12 ದಿನಗಳ ಹಿಂದೆ ಸಾಕುನಾಯಿಯನ್ನ ಕಚ್ಚಿಕೊಂಡು ಹೋಗಿದ್ದ ಚಿರತೆ ಮತ್ತೆ ಪ್ರತ್ಯಕ್ಷ-Leopard that bit pet dog 12 days ago reappears

 SUDDILIVE || BHADRAVATHI

12 ದಿನಗಳ ಹಿಂದೆ ಸಾಕುನಾಯಿಯನ್ನ ಕಚ್ಚಿಕೊಂಡು ಹೋಗಿದ್ದ ಚಿರತೆ ಮತ್ತೆ ಪ್ರತ್ಯಕ್ಷ-Leopard that bit pet dog 12 days ago reappears   

Leopard, dog


ಭದ್ರಾವತಿಯ ಗೋಂದಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿದ್ದ ಕುರಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ದಾಳಿಯಲ್ಲಿ ಕುರಿಯನ್ನ ಅರ್ದಂಬರ್ಧ ತಿಂದು ಪರಾರಿಯಾಗಿದೆ. ಕುರಿಯ ಮೇಲಿನ ದಾಳಿಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. 

ಗೋಂದಿಯಲ್ಲಿ 10-12 ದಿನಗಳ ಹಿಂದೆ ಗಂಗಾ ನಾಯ್ಕ್ ಎಂಬುವರ ಸಾಕು ನಾಯಿಯನ್ನ ಕಚ್ಚಿಕೊಂಡು ಹೋಗಿದ್ದ ಚಿರತೆ ಇಂದು ಮತ್ತೆ ಪ್ರತ್ಯೆಕ್ಷವಾಗಿ ಗ್ರಾಮದ ರೈತರೊಬ್ಬರ ಕುರಿಯನ್ನ ಭಕ್ಷಿಸಿದೆ. 

ಗಂಗಾ ನಾಯ್ಕರ ಮನವಿಯ ಮೇರೆಗೆ ಅವರ ಮನೆಯ ಮುಂದೆಯೇ ಬೋನಿಟ್ಟರು ಬೋನಿಗೆ ಬೀಳದ ಚಿರತೆ ಕುರಿಯನ್ನ ಬೇಟೆ ಯಾಡಿರುವುದು ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಚಿರತೆ ಒಮ್ಮೆ ಬೇಟೆಯಾಡಿದರೆ 15 ದಿನಗಳ ವರೆಗೆ ಕಾಣಿಸುವುದಿಲ್ಲ. 


ಗಂಗಾ ನಾಯ್ಕರ ಸಾಕು ನಾಯಿಯನ್ನ 12 ದಿನಗಳ ಹಿಂದೆ ಬೇಟೆಯಾಡಿದ ಚಿರತೆ ನಿನ್ನೆ ರಾತ್ರಿ ಕೊಟ್ಟಿಗೆಯಲ್ಲಿದ್ದ ಕುರಿಯನ್ನ ಬೇಟೆಯಾಡಿದೆ. ಗ್ರಾಮದ ಜನ ವಸತಿ ಪ್ರದೇಶದಲ್ಲಿ ಚಿರತೆಯ ಈ ದಾಳಿ ಹೆಚ್ಚು ಆತಂಕ ಹುಟ್ಟುಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುರಿಯ ಮರಣೋತ್ತರ ಪರೀಕ್ಷೆ ಸಹ ನಡೆದಿದೆ.  

ಕಾಡಿಗೆ ಬಿಡುವ ಅರಣ್ಯ ಇಲಾಖೆಯ ಕಳ್ಳಾಟವೂ ಚಿರತೆಯ ಭಯ ಹೆಚ್ಚಿಸಿರಬಹುದೆ?

ಗ್ರಾಮಗಳಲ್ಲಿ ವನ್ಯಜೀವಿಗಳ ನಡುವಿನ ಸಂಘರ್ಷಕ್ಕೆ ಅರಣ್ಯ ಇಲಾಖೆಯೇ ಮುಖ್ಯ ಕಾರಣವಿರಬಹುದೇನೋ ಎಂಬ ಅನುಮಾನವೂ ಮೂಡಿಸಿದೆ. ಕಾರಣ ಬೋನಿಗೆ ಬಿದ್ದ ಚಿರತೆಗಳನ್ನ ಪದೇ ಪದೇ ಕಾಡಿಗೆ ಬಿಡುವ ನೆಪದಲ್ಲಿ ಮುಂದಿನ ಊರಿನಲ್ಲಿ ಬಿಡುವ ಕಾರಣ ಚಿರತೆಗಳ ಹಾವಳಿ ತಪ್ಪುತ್ತಿಲ್ಲವೇನೋ ಎಂಬ ಅನುಮಾನ ಶುರುವಾಗಿದೆ. ಬೋನಿಗೆ ಬಿದ್ದ ಚಿರತೆಗಳನ್ನ ಅರಣ್ಯ ಇಲಾಖೆಯು ದಟ್ಟವಾದ ಕಾಡುಗಳಲ್ಲಿ ಬಿಡಲಾಗಿದೆ ಎಂಬ ಮಾಧ್ಯಮ ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತಾರೆ. 

ಶಿವಮೊಗ್ಗದಲ್ಲಂತೂ ಅರಣ್ಯ ಇಲಾಖೆ ಹೇಳುವ ಕಾಡಂತು ಎಲ್ಲೂ ಕಾಣಿಸೊಲ್ಲ. ಕಾಡಿಗೆ ಬಿಡುವ ಅರಣ್ಯ ಇಲಾಖೆ ಯಾವ ಕಾಡಿಗೆ ಬಿಡಲಾಗುತ್ತದೆ ಎಂಬ ಹೆಸರನ್ನೂ ಮಾಧ್ಯಮಗಳಿಗೆ ಹೇಳದೆ ಗೌಪ್ಗವಾಗಿ ಇಡುವ ಮೂಲಕ ಈ ವನ್ಯ ಜೀವಿ ಮತ್ತು ಮನುಷ್ಯರ ಹೊಡೆದಾಟಕ್ಕೆ ನಾಂದಿ ಹಾಡಲಾಗುತ್ತಿದೆ ಎಂಬ ಅನುಮಾನ ಹುಟ್ಟುತ್ತಿದೆ. ಒಂದು ವೇಳೆ ಈ ಅನುಮಾನ ಸತ್ಯಕ್ಕೆ ದೂರವಾಗಿದೆ ಎಂಬುದಾದರೆ ಇದುವರೆಗೂ ಜಿಲ್ಲೆಯಲ್ಲಿ ಸಿಕ್ಕ ಚಿರತೆಗಳನ್ನ ಯಾವ ಸ್ಥಳಗಳಲ್ಲಿ ಬಿಡಲಾಗಿದೆ ಎಂಬುದನ್ನ ಪಟ್ಟಿ ಮಾಡಿ ಲಿಖಿತ ರೂಪದಲ್ಲಿ ಕೊಡಲಿ. 

Leopard that bit pet dog 12 days ago reappears

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close