ಹೆಲ್ಮೆಟ್ ಹಾಕಿಕೊಳ್ಳದೆ ಬಂದವರಿಗೆ ಹೆಲ್ಮೆಟ್ ವಿತರಣೆ, ವಿನೂತನ ಅಭಿಯಾನಕ್ಕೆ ಸಾಕ್ಷಿಯಾದ ಟ್ರಾಫಿಕ್ ಪೊಲೀಸರು- Traffic police witness innovative campaign of distributing helmets to those who are not wearing them

 SUDDILIVE || SHIVAMOGGA

ಹೆಲ್ಮೆಟ್ ಹಾಕಿಕೊಳ್ಳದೆ ಬಂದವರಿಗೆ ಹೆಲ್ಮೆಟ್ ವಿತರಣೆ, ವಿನೂತನ ಅಭಿಯಾನಕ್ಕೆ ಸಾಕ್ಷಿಯಾದ ಟ್ರಾಫಿಕ್ ಪೊಲೀಸರು- Traffic police witness innovative campaign of distributing helmets to those who are not wearing them   

Traffic, Police

ರಸ್ತೆ ಸುರಕ್ಷಿತ ಅಭಿಯಾನದ ಅಡಿ ಶಿವಮೊಗ್ಗದ ಟ್ರಾಫಿಕ್ ಪೊಲೀಸರು ಅದ್ಭುತ ಅಭಿಯಾನಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹದ್ದೇ ಅಭಿಯಾನವನ್ನ ಪೊಲೀಸರು ಕೈಗೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಬಯಸಿದ್ದಾರೆ. 

ಸದಾ ದಂಡ, ಕೆಲವರ ಪ್ರಚಾರ ಪ್ರಿಯತೆ, ಕೆಲ ಏರಿಯಾಗಳಲ್ಲಿ ಮಾತ್ರ ದಂಡ ವಸೂಲಿ ಮಾಡುವ ಆರೋಪ ಎದುರಿಸುತ್ತಿದ್ದ ಟ್ರಾಫಿಕ್ ಪೊಲೀಸರು ಇಂದು ವಾಹನ ಸವಾರನಿಗೆ ಹೆಲ್ಮೆಟ್ ವಿತರಿಸಿ ರಸ್ತೆ ಸುರಕ್ಷಿತ ಅಭಿಯಾನಕ್ಕೆ ಹೊಸ ನಾಂದಿ ಹಾಡಿದ್ದಾರೆ. ಹೊಸ ಎಸ್ಪಿ ಬಂದ ಮೇಲೆ ಟ್ರಾಫಿಕ್ ಪೊಲೀಸರ ಜಾಗೃತಿ ಕಾರ್ಯಕ್ರಮನೇ ಬದಲಾಯಿತಾ ಎಂಬ ಸಣ್ಣ ಅನುಮಾನಕ್ಕೂ ಈ ಅಭಿಯಾನ ಸಾಕ್ಷಿಯಾಗುತ್ತಿದೆ.

ಈ ದಿನ ದಿನಾಂಕಃ 15-01-2026 ರಂದು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಶಿವಮೊಗ್ಗ ನಗರದ ಎ. ಎ ವೃತ್ತದ ಬಳಿ ಕರ್ತವ್ಯದಲ್ಲಿದ್ದಾಗ, ಬೈಕ್ ಚಾಲಕರು ಹೊಸ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೇ ಚಾಲನೆ ಮಾಡಿಕೊಂಡು ಬಂದಿದ್ದು, ಆಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಯುವಕರಿಗೆ ಹೆಲ್ಮೆಟ್  ನ ಮಹತ್ವದ ಬಗ್ಗೆ ಅರಿವು ಮೂಡಿಸಿ, ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಿದರು, ನಂತರ ಯುವಕರು ಹೊಸ ಹೆಲ್ಮೆಟ್ ನ್ನ ವಿತರಿಸಲಾಯಿತು.  

ಈ ಕುರಿತು ಸ್ಪಷ್ಟನೆ ನೀಡಿದ ಟ್ರಾಫಿಕ್ ವೃತ್ತ ನಿರೀಕ್ಷಕ ದೇವರಾಜ್ ಇಂದು 10-15 ಹೆಲ್ಮೆಟ್ ಗಳನ್ನ ವಿತರಿಸಲಾಯಿತು. ಶನಿವಾರ ಜಾಥವನ್ನ ಹಮ್ಮಿಕೊಳ್ಳಲಾಗಿದೆ. ರಸ್ತೆ ಸುಕ್ಷಿತಾ ಅಭಿಯಾನದ ಅಡಿ ಈ ಕಾರ್ಯಕ್ರಮ ನಡೆದಿದೆ ದಿನಕ್ಕೆ ಒಂದೊಂದು ದಿನ ವಿಶೇಷವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. 

Traffic police witness innovative campaign of distributing helmets to those who are not wearing them

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close