ದೇವಸ್ಥಾನದ ಹುಂಡಿ ಹಣ ಕದಿಯಲು ಹೋಗಿ ಪೊಲೀಸ್ ಅತಿಥಿಯಾದ! He went to steal money from the temple treasury and became a police guest!

 SUDDILIVE || SHIVAMOGGA

ದೇವಸ್ಥಾನದ ಹುಂಡಿ ಹಣ ಕದಿಯಲು ಹೋಗಿ ಪೊಲೀಸ್ ಅತಿಥಿಯಾದ! He went to steal money from the temple treasury and became a police guest!     

Temple, treasury


ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಹುಂಡಿ ಹಣ ಕದಿಯಲು ಹೋದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಕದಿಯಲು ಬಂದ ಆರೋಪಿಯನ್ನ ಗ್ರಾಮಸ್ಥರೇ ಕೂಡಿಹಾಕಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದ್ದು, ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕುಂಸಿ ಪೊಲೀಸ್ ಠಾಣೆಯ ಸಂಪಿಗೆ ಹಳ್ಳದಲ್ಲಿರುವ ಭೂತಪ್ಪನ ಗುಡಿಗೆ ಕನ್ನ ಹಾಕಲು ಬಂದ ಅನ್ಯಕೋಮಿನ ಯುವಕನನ್ನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಕ್ಷಣವೊಂದಕ್ಕೆ ತನ್ನ ಊರು ಬದಲಿಸಿದ ಹಿನ್ನಲೆಯಲ್ಲಿ ಕದಿಯಲು ಬಂದವನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈತ ತನ್ನನ್ನು ತಾನು ಆಸಿಫ್ ಎಂದು ಹೇಳಿಕೊಂಡಿದ್ದಾನೆ. 

ಈ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸ್ ಮೂಲಗಳು, ಈತ ಶಿಕಾರಿಪುರದ ಆಸಿಫ್ ಎಂಬುದು ದೃಢವಾಗಿದೆ. ಈತನ ಮೇಲೆ ದೇವಸ್ಥಾನ ಒಂದೇ ಅಲ್ಲ, ದರ್ಗಾದಲ್ಲಿಯೂ ಕಳುವು ಮಾಡಿದ ಆರೋಪಗಳು ಇವೆ. ಇಂದು ಆತ ಸಂಪಿಗೆಹಳ್ಳದ ಡ್ಯಾಂ ಬಳಿಯಿರುವ ಬೂತಪ್ಪನ ಕಟ್ಟೆಯಲ್ಲಿ ಕಳುವು ಮಾಡಲು ಹೋಗಿ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಈ ಹಿಂದೆ ಆಯನೂರಿನಲ್ಲಿ ಬೈಕ್ ಕಳುವು ಮಾಡಿದ್ದ ಆರೋಪದ ಮೇರೆಗೆ ಜೈಲಿಗೆ ಹೋಗಿದ್ದ 15 ದಿನಗಳಲ್ಲೇ ವಾಪಾಸ್ ಆಗಿದ್ದ, ಈಗ ದೇವಸ್ಥಾನದ ಹುಂಡಿ ಕಳುವಿಗೆ ಯತ್ನಿಸಲು ಹೋಗಿ ಜೈಲು ಸೇರಿದ್ದಾನೆ. 

He went to steal money from the temple treasury and became a police guest!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close