ರಾಜ್ಯಪಾಲರು ಬಿಜೆಪಿಯ ಏಜೆಂಟ್-ಸಂಗಮೇಶ್ವರ್-Governor is an agent of BJP- Sangameshwar

 SUDDILIVE || SHIVAMOGGA

ರಾಜ್ಯಪಾಲರು ಬಿಜೆಪಿಯ ಏಜೆಂಟ್-ಸಂಗಮೇಶ್ವರ್-Governor is an agent of BJP- Sangameshwar    

Governor, agent

ಇಂದು ರಾಜ್ಯಪಾಲರು ಬೆಂಗಳೂರಿನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಭಾಷಣವನ್ನ ಓದದೆ ತಮ್ಮದೇ ಪದಗಳಲ್ಲಿ ಮಾತನಾಡಿ ಸದನದಿಂದ ಎದ್ದು ಹೋದ ಕಾರಣ ಬಹಳ ಚರ್ಚೆಗೆ ಗ್ರಾಸವಾಗಿದ್ದು ಅದನ್ನ ಭದ್ರವತಿ ಶಾಸಕರು ತೀರ್ವವಾಗಿ ಖಂಡಿಸಿದ್ದಾರೆ. 

ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಆರೋಪಿಸಿದರು.  

ಅವರು ನಗರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಜ ಕುಮಾರ್ ಅವರ ದೇಗುಲ ಮತ್ತು ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು ಸರ್ಕಾರ ನೀಡಿದ ಪ್ರಸ್ತಾವನೆಗಳನ್ನ ರಾಜ್ಯಪಾಲರು ಅನುಮೋದನೆ ನೀಡಬೇಕು ಅದನ್ನ ಬಿ್ಟು ರಾಜ್ಯಪಾಲರು ಬಿಜೆಪಿ ಹೇಳಿದಂತೆ ವರ್ತಿಸುತ್ತಿದ್ದಾರೆ. 

ಮಹಾತ್ಮಗಾಂಧಿ ದೇಶಕ್ಕೆ ಮಹಾತ್ಮಗಾಂಧಿಯಾಗಿದ್ದಾರೆ. ಅವರ ಹೆಸರನ್ನ ಬದಲಿಸಿ ರಾಮ್ ಜಿ ಹೆಸರು ತರುತ್ತಿದ್ದಾರೆ. ಇದ್ನ ಕಾಂಗ್ರೆಸ್ ಖಂಡಿಸುತ್ತದೆ. ನಮ್ಮ ನಾಯಕರಾದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನೀಡುವ ಸೂಚನೆ ಪಾಲಿಸುತ್ತೇವೆ.  ಭದ್ರಾವತಿಯಲ್ಲೂ ಮನರೇಗಾ ಹೆಸರನ್ನ ಬದಲಿಸಿರುವುದನ್ನ ಖಂಡಿಸಿ ಪ್ರತಿಭಟಿಸಲಾಗುವುದು ಎಂದರು. 

Governor is an agent of BJP- Sangameshwar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close