ಒಂದು ಹಿಟ್ಟಿನ ಗಿರಣಿಯ ಕಥೆ-The story of a flour mill

SUDDILIVE || SHIVAMOGGA

ಒಂದು ಹಿಟ್ಟಿನ ಗಿರಣಿಯ ಕಥೆ-The story of a flour mill

Flour, Mill
ಸಾಂಧರ್ಭಿಕ ಚಿತ್ರ


ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಹಿಟ್ಟಿನ ಗಿರಣಿಯನ್ನ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಕಾರಣ ದೂರು ನೀಡಿದ್ದಕ್ಕೆ ಪೊಲೀಸ್ ಮತ್ತು ಅವರ ತಂದೆ 78 ವರ್ಷದ ತಂದೆಯವರನ್ನ ಗಿರಣಿಯ ಮಾಲೀಕನೇ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. 

ಗಾಡಿಕೊಪ್ಪದಲ್ಲಿ ರಂಗೇಗೌಡ ಎಂಬಾತ ಲಕ್ಷ್ಮೀ ನಾರಾಯಣ ಎಂಬ ಹೆಸರಿನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದು ಹಿಟ್ಟಿನ ಗಿರಣಿಯನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಪೇಕ್ಷಣಾಪತ್ರ ಪಡೆಯದೆ ನಡೆಸಲಾಗುತ್ತಿದೆ. ಈ ಹಿಟ್ಟಿನ‌ಗಿರಣಿ ಹೆಚ್ಚಿನ ಡೆಸಿಬಲ್ ಶಬ್ದವನ್ನ ಹೊರಹಾಕುತ್ತಿದೆ ಎಂದು ಶೇಖರಪ್ಪ ಮತ್ತು ಅವರ ಪುತ್ರ ಪೊಲೀಸ್ ಆದ ರಮೇಶ್ ಸಹ ದೂರು ನೀಡಿದ್ದರು. 

ಶೇಖರಪ್ಪನವರಿಗೆ ವಯೋ ಸಹಜ ಖಾಯಿಲೆಯಿದ್ದು ಈ ಗಿರಣಿಯ ಶಬ್ದದಿಂದ ಅವರ ಆರೋಗ್ಯವೂ ಏರುಪೇರು ಕಾಣಿಸಿತ್ತು. ಈ ಪ್ರಕರಣವನ್ನ‌ ಶಾಸಕರ ಬಳಿ ಡಿ.30 ರಂದು ರಮೇಶ್ ಶೇಖರಪ್ಪ ವಿವರಣೆ ನೀಡುತ್ತಿರುವ ವೇಳೆ ಅಲ್ಲಿಗೆ ಬಂದ ಗಿರಣಿಯ ಮಾಲೀಕ ರಂಗೇಗೌಡ ಮತ್ತು ಸಹೋದರ ಕಿರಣ್ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ.

 ಪರಿಸರ ಇಲಾಖೆ, ಮೆಸ್ಕಾಂ, ಇಲಾಖೆಗೆ ದೂರು ನೀಡ್ತೀರ ನೀಡಿ, ನಾವು ಗಿರಣಿಯನ್ನ ಹೇಗೆ ನಡೆಸಬೇಕು ಗೊತ್ತಿದೆ ಎಂದು ಜೀವಬೆದರಿಕೆ ಹಾಕಲಾಗಿದೆ ಎಂದು ತಂದೆ ಮಗ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

The story of a flour mill

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close