ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಅನಾವರಣ-Unveiling of bronze effigy of Dr. Raj Kumar and Dr. Puneeth Raj Kumar

 SUDDILIVE || BHADRAVATHI

ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಅನಾವರಣ-Unveiling of bronze effigy of Dr. Raj Kumar and Dr. Puneeth Raj Kumar    






Bronze, effigy

ಭದ್ರಾವತಿಯ ಚಾಮೇಗೌಡರ ಏರಿಯಾದ ರೈಲ್ವೆ ನಿಲ್ದಾಣದ ಮುಂದೆ ನಟ ದಿ.ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆಯನ್ನ ನಟನ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದರು. 

ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ದೊಡ್ಡ ಟೆಂಟ್ ನ್ನ ನಿರ್ಮಿಸಿ ಸಮಾರಂಭ ನಡೆಸಲಾಗಿದೆ. ಡಾ.ರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜ್ ಕುಮರ್ ಅಭಿಮಾನಿಗಳ ಬಳಗ ಈ ಕಾರ್ಯಕ್ರಮವನ್ನ ಆಯೋಜಿಸಿತ್ತು. 


ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿಯನ್ನ ಜೊತೆಯಲ್ಲೇ ನಿರ್ಮಿಸಿ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ದೇಗುಲ ಎಂದು ನಾಮಕರಣವನ್ನ ಮಾಡಲಾಗಿದೆ. ದೇಗುಲ ಮತ್ತು ತಲಾ 5 ಲಕ್ಷ ರೂ.ದಲ್ಲಿ ಇಬ್ಬರ ಕಂಚಿನ ಪ್ರತಿಮೆಗೆ ವೆಚ್ಚ ತಗುಲಿದರೆ,  ದೇಗುಲ ನಿರ್ಮಾಣಕ್ಕೆ  35 ಲಕ್ಷ ರೂ.ನಲ್ಲಿ ನಿರ್ಮಾಣವಾಗಿದೆ. 


ದೇಗುಲ ಹಾಗೂ ಕಂಚಿನ ಪ್ರತಿಮೆ ಅನಾವರಣಕ್ಕೂ ಮೊದಲು ಅಶ್ವಿನಿ ಅವರು ಜನ್ನಾಪುರದದಲ್ಲಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿ ಮಮತಾ ಹೆಚ್ ಆರ್ ಅವರ ಮನೆಗೆ ಭೇಟಿ ನೀಡಿದರು. 

Unveiling of bronze effigy of Dr. Raj Kumar and Dr. Puneeth Raj Kumar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close