ವಿಷಮುಕ್ತ ತುಂಗಭದ್ರಾ, ರೈತರ ಫಸಲು ಸುಭದ್ರ ಅಭಿಯಾನದಲ್ಲಿ ಮಿಂಚಿದ ಶಾಸಕ ಚೆನ್ನಿ- MLA Chenni excels in campaign to make Tungabhadra poison-free and ensure farmers' harvests are safe

 SUDDILIVE || SHIVAMOGGA

ವಿಷಮುಕ್ತ ತುಂಗಭದ್ರಾ, ರೈತರ ಫಸಲು ಸುಭದ್ರ ಅಭಿಯಾನದಲ್ಲಿ ಮಿಂಚಿದ ಶಾಸಕ ಚೆನ್ನಿ- MLA Chenni excels in campaign to make Tungabhadra poison-free and ensure farmers' harvests are safe   

MLA,  Chenni

ಇಂದು ಪವಿತ್ರ ತುಂಗಭದ್ರಾ ಸಂಗಮ ಸ್ಥಳವಾದ ಕೂಡಲಿ ಪುಣ್ಯಕ್ಷೇತ್ರದಲ್ಲಿ, 'ನಿರ್ಮಲಾ ತುಂಗಾ ಅಭಿಯಾನ'ದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ "ವಿಷಮುಕ್ತ ತುಂಗಭದ್ರಾ, ರೈತರ ಫಸಲು ಸುಭದ್ರ" ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಚೆನ್ನ ಬಸಪ್ಪ ಭಾಗವಹಿಸಿದ್ದರು. 

ನಮ್ಮ ಜೀವನದಿಯಾಗಿರುವ ತುಂಗಭದ್ರೆಯನ್ನು ಮಾಲಿನ್ಯಮುಕ್ತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ನದಿಯಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪು ಹಾಗೂ ಇತರೆ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವ ಬದಲಿಗೆ, ನೈಸರ್ಗಿಕವಾದ ಕಡ್ಲೆಹಿಟ್ಟನ್ನು ಬಳಸುವಂತೆ ವಿನಂತಿಸಿದರು. ನದಿಯ ಪಾವಿತ್ರ್ಯತೆ ಮತ್ತು ಪರಿಸರ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಭಕ್ತಾದಿಗಳಿಗೆ ಕಡ್ಲೆಹಿಟ್ಟನ್ನು ವಿತರಿಸುವ ಮೂಲಕ ಈ ವಿಶೇಷ ಅಭಿಯಾನಕ್ಕೆ ಸಾಥ್ ನೀಡಿದರು.



ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗಿರೀಶ್ ಪಟೇಲ್, ಪ್ರಮುಖರಾದ ಶ್ರೀ ಪ್ರಭಾಕರ್, ಅಭಿಯಾನದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಬನ್ನಿ, ನಮ್ಮ ನದಿಗಳನ್ನು ವಿಷಮುಕ್ತವಾಗಿಸೋಣ, ಮುಂದಿನ ಪೀಳಿಗೆಗೆ ಶುದ್ಧ ಜಲವನ್ನು ಉಳಿಸೋಣ. ಎಂಬ ಆಶ್ ಟ್ಯಾಗ್ ಬಳಸಿ ಶಾಸಕರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾರೆ. 

MLA Chenni excels in campaign to make Tungabhadra poison-free and ensure farmers' harvests are safe

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close