್ ದಿನಾಂಕ 08-04-2015 ರಂದು ಮಧ್ಯಾಹ್ನ 01:32 ಗಂಟೆ ಯಿಂದ 01:48 ಪಿ ಎಂ ಗಂಟೆ ಮಧ್ಯ ಅವಧಿಯಲ್ಲಿ ಶಿವಮೊಗ್ಗ ನಗರ ಗಾಂಧಿ ಬಜಾರು ಮುಖ್ಯ ರಸ್ತೆ ಜಾಮಿಯಾ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ಬಂಗಾರ ಜ್ಯುವೆಲರ್ ಶಾಪ್ ಗೆ ಬಂದು ಎರಡು ಬೆಳ್ಳಿ ಕಣ್ಣುಗಳನ್ನ ಖರೀದಿಸುವ ನೆಪದಲ್ಲಿ 96 ಗ್ರಾಂ ಚಿನ್ನಾಭರಣವನ್ನ ಕದ್ದುಕೊಂಡು ಹೋಗಿದ್ದ. 

ಇದನ್ನ ಬೆನ್ನುಹತ್ತಿದ ದೊಡ್ಡಪೇಟೆ ಪೊಲೀಸರಿಗೆ 2017 ರಲ್ಲಿ ಆರೋಪಿ ಪತ್ತೆಯಾಗುತ್ತಾನೆ. 1)ಒಂದು ಬೆಲ್ಟ್ ಮಾಟದ ಬಂಗಾರದ ಚೈನ್ ಸರ ತೂಕ 16 ಗ್ರಾಂ 2) ಒಂದು ನವರತ್ನದ ಬಂಗಾರದ ಉಂಗುರ 08 ಗ್ರಾಂ 3)ಒಂದು ಬಿಳಿ ಹರಳಿನ ಬಂಗಾರದ ಉಂಗುರ ತೂಕ 05 ಗ್ರಾಂ 4)ಒಂದು ಹಸಿರು ಹರಳಿನ ಉಂಗುರ ತೂಕ 04 ಗ್ರಾಂ ಒಟ್ಟು 34 ಗ್ರಾಂ ತೂಕದ 80,000/- ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಆರೋಪಿತನು ಕೃತ್ಯ ವ್ಯಸಗಿರುವುದು ತನಿಖೆಯಿಂದ ದೃಢಪಟ್ಟಿದ್ದರಿಂದ ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. 

ಪ್ರಕರಣದಲ್ಲಿ ಮಾನ್ಯ ಎರಡನೆಯ   ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಶ್ರೀ ಸಿದ್ದರಾಜು ಎನ್ ಕೆ ರವರು ಆರೋಪಿಗೆ 380 ಐಪಿಸಿ ಅಪರಾಧಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 5000/- ರೂಪಾಯಿ ದಂಡ ವಿಧಿಸಿ  ತೀರ್ಪು ನೀಡಿರುತ್ತಾರೆ. ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಶ್ರೀ ಕಿರಣ್ ಕುಮಾರ್ ಜಿ ಕೆ ರವರು ವಾದ ಮಂಡಿಸಿದ್ದರು, 

ಈ ಪ್ರಕರಣದಲ್ಲಿ ಅಂದಿನ ತನಿಖಾಧಿಕಾರಿಗಳಾದಂತಹ ಶ್ರೀ ಕೆ ಟಿ ಗುರುರಾಜ್ ದೊಡ್ಡಪೇಟೆ ವೃತ್ತ ನಿರೀಕ್ಷಕರು ಭಾಗಶಃ  ತನಿಖೆಯನ್ನು ನಡೆಸಿದ್ದರು, ನಂತರ ದೊಡ್ಡಪೇಟೆ ಪಿಐ ಆಗಿ ಬಂದ  ಹರೀಶ್ ಕೆ ಪಟೇಲ್  ತನಿಖೆಯನ್ನು ಪೂರೈಸಿ  ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

Gold thief sentenced to three years in prison, fined Rs. 5,000 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close