ತೋಟದಲ್ಲಿ ಔಷಧ ಸಿಂಪಡಿಸುವಾಗ ಅವಘಢ-ಯುವ ಕೃಷಿ ಕಾರ್ಮಿಕ ಸಾವು-Young farm worker dies in accident while spraying pesticide in garden

 SUDDILIVE || SHIVAMOGGA

ತೋಟದಲ್ಲಿ ಔಷಧ ಸಿಂಪಡಿಸುವಾಗ ಅವಘಢ-ಯುವ ಕೃಷಿ ಕಾರ್ಮಿಕ ಸಾವು-Young farm worker dies in accident while spraying pesticide in garden

Farm, accident


ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ ವೇಳೆ ವಿಪರೀತ ಕೆಮ್ಮು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೃಷಿ ಕಾರ್ಮಿಕನೋರ್ವ ಸಾವು ಕಂಡಿರುವ ಘಟನೆ ವರದಿಯಾಗಿದ್ದು ಇದು ತೋಟದ ಮಾಲೀಕನ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನದಿಂದಾಗಿ ಸಾವು ಉಂಟಾಗಿದೆ ಎಂದು ಪ್ರಕರಣ ದಾಖಲಾಗಿದೆ

ಮಂಜ ನಾಯ್ಕ ಎಂಬ 22 ವರ್ಷದ ಯುವಕ ಶ್ರೀರಾಂಪುರ ದಲ್ಲಿ ಇರುವ ಏಕಾಂತಪ್ಪನವರ ಅಡಿಕೆ ತೋಟದಲ್ಲಿ ಸುಮಾರು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದನು ಇತರ ರಾಮ ನಾಯಕ ಎಂಬುವರೊಂದಿಗೆ ವಾಸವಾಗಿದ್ದು ಅಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದನು ಎರಡು ದಿನಗಳ ಹಿಂದೆ ಮಂಜ ನಾಯಕರವರ ಸಹೋದರ ಶಂಕರ್ ನಾಯ್ಕ್ ನ್ಯಾಮತಿಯಲ್ಲಿರುವ ಹಬ್ಬಕ್ಕೆ ಬರುವಂತೆ ಆಹ್ವಾನಿಸಿದ್ದರು. 

ಹಬ್ಬಕ್ಕೆ ಬರುವುದಿಲ್ಲ ತೋಟಕ್ಕೆ ಔಷಧಿ ಹೊಡೆಸಬೇಕಾಗಿದೆ ಎಂದು ಮಂಜು ನಾಯ್ಕ್ ಸಹೋದರಿಗೆ ತಿಳಿಸಿದರು. ಜನವರಿ 26ರಂದು ಬೆಳಿಗ್ಗೆ ಮಂಜು ನಾಯ್ಕ್ ತೋಟಕ್ಕೆ ಔಷಧಿ ಸಿಂಪಡಿಸಲು ಹೋದಾಗ ಹೊಟ್ಟೆ ನೋವು ಹಾಗೂ ಕೆಮ್ಮು ಆರಂಭವಾಗಿತ್ತು. ಇವರನ್ನು ತಕ್ಷಣ ಗಾಡಿಕೊಪ್ಪದಲ್ಲಿರುವ ಕ್ರಿಮಿಕ್ಕಿಗೆ ಕರೆದುಕೊಂಡು ಹೋಗಲಾಗಿತ್ತು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದರೂ ಸಹ ಸ್ವಲ್ಪ ವೇಳೆಯ ನಂತರ ಮಂಜ ನಾಯಕ ಅವರಿಗೆ  ರಕ್ತದ ವಾಂತಿ ಯಾಗಿತ್ತು.

ತಕ್ಷಣವೇ ಮಂಜ ನಾಯ್ಕ ಅವರನ್ನು ಮೆಗ್ಗಾನಗೆ ಸಾಗಿಸಿದಾಗ ಅಲ್ಲಿನ ವೈದ್ಯರು ಅವರ ಸಾವನ್ನು ದೃಢಪಡಿಸಿದ್ದಾರೆ ಈ ಹಿನ್ನೆಲೆಯಲ್ಲಿ ಮೃತ ಮಂಜನಾಯ್ಕ್ ಅವರ ಸಹೋದರ ಶಂಕರ್ ನಾಯ್ಕ್ ತೋಟದ ಮಾಲೀಕ ಏಕಾಂತಪ್ಪ ರವರ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರಾಖಲಿಸಿದ್ದಾರೆ.

Young farm worker dies in accident while spraying pesticide in garden

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close