ವಂದೇ ಭಾರತ್ ರೈಲು ಶಿವಮೊಗ್ಗದಲ್ಲಿ ಫೆಬ್ರವಿಗೆ ಬರೊಲ್ಲ-ಸಂಸದ-Vande Bharat train will not arrive in Shivamogga until February - MP

SUDDILIVE || SHIVAMOGGA
ವಂದೇ ಭಾರತ್ ಫೆಬ್ರವರಿಗೆ ಬರೊಲ್ಲ-ಸಂಸದ ಸ್ಪಷ್ಟನೆ-Vande Bharat train will not arrive in Shivamogga until February - MP
ಇನ್ನೇನು ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬಂದೇ ಬಿಡ್ತು ಎಂದು ಪ್ರಚಾರ ಪಡೆದಿದ್ದ ಶಿವಮೊಗ್ಗದ ಸಂಸದ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಕೋಚಿಂಗ್ ಸೆಂಟರ್ ನಿರ್ಮಾಣ, ಬೀರೂರು ಮತ್ತು ಶಿವಮೊಗ್ಗದ ಡಬ್ಲಿಂಗ್ ಕಾಮಗಾರಿ ಆಗುವ ವರೆಗೂ ಇಲಾಖೆಗೆ ಒತ್ತಡ ಹೇರುವುದು ಕಷ್ಟ ಎಂದು ಸಂವಾದದಲ್ಲಿ ಸ್ಪಷ್ಟಪಡಿಸಿದ್ದಾರೆ. 

2025 ನೇ ಇಸವಿಯಲ್ಲಿ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಕೋಚಿಂಗ್ ಸೆಂಟರ್ ನಂತರ ಬರಲಿದೆ ಎಂದು ಪ್ರಚಾರ ಪಡೆದಿದ್ದ ಸಂಸದರ ಈ ನಡೆ ಮಲೆನಾಡಿನ ಹೆಬ್ಬಾಗಿಲಾದ ಶಿವಮೊಗ್ಗದ ಜನತೆಗೆ ಶಾಕ್ ಆಗಿದೆ. ಮತ್ತೊಂದಿಷ್ಟು ವರ್ಷಗಳು ಕಾಯುವಂತೆ ಮಾಡಿದೆ. 

ಮೊದಲಿಗೆ ಮಾತು ಆರಂಭಿಸಿದ ಸಂಸದರು ನಾನೇ ಖುದ್ದಾಗಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪ್ರಧಾನಿಗೆ ಭೇಟಿಯಾದಾಗ ಪ್ರಧಾನಿಗಳು ಶೌಚಾಲಯದ ಬಗ್ಗೆ ಕೇಳಿದ್ದರು.  ಆರಂಭದಲ್ಲಿ ಮನೆಗಳಿಗೆ ಬೇಕಾದ ಶೌಚಾಲಯಗಳ ಬಗ್ಗೆ ಪಿಎಂ‌ಮಾತನಾಡಿದ್ದು ಆಶ್ಚರ್ಯ ಎನಿಸಿತ್ತು. ಕಡುಬಡವರಿಗೂ 500 ರೂ.ನಲ್ಲಿ ಶೌಚಾಲಯ ನೀಡಲಾಯಿತು ಎಂದು ತಿಳಿಸಿದರು.

ಜಲಜೀವನ್ ಮಿಷನ್ ಮುಕಾಂತರ ಮನೆ ಮನೆಗೆ ಕುಡಿಯುವ ನೀರು ಹಂಚಲಾಯಿತು. ಶಿವಮೊಗ್ಗದಲ್ಲಿ 1650 ಕೋಟಿ ಬಿಡುಡೆಯಾದರೆ 650 ಕೋಟಿ ಹಣ ಮಾತ್ರ ಆವಿನಹಳ್ಳಿ, ಮುಳಬಾಗಿಲುಗಳಲ್ಲಿ ಕುಡಿಯುವ ನೀರು ಹಂಚಲಾಯಿತು. 2047 ನೇ ಇಸವಿಗೆ ವಿಕಸಿತ ಭಾರತದ ಅಡಿಯಲ್ಲಿ ನಮ್ಮ ದೇಶದ ರಸ್ತೆಗಳು ಅಭಿವೃದ್ಧಿಗೆ ಶ್ರಮಿಸಲಾಗಿದೆ. 

ಹೈವೆ ರಸ್ತೆಗಳು ಫೋರ್ ಲೈನ್ ಆಗಿವೆ. ಈ ಹಿಂದೆ ಯುಪಿಎ ಸರ್ಕಾರ 91 ಸಾವಿರ ಕಿಮಿ ಹೈವೆ ನಿರ್ಮಾಣವಾಗಿತ್ತು. 1.5 ಲಕ್ಷ ಕಿಮಿ ಆಗಿದೆ. ರೈಲ್ವೆ ಎಲೆಕ್ಟ್ರಿಫಿಕೇಷನ್ ಆಗಿದೆ. ಇದರಿಂದ ಪರಿಸರ ಉಳಿದಿದೆ. ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಇಂದಿನವರೆಗೆ ಜಿಲ್ಲೆಯಲ್ಲಿ 14143 ಕುಶಲಕರ್ಮಿಗೆ ತರಬೇತಿ ನೀಡಲಾಗಿದೆ. 5083 ಫಲಾನುಭವಿಗೆ 55 ಕೋಟಿ ದೊರೆತಿದೆ 8128 ಕಿಟ್ ದೊರೆತಿದೆ. ಅನೇಕ ಯೋಜನೆಗಳು ಆಗ್ತಾಯಿದೆ. ಮನರೇಗಾದ ಬಗ್ಗೆ ಸಿಎಂ ಅಧಿವೇಶನ ಕರೆದಿದ್ದಾರೆ. ಇದರಬಗ್ಗೆ ಬೇರೆಡೆ ಕೆಲಸ ಮಾಡಬೇಕಿದೆ. ಕರ್ನಾಟಕದಲ್ಲಿ ಗ್ಯಾರೆಂಟಿ ಬಿಟ್ಟರೆ ಏನಾಗಲಿದೆ ಎಂದು ಪ್ರಶ್ನಿಸಿದರು. 

ಸದ್ಯದಲ್ಲಿಯೇ ದಾಖಲಾಗುವ ಗ್ರಾಮಾಂತರ, ಬೈಂದೂರು ಶಿಕಾರಿಪುರ ಸೊರಬ ಕ್ಷೇತ್ರದಲ್ಲಿ 3000 ಕೋಟಿ ನೀರಾವರಿ ಕೆಲಸ ಆಗಿತ್ತು. ಏರ್ ಪೋರ್ಟ್ ಸಹ ಕೆಲಸವಾಗಿ ನಿಂತು ಹೋಗಿತ್ತು. ನಂತರ ಆರಂಭವಾಯಿತು. ಇಂದು ಯಶಸ್ವಿಯಾಗಿ ವಿಮಾನ ಹಾರಾಡುತ್ತಿದೆ. ನೈಟ್ ಲ್ಯಾಂಡಿಂಗ್ ಅವತ್ತೇ ಆಗಬೇಕಿತ್ತು ಎಂದು ಚರ್ಚೆ ಮಾಡಲಾಗುತ್ತಿದೆ. ಹಂತ ಹಂತವಾಗಿ ನಡೆಯುವ ಈ ಕಾಮಗಾರಿಗೆ ಅದನ್ನ ಕಾಂಕ್ರಿಟ್ ಬೆಡ್ ಹಾಕಿ ನೈಟ್ ಲ್ಯಾಂಡಿಂಗ್ ನಿರ್ಮಿಸಲು 6 ಕೋಟಿ ಬೇಕಿದೆ. ಅದನ್ನ ರಾಜ್ಯ ಸರ್ಕಾರ ಯಾವಾಗ ಮಾಡಿ ಮುಗಿಸುತ್ತೆ ಕಾದು ನೋಡೋಣ ಎಂದರು. 

ಪಿಎಂ‌ ಜಿವೈ ರಸ್ತೆ 2001 ರಿಂದ 2023 ರವರೆಗೆ 247 ರಸ್ತೆಗೆ 500 ಕೋಟಿ ಹಣ ಬಿಡುಗಡೆಯಾಗಿತ್ತು.  1247 ರಸ್ತೆಗಳು ಅಭಿವೃದ್ಧಿಯಾಗಿದೆ. ನಾಲ್ಕು ಫೇಸನಲ್ಲಿ ನಡೆದಿದೆ. ಇದರ ನಿಯಮವನ್ನ ಸರಳೀಕರಣಗೊಳಿಸಬೇಕು. ರಾಜ್ಯದಲ್ಲಿ 54 ರಸ್ತೆ ಕಾಮಗಾರಿ ಮಾತ್ರವಾಗಿದೆ. ಜನಸಂಖ್ಯೆ ಕಿಮಿ ಇರಬೇಕು. ಇದರಲ್ಲಿ 24 ರಸ್ತೆ ಶಿವಮೊಗ್ಗದೇ ಉಳಿದಿದೆ. ಹೊಸ ಬಜೆಟ್ ನಲ್ಲಿ ಸಣ್ಣ ಸಣ್ಣ ರಸ್ತೆಗಳನ್ನ ಕ್ಲಸ್ಟರ್ ಮಾಡಿಕೊಂಡು ರಸ್ತೆ ಅಪ್ರೋಚ್ ಮಾಡಿಕೊಳ್ಳಬೇಕಿದೆ ಎಂದರು. 

4g ಬಿಎಸ್ ಎನ್ ಎಲ್ ಟವರ್ ಗೆ 398 ಪ್ರಪೋಸಲ್ 232 ಅಪ್ರೂವಲ್ ಆಗಿದೆ. ಗ್ಲೋಬಲ್ ಟೆಂಡರ್ ಆಗಿದೆ 9000 ಟವರ್ ನ್ನ ಪಿಎಂ ಉದ್ಘಾಟಿಸಿದರು. ಮೆಟೆರಿಯಲ್ ಸಿಕ್ಕರೆ ಫಾಸ್ಟ್ ಕೆಲಸ ಆಗುತ್ತೆ. ಕೀಪ್ಯಾಡ್ ಮೊಬೈಲ್ ಗೆ ಸಮಸ್ಯೆಇದೆ.  ಮೊಬೈಲ್ ಗೆ ಬೇರೆ ಸಿಮ್ ಹಾಕಿಕೊಂಡು ಅಪಗ್ರೇಡ್ ಮಾಡಬೇಕಿದೆ. ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಗಾಗಿ, ಶಿವಮೊಗ್ಗದಿಂದ ಶಿಕಾರಿಪುರದ ವರೆಗದ ಟ್ರಾಕ್ ಆಗ್ತಾಯಿದೆ. ಶಿಕಾರಿಪುರದಿಂದ ರಾಣೇಬೆನ್ನೂರಿನ ವರೆಗೆ ರೈತರಿಗೆ ಪರಿಹಾರ ನೀಡಲು 100 ಕೋಟಿ ಹಣ ಕೊರತೆಯಿದೆ. ಇದು ಎರಡು ತಿಂಗಳಲ್ಲಿ ಭೂಸ್ವಾಧೀನ ಆಗಲಿದೆ. 

ಯಾವ ತಾಲೂಕಿನಲ್ಲಿ ಟ್ರೈನ್ ಇಲ್ಲ ಅನ್ನಬಾರದು ಸೊರಬ ಮತ್ತು ತೀರ್ಥಹಳ್ಳಿಯಲ್ಲಿ ರೈಲಿಲ್ಲ. ತೀರ್ಥಹಳ್ಳಿಯಿಂದ ಶೃಂಗೇರಿಗೆ ಹೋಗಬೇಕು. ಇದರ ಮೂಲಕ ಹಾಸನ ತಲುಪುವ ಕೆಲಸಕ್ಕೆ ಹಣ ಬಿಡುಗಡೆಯಾಗಿದೆ. ಶೃಂಗೇರಿಯಿಂದ ಮಂಗಳೂರಿಗೆ 16 ಲಕ್ಷ ರೂ. ಸರ್ವೆಗೆ ಬಿಡುಗಡೆಯಾಗಿದೆ ತಾಳುಗುಪ್ಪ ಮೂಲಕ ಸೊರಬ  ಸಿರಸಿ ಗೆ ಹೋಗಲು 132 ಲಕ್ಷ ರೂ ಹಣಬಿಡುಗಡೆಯಾಗಿದೆ ತಾಳಗುಪ್ಪ ಹೊನ್ನಾವರಕ್ಕೆ ಸರ್ವೆ ಆಗಬೇಕಿದೆ ಎಂದರು. 

ಸಿಜೆಎಸ್ ಸಿ ಆಸ್ಪತ್ರೆಗೆ ಆರೋಗ್ಯ ಸಚಿವ ನೆಡ್ಡಾರನ್ನ ಭೇಟಿಯಾಗಿದ್ದಾಗ ಫೈನಾನ್ಸ್ ಇಲಾಖೆಯಲ್ಲಿದೆ ಎಂದಿದ್ದರು.ಬಿಎಸ್ ಎನ್ ಎಲ್ ಕಟ್ಟಡದಲ್ಲಿ ನಿವೃತ್ತಿ ಅಧಿಕಾರಿಗಳಿಗೆ ಸಬ್ ಡಿವಿಜನಲ್ ಆಫೀಸ್ ಶಿವಮೊಗ್ಗಕ್ಕೆ ಕೊಡಬೇಕು. ವಿಐಎಸ್ ಎಲ್ ಮೆದಾನಿ ಕಂಪನಿ ಡಿಪಿಆರ್ ಮಾಡ್ತಾ ಇದೆ. ರಾಜ್ಯದ ಎಂಪಿ ಅವರೆ ಸ್ಟೀಲ್ ಮಿನಿಸ್ಟರ್ ಆಗಿದ್ದರಿಂದ  ಕೆಲಸ ಆಗಲಿದೆ. ಬೀಗ ಹಾಕಲು ಹೋದಾಗ ನಾನು ಬಿಟ್ಟಿರಲಿಲ್ಲ. ಕಾಂಟ್ರಕ್ಟರ್ ಗಳನ್ನ ತರಿಸಲಾಯಿತು. ಬೀಗ ಹಾಕಿದ್ದರೆ ಕಷ್ಟ ಆಗುತ್ತಿತ್ತು ಎಂದರು. 

ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ ಶಿವಮೊಗ್ಗದಲ್ಲಿ ಆರಂಭವಾಗಲಿದೆ, ಕೇಫ್ ಡಿಗೆ ಸರಿಯಾದ ವ್ಯಾಕ್ಸಿನ್ ಇಲ್ಲದಂತಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿಯೇ ಲ್ಯಾಬ್ ಆರಂಭಿಸಿ  ಎಂದು ಕೇಂದ್ರದ ಆರೋಗ್ಯ ಸಚಿವರಿಗೆ ಕೇಳಿಕೊಂಡಿರುವೆ. ಮಳೆ ಮಾಪನದ ದುರಸ್ಥಿಗೆ ಕೇಂದ್ರದಲ್ಲಿ  ಮನವಿ ನಾಡಿಕೊಂಡಿರುವೆ. ಕೇಂದ್ರ ರಾಜ್ಯ ಸರ್ಕಾರಕ್ಕೆ ವರದಿ ಕೇಳಿದೆ ಫಲಿತಾಂಶ ಬರಬೇಕಿದೆ. ಎಫ್ ಎಂ ಟ್ರಾನ್ಸ ಮೀಟರ್ ಕೂರಿಸಲಾಗಿದೆ ಶೀಘ್ರದಲ್ಲಿಯೇ ಆರಂಭವಾಗಲಿದೆ. ಮೆಕ್ಕೆಜೋಳ ರೀಸರ್ಚ್ ಸೆಂಟರ್ ಆರಂಭಕ್ಕೆ ಬಿಹಾರ್ ಗೆ ಹೋದ ಕಾರಣ ಕೈತಪ್ಪಿದೆ. ಬೇರೆದು ಜಿಲ್ಲೆಗೆ ಬರಲಿದೆ ಎಂದರು. 

ತುಂಗ,  ಭದ್ರ ಹಾಗೂ ವರಾಹಿ ಜಲಮೂಲದ ನಿರ್ವಹಣೆಯನ್ನ  ವಿಶ್ವೇಶ್ವರಯ್ಯ ಜಲನಿಗಮಕ್ಕೆ ಕೊಡಲು ರಾಜ್ಯ ಸರ್ಕಾರ ಹೊರಟಿದೆ. ಇದು ಆಗಬಾರದು. ಗುಂಡಪ್ಪ ಶೆಡ್ ಗೆ ಮತ್ತು ವಿದ್ಯಾನಗರದ ಅಂಡರ್ ಪಾಸ್ ಮಾಡಲಾಗುತ್ತಿದೆ. ಚಿತ್ರದುರ್ಗ ಶಿವಮೊಗ್ಗದ ರಸ್ತೆಗೆ 500 ಕೋಟಿಯಲ್ಲಿ ಹೊಳೆಹೊನ್ನೂರು ಬೈಪಾಸ್ ಮತ್ತು ಹೊಸ ಸೇತುವೆ ಹೊಳಲ್ಕೆರೆಯಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ಈ ಯೋಜನೆ ಕೈಬಿಡುವ ಹಂತದಲ್ಲಿತ್ತು ಅದನ್ನ ವಾಪಾಸ್ ತರಲಾಗಿದೆ ಎಂದರು. 
 
ಸಿಗಂದೂರು ಸೇತುವೆ ಆಗಿದೆ. ಹಸಿರುಮಕ್ಕಿ ಸೇತುವೆಗೆ ಬಿಎಸ್ ವೈ ಸಿಎಂ ಆಗಿದ್ದಾಗ ಹಸಿರು ನಿಶಾನೆ ತೋರಲಾಗಿತ್ತು. ಬೆಕ್ಕೋಡಿ ಮತ್ತು ಸುಕ್ಕಾ ಸೇತುವೆ ನಿರ್ಮಾಣಕ್ಕೆ ಪರಿಸರ ವಾದಿಗಳು ಅಡ್ಡಿಯಾಗಿದ್ದರು. ಅದನ್ನ ಕ್ಲಿಯರ್ ಮಾಡಿಸಲಾಗುವುದು. ಫೇಬ್ರವರಿಯಲ್ಲಿ ವಂದೇಭಾರತ್ ಬರೊಲ್ಲ. ಡಬ್ಲಿಂಗ್ ಟ್ರಾಕ್ ಆಗಬೇಕು. ಕೋಟೆಗಂಗೂರು ಕೋಚಿಂಗ್ ಸೆಂಟರ್ ಮುಗಿಯಬೇಕಿದೆ. ಕೋಚಿಂಗ್ ಮತ್ತು ಬೀರೂರು ವರೆಗೆ ಡಬಲ್ ಟ್ರ್ಯಾಕ್ ಆಗುವ ವರೆಗೆ ರೈಲ್ವೆ ಇಲಾಖೆ ಮೇಲೆ ಒತ್ತಡ ಹಾಕಲ್ಲ ಎಂದರು. 

ಆಗುಂಬೆ ರಸ್ತೆ ವೈಡ್ನಿಂಗ್ 400 ಕೋಟಿ ಹಣ ಬಂದಿದೆ. ಅದು ರದ್ದಾಗಬೇಕು. ರದ್ದಾದರೆ ಟನಲ್ ಆಗುತ್ತೆ. ಬೆಂಗಳೂರು ಶಿವಮೊಗ್ಗ ನ್ಯಾಷನಲ್ ಹೈವೆ ರಾಜ್ಯ ಸರ್ಕಾರ ಭೂಸ್ವಾಧೀನ ವಿಳಂಬವಾಗಿದ್ದರಿಂದ ನಿರ್ಮಾಣ ನಿಧಾನವಾಗಿದೆ. ಹೈವೆ ಕಾಮಗಾರಿಯಲ್ಲಿ ಬರುವ ವಾಹನಗಳಿಗೆ ಸೂಚನ‌ಫಲಕದ ಕೊರತೆಯಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪರಿಶೀಲಿಸುವೆ. ಖೇಲೋ ಇಂಡಿಯಾಗೆ ಭದ್ರಾವತಿ ವಿಐಎಸ್ಎಲ್ ಕ್ರಿಕೆಟ್ ಹಾಕಿ ಜಿಮ್ನೇಸ್ಟಿಕ್ ಹಾಲ್ ಇದೆ. ರೆಡಿ ಇನ್ ಪ್ರಾಸ್ಟ್ರಕ್ಚರ್ ಬಳಸಿಕೊಳ್ಳಲಾಗುತ್ತದಾ  ಎಂದು ಹೇಳಿದರು. 

ಬಜೆಟ್ ನಲ್ಲಿ ಅನೌನ್ಸ್ ನೆಂಟ್ ಮಾಡಿ ಜಿಲ್ಲೆಗೆ ಕೊಡುವಂತದ್ದು ಇಲ್ಲ. ಕೊಲ್ಲೂರ್ ಕಾರಿಡಾರ್, ಬೀರೂರು ಶಿವಮೊಗ್ಗ ಡಬ್ಲಿಂಗ್ ಗೆ ಬಜೆಟ್ ಅನೌನ್ಸ್
Vande Bharat train will not arrive in Shivamogga until February - MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close