ಸುಳ್ಳು ದಾಖಲಾತಿ ನೀಡಿ ಎರಡನೇ ಮದುವೆಯಾದವನ ವಿರುದ್ಧ ತೀರ್ಪು- Judgment against man who married for the second time using false documents

SUDDILIVE || SHIVAMOGGA

ಸುಳ್ಳು ದಾಖಲಾತಿ ನೀಡಿ ಎರಡನೇ ಮದುವೆಯಾದವನ ವಿರುದ್ಧ ತೀರ್ಪು- Judgment against man who married for the second time using false documents    

Judgement, martied


ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮತ್ತೋರ್ವಳನ್ನ ವರಿಸಿದ ಭೂಪನಿಗೆ 3 ವರ್ಷ ಸಾದಾ ಶಿಕ್ಷೆ 5000 ರೂ. ಹಣ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 

ತೀರ್ಥಹಳ್ಳಿ ತಾಲ್ಲೂಕಿನ ಸುರಖ್ಳಿ ಬಾಳೆಬೈಲಿನ ಇಂದಿರಾ ನಗರದ ನಿವಾಸಿ ಮಹಮ್ಮದ್ ಮುತಿಬ್(32)  ಈ ಹಿಂದೆಯೇ ಮದುವೆಯಾಗಿ ಮಗಳು ಇದ್ದರೂ ಸಹಾ, ತನಗೆ ಇನ್ನೂ ಮದುವೆ ಆಗಿಲ್ಲ ಎಂದು ಅನೈತಿಕ ಸಂಬಂಧ ಹೊಂದಿದ್ದ ತಬಸ್ಸುಮ್ ಎಂಬ ಮಹಿಳೆಯ ಜೊತೆ ಸುಳ್ಳು ದಾಖಲಾತಿ ನೀಡಿ  ಶಿವಮೊಗ್ಗ ದ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಎರಡನೇ ಮದುವೆ ಆಗಿದ್ದನು. 

ಈ ಕುರಿತು ದೂರಿನ ಮೇರೆಗೆ ಶಿವಮೊಗ್ಗ ಮಹಿಳಾ ಠಾಣೆ ಪೊಲೀಸ್ ಠಾಣೆಯಲ್ಲಿ ತಸ್ಮಿಯಾ ಬಾನು ಎಂಬುವರು ಮಹಮ್ಮದ್ ಮುತಿಮ್, ತಬುಸ್ಸಂ ಮತ್ತು ನವೀನ್ ಶೆಟ್ಟಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದರು. 

ಪ್ರಕರಣದ ಆಗಿನ ಮಹಿಳಾ ಠಾಣೆಯ ತನಿಖಾಧಿಕಾರಿಗಳಾದ ಶಾಂತಲಾರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಕಿರಣಕುಮಾರ್  ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. 

ಮಾನ್ಯ ಜಿಲ್ಲಾ 2ನೇ ಜೆ ಎಮ್ ಎಫ್ ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ  ಪ್ರಕರಣದ ವಿಚಾರಣೆ ನಡೆಸಿ ಆರೋಪಿ ಮಹಮ್ಮದ್ ಮುತಿಬ್ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ,  ಮಾನ್ಯ ನ್ಯಾಯಾಧೀಶರಾದ ಶ್ರೀ ಸಿದ್ದರಾಜು  ಏನ್ ಕೆ ರವರು ಆರೋಪಿಗೆ 03 ವರ್ಷ ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ 5000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ 30 ದಿನಗಳ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

Judgment against man who married for the second time using false documents

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close