KSRTC ಬಸ್ ಸ್ಟೇರಿಂಗ್ ಕಟ್, ಡಿವೈಡರ್ ಗೆ ಗುದ್ದಿ ಬೈಕ್ ಸವಾರ ಸಾವು- KSRTC bus steering cut, biker dies after hitting divider

SUDDILIVE || THIRTHAHALLI || SHIVAMOGGA

KSRTC ಬಸ್ ಸ್ಟೇರಿಂಗ್ ಕಟ್, ಡಿವೈಡರ್ ಗೆ ಗುದ್ದಿ ಬೈಕ್ ಸವಾರ ಸಾವು- KSRTC bus steering cut, biker dies after hitting divider  

ಹೊಸವರ್ಷ ಕ್ಯಾಲೆಂಡರ್ ನಲ್ಲಿ ಬದಲಾಗುತ್ತಿದೆ ಹೊರತು ಜನ ಸಾಮಾನ್ಯನ ಜೀವನದಲ್ಲಿ ಅಲ್ಲ. ಹೊಸವರ್ಷದ ಸಂಭ್ರಮಾಚರಣೆ ವೇಳೆ ನಡೆಯುವ ಅವಘಡಗಳು ಎಂದಿನಂತೆ ಮುಂದುವರೆದಿದೆ. ಸಣ್ಣಪುಟ್ಟ ಕಿರಿಕ್ ಗಳು ನಶೆಯಲ್ಲಿ ಸಂಭವಿಸಿದೆ. 


ಕಳೆದ ಎರಡು ವರ್ಷದಿಂದ ಸಂಭ್ರಮಾಚರಣೆಯ ವೇಳೆ ನಡೆಯುತ್ತಿದ್ದ ಅವಘಡಗಳು‌ ಈ ಬಾರಿ ಕಡಿಮೆ ಎಂಬುದೇ ಸಮಾಧಾನದ ಸುದ್ದಿಯಾಗಿದೆ. ಎಂದಿನಂತೆ ಹೊಸವರ್ಷದ ಆರಂಭದಲ್ಲಿಯೇ ರಸ್ತೆ ಅಪಘಾತಗಳು ಸಂಭವಿಸಿದೆ. ಕರ್ನಾಟಕ ಸಂಘದ ಬಳಿ ಎರಡು ಬೈಕ್ ಗಳು ಡಿಕ್ಕಿ ಹೊಡೆದಿದೆ. ಸಣ್ಣಪುಟ್ಟ ಗಾಯಗಳಾಗಿವೆ.

ತೀರ್ಥಹಳ್ಳಿಯ ಕಟ್ಟೆಹಕ್ಲು ಬಳಿ KSRTC ಬಸ್ ಸ್ಟೇರಿಂಗ್ ಕಟ್ ಆಗಿ ಪ್ರಯಾಣಿಕರೆಲ್ಲ ಜಸ್ಟ್ ಮಿಸ್ ಆಗಿ ಬಜಾವ್ ಆಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಗರದ ಸಾಗರ ರಸ್ತೆಯಲ್ಲಿರುವ ಶರಾವತಿ ಡೆಂಟಲ್ ಕಾಲೇಜು ಬಳಿ ಬೈಕ್ ಸವಾರ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಬೆಳಗಿನ ಜಾವ 3-30 ಗಂಟೆಗೆ ಸಂಭವಿಸಿದೆ. ಮೃತನನ್ನ ನಿಜಾಮುದ್ದೀನ್ (32)ಎಂದು ಗುರುತಿಸಲಾಗಿದೆ.

ಹೊಳೆಹೊನ್ನೂರಿನ ನಿವಾಸಿಯಾಗಿದ್ದ ನಿಜಾಮುದ್ದೀನ್ ಆಯನೂರಿನಲ್ಲಿರುವ ಹೆಂಡತಿ ಮನೆಗೆ ತೆರಳುವಾಗ ಶರಾವತಿ ಡೆಂಟಲ್ ಕಾಲೇಜು ಬಳಿ ಬೈಕ್ ನಲ್ಲಿ ಹೋಗುವಾಗ ಡಿವೈಡರ್ ಗೆ ಗುದ್ದಿ ಪ್ರಾಣ ಕಳೆದುಕೊಂಡಿದ್ದಾರೆ. 

ಬಸ್ ಸ್ಟೇರಿಂಗ್ ಕಟ್

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟಿದ್ದ KSRTC ಬಸ್  ಕಟ್ಟೆಹಕ್ಲುಗೆ ತೆರಳುತ್ತಿದ್ದಂತೆ  ಸ್ಟೇರಿಂಗ್ ಕಟ್ ಆಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬೇಕಿದ್ದ ದೊಡ್ಡ ಅಪಾಯದಿಂದ  ೫೦ ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.  ಚಲಿಸುತ್ತಿರುವಾಗಲೇ ಕೆಎಸ್ ಆರ್ ಟಿಸಿ ಬಸ್ ಸ್ಟೇರಿಂಗ್ ಕಟ್ ಆಗಿದೆ ಎಂದು ತಿಳಿದು ಬಂದಿದೆ. 

ಚಾಲಕನ ಸಮಯ ಪ್ರಜ್ಞೆಯಿಂದ ಸ್ಟೇರಿಂಗ್ ಕಟ್ ಅಗುತ್ತಿದಂತೆ ಬಸ್ ನ್ನ ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆಬದಿಗೆ ತಂದು ನಿಲಿಸಿದ್ದಾರೆ.

KSRTC bus steering cut, biker dies after hitting divider



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close