ಬೈಕ್ ಅಡ್ಡಹಾಕಿ ಸುಲಿಗೆ ನಡೆಸಿದ ಆರೋಪಿ ಪೊಲೀಸರ ಬಲೆಗೆ- Police catch accused who robbed bike

SUDDILIVE || SHIVAMOGGA

ಬೈಕ್ ಅಡ್ಡಹಾಕಿ ಸುಲಿಗೆ ನಡೆಸಿದ ಆರೋಪಿ ಪೊಲೀಸರ ಬಲೆಗೆ- Police catch accused who robbed bike   

Police, catch

ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಸಕಲ್ ಬೈಲ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಅಡ್ಡಹಾಕಿ ಆಯುಧಗಳನ್ನ ತೋರಿಸಿ ಸುಲಿಗೆ ನಡೆಸಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. 

ದಿನಾಂಕ:05/01/2026 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಪಿರ್ಯಾದುದಾರರು ತಮ್ಮ ಸೊಸೆ ಶೃತಿ ರವರನ್ನು ಮಸಕಲ್ ಬೈಲು ಬಸ್ ನಿಲ್ದಾಣದಿಂದ ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಮನೆಗೆ ಹೋಗುತ್ತಿದ್ದಾಗ, ಕಚ್ಚಾ ಮಣ್ಣಿನ ರಸ್ತೆಯಲ್ಲಿ ಯಾರೋ ಅಪರಿಚಿತನು, ಬೈಕನ್ನು ಅಡ್ಡಹಾಕಿ, ಕೊಲೆ ಮಾಡುವ ಉದ್ದೇಶದಿಂದ ಮುಖಕ್ಕೆ ಖಾರದಪುಡಿ ಎರಚಿ, ಸ್ಟೀಲ್ ರಾಡ್ನಿಂದ ಶೃತಿ ರವರ ತಲೆಗೆ ಹೊಡೆದು, ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ, ಈ ಬಗ್ಗೆ ಆನಂದಪುರ ಪೊಲೀಸ್ ಠಾಣಾ ಗುನ್ನೆ ನಂ 02/2026 ಕಲಂ 126(2), 309 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಸದರಿ ಆರೋಪಿತನನ್ನು ಪತ್ತೆ ಹಚ್ಚುವ ಕುರಿತು  ಪೊಲೀಸ್ ಅಧೀಕ್ಷಕರಾದ  ಬಿ ನಿಖಿಲ್ ಐಪಿಎಸ್, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಮತ್ತು ರಮೇಶ್ ಹಾಗೂ ಸಾಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷರಾದ  ಕೇಶವ ಕೆ.ಇ. ಸಾಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಂತೋಷ್ ಶೆಟ್ಟರವರ ಮಾರ್ಗದರ್ಶನದಲ್ಲಿ ಠಾಣಾಧಿಕಾರಿಗಳಾದ ಶಿವಮೊಗ್ಗ ಸಿಡಿಆರ್ ನ ಪಿಎಸ್ಐ ಪ್ರವೀಣ್ ಎಸ್.ಪಿ ಹಾಗೂ ಸಿಬ್ಬಂದಿಯವರಾದ ಇಂದ್ರೇಶ, ಗುರು ಎ.ಎಸ್.ಐ ಸಿದ್ದರೂಡ ಹೆಚ್.ಸಿ ಪ್ರಶಾಂತ್, ಹೆಚ್.ಸಿ ಪರಶುರಾಮ್, ಹೆಚ್.ಸಿ ತಾಹಿರ್ ಪಿಸಿ ಉಮೇಶ್ ಲಮಾಣಿ, ಪಿಸಿ ಹರ್ಷರವರನ್ನೊಳಗೊಂಡ ತಂಡ ರಚಿಸಲಾಗಿರತ್ತದೆ.

ಸದರಿ ತನಿಖಾ ತಂಡವು ದಿನಾಂಕ:10-01-2025 ರಂದು ಆರೋಪಿ ಗೋವಿಂದ ವೈ, 24 ವರ್ಷ, ವಾಸ ತತ್ತೂರು, ವಡ್ಡಿಗೆರೆ, ಸೊರಬ ತಾಲ್ಲೂಕು ಹಾಗೂ ಕೊಲೆಗೆ ಯತ್ನ ಮಾಡಲು ಕುಮ್ಮಕ್ಕು ನೀಡಿದ ಆರೋಪಿ ಕಿರಣ ಕುಮಾರ್‌, 32 ವರ್ಷ, ಕೃಷಿ ಕೆಲಸ, ವಾಸ ತತ್ತೂರು, ವಡ್ಡಿಗೆರೆ, ಸೊರಬ ತಾಲ್ಲೂಕು ಇವರನ್ನು ದಸ್ತಗಿರಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತದೆ.

ಸದರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Police catch accused who robbed bike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close