ವರದಕ್ಷಿಣೆ ಕಿರುಕುಳ ಆರೋಪಿಗಳಿಗೆ ಶಿಕ್ಷೆ-Punishment for dowry harassment accused

SUDDILIVE || SHIVAMOGGA

ವರದಕ್ಷಿಣೆ ಕಿರುಕುಳ ಆರೋಪಿಗಳಿಗೆ ಶಿಕ್ಷೆ-Punishment for dowry harassment accused      

Punishment, dowry


ವರದಕ್ಷಿಣೆ ಕಿರುಕುಲದ ಹಿನ್ನಲೆಯಲ್ಲಿ ಬಂಧಿತರಾಗಿದ್ದ ತಾಯಿ ಮತ್ತು ಮಗನಿಗೆ 3 ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ನೀಡಿ ತೀರ್ಪು ನೀಡಿದೆ. 

ಚನ್ನಗಿರಿ ತಾಲ್ಲೂಕು ಅಜ್ಜಿಹಳ್ಳಿ ವಾಸಿಯಾದ ಆರೋಪಿ ಪೃಥ್ವಿರಾಜ್ ಗೆ ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಕೆ.ಹೆಚ್ ಬಿ ಕಾಲೋನಿಯ ನಿವಾಸಿ ರಂಜಿತರನ್ನ ಕೊಟ್ಟು 2021 ರಲ್ಲಿ  ವರೋಪಚಾರ ಕೊಟ್ಟು ಮದುವೆ ಮಾಡಲಾಗಿತ್ತು. ಆರೋಪಿ ಮತ್ತು ಆತನ ತಾಯಿ ಇಬ್ಬರು ಪಿರ್ಯಾದಿ ಮಗಳಿಗೆ  ವರದಕ್ಷಿಣೆ ತರುವಂತೆ ಮಾನಸಿಕವಾಗಿ ಮತ್ತು ಧೈಹಿಕವಾಗಿ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಮಾಡಲಾಗಿತ್ತು. 

 ದಿನಾಂಕ:16-06-2022 ರಂದು ರಾತ್ರಿ ಆರೋಪಿಗಳು ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಕೊಡುತ್ತಿದ್ದರಿಂದ ಮನನೊಂದ ರಂಜಿತ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದರು. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತೆ. ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಪಿ.ಐ. ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. 

Punishment, dowry

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶಾಂತರಾಜ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಶಿವಮೊಗ್ಗದ 3 ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ದಿನಾಂಕ:24-01-2026 ರಂದು 1 ನೇ ಆರೋಪಿ ಪೃಥ್ವಿರಾಜ್@ ಪೃಥ್ವಿಗೆ ಬಿನ್ ಲೇಟ್ ಚಂದ್ರಪ್ಪರಿಗೆ 5 ವರ್ಷ ಕಠಿಣ ಕಾರಾವಾಸ ಮತ್ತು 7000 ರೂ ದಂಡವನ್ನು ವಿಧಿಸಿದ್ದು, ದಂಡ ತಪ್ಪಿದ್ದಲ್ಲಿ 1 ವರ್ಷ ಸಾಧಾರಣ ಸಜೆ  ಮತ್ತು 2 ನೇ ಆರೋಪಿ ಪುಷ್ಪಾ ಟಿ ಕೋಂ ಲೇಟ್ ಚಂದ್ರಪ್ಪ, 3 ವರ್ಷ ಸಜೆ ಮತ್ತು 4000 ರೂ ದಂಡ ವಿಧಿಸಿದ್ದು, ದಂಡ ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸಜೆಯನ್ನು ಅನುಭವಿಸತಕ್ಕದ್ದು ಎಂದು ಆದೇಶಿಸಿರುತ್ತದೆ.

Punishment for dowry harassment accused

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close