SUDDILIVE || SHIVAMOGGA
ಮುಗಿಲು ಮುಟ್ಟಿದ ಸಂಭ್ರಮಾಚರಣೆ-New year celebration
ಹೊಸವರ್ಷಾಚರಣೆ ಸಂಭ್ರಮದಿಂದ ಕೂಡಿದ್ದು ನಗರದ ಅಮೀರ್ ಅಹಮದ್ ವೃತ್ತದಲ್ಲಿ ಎಂದಿನಂತೆ ಪೊಲೀಸರು ಸಹ ಸಂಭ್ರಮಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸರಿಂದ ಈ ಸೆಲೆಬ್ರೇಷನ್ ಮುಂದುವರೆದಿದೆ.
2026 ನೇ ಇಸವಿಯನ್ನ ಶಿವಮೊಗ್ಗದಲ್ಲಿ ಪೊಲೀಸರು ಕೇಕು ಕತ್ತರಿಸಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ. ಪ್ರತಿ ವರ್ಷ ಎಸ್ಪಿ ಮಿಥುನ್ ಕುಮಾರ್ ಎಎ ವೃತ್ತದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಈ ಬಾರಿ Adnl sp ಗಳಾದ ರಮೇಶ್ ಕುಮಾರ್ ಮತ್ತು ಕಾರ್ಯಪ್ಪ ಕೇಕು ಕತ್ತರಿಸಿದ್ದಾರೆ.
ಈ ವರ್ಷ ಎಸ್ಪಿಯವರ ಅನುಪಸ್ಥಿತಿಯಲ್ಲಿ ಈ ಸಂಭ್ರಮಾಚರಣೆ ನಡೆದಿದೆ. ಕಂಟ್ರಿಕ್ಲಬ್, ಬಸವನಗುಡಿಯಲ್ಲಿ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
ಹಾಡು ಡ್ಯಾನ್ಸು, ಪೇಪರ್ ಬ್ಲಸ್ಟಿಂಗ್ ಪಟಾಕಿ ಮೊದಲಾದವುಗಳನ್ನ ಬಳಸಿ ಸಂಭ್ರಮಾಚರಣೆ ನಡೆಸಲಾಯಿತು. ನಗರದ ಎಲ್ಲೆಡೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.
New year celebration


