ಬೇರೆ ಯೋಜನೆಗಳಿಗೆ ಮಹಾತ್ಮ ಗಾಂಧಿಜಿಯ ಹೆಸರು ಕಾಂಗ್ರೆಸ್ ಗೆ ನೆನಪಾಗಲಿಲ್ಲ ಏಕೆ-ಸಂಸದ-Why didn't Congress remember Mahatma Gandhi's name for other projects - MP

 SUDDILIVE || SHIVAMOGGA

ಬೇರೆ ಯೋಜನೆಗಳಿಗೆ ಮಹಾತ್ಮ ಗಾಂಧಿಜಿಯ ಹೆಸರು ಕಾಂಗ್ರೆಸ್ ಗೆ ನೆನಪಾಗಲಿಲ್ಲ ಏಕೆ-ಸಂಸದ-Why didn't Congress remember Mahatma Gandhi's name for other projects - MP    

MP, Gandhiji


ಚಳಿಗಾಲದ ಅಧಿವೇಶನದಲ್ಲಿ ಸಂಸತ್ ನರೇಗಾವನ್ನ ತೆಗೆದು ವಿಬಿಜಿ ರಾಮ್ ಜಿ ಎಂದು ಹೆಸರಿಸಿರುವುದನ್ನ ವಿದೇಶಗಳು ಹೊಗಳಿವೆ. ಇನ್ನೂ ಕೂಡ ಕಾಂಗ್ರೆಸ್ ಮುಖಂಡರು ಈ ಯೋಜನೆಯ ಬಗ್ಗೆ ಹಗೂರವಾಗಿ ಮಾತನಾಡುತ್ತಿರುವುದನ್ನ ಸಂಸದರು ಆಕ್ಷೇಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಬಿಜಿ ರಾಮ್ ಜಿ ಯೋಜನೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುವುದಾಗಿ ಹೇಳಿದೆ. ನರೇಗಾದಲ್ಲಿರುವ ನೂನ್ಯತೆಯನ್ನ ತೆಗೆದು ಹೆಚ್ಚಿನ‌ಕಾರ್ಯಕ್ರಮವನ್ನ ಜಾರಿ ತರುವ ಪ್ರಯತ್ನ ಈ ಯೋಜನೆಯಲ್ಲಿ ಸರಿಪಡಿಸಲಾಗಿದೆ. ಜನರು ಈ ಬಗ್ಗೆ ಮನಗೊಂಡಿದ್ದಾರೆ. ಆದರೆ ಕಾಂಗ್ರೆಸ್ ವಿರೋಧವ್ಯಕ್ತಪಡಿಸಿ ರಾಜಕೀಯ ದಿವಾಳಿತನವನ್ನ ತೋರಿಸುತ್ತಿದೆ ಎಂದು ದೂರಿದರು. 

ರಾಮ್ ಎಂದು ಯೋಜನೆಗೆ ಹೆಸರಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂಬುದು ಕಂಡುಬರುತ್ತಿದೆ. ಗಾಂಧೀಜಿಯವರು ಬದುಕಿದ್ದಿರೂ ಇದನ್ನ ಸ್ವೀಕರಿಸುತ್ತಿದ್ದರು. ಆಕ್ಷೇಪಣೆಯಿದ್ದರೂ ಸಹ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇನ್ನೂ ಆಕ್ಷಪಣೆ ಇದ್ದರೂ ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರ ತಯಾರಿಯಿದೆ. ಕಾಂಗ್ರೆಸ್ ಗೆ ಗಾಂಧಿಜಿ ಬಗ್ಗೆ ದಿಡೀರ್ ಎಂದು ಪ್ರೀತಿ ಬಂದಿದೆ. 2009 ರಲ್ಲಿ ಮನರೇಗಾ ಎಂದು ರಾಜಕೀಯ ಲಾಭಕ್ಕಾಗಿ ತರಲಾಯಿತು. ನಂತರ ನರೇಗಾ ಆಯಿತು. 

ಬೇರೆ ಯೋಜನೆಗಳಿಗೆ ಮಹಾತ್ಮಗಾಂಧೀಜಿ ನೆನಪಾಗಲಿಲ್ಲ ಏಕೆ?

nation oldage pension scheeme ಎಂದು ಇತ್ತು. ನಂತರ ಇಂದಿರಾಗಾಂಧಿ ಓಲ್ಡ್ ಏಜ್ ಪೆನ್ಷನ್ ಸ್ಕೀಮ್ ಆಯಿತು. ಆಗ ಕಾಂಗ್ರೆಸ್ ಗೆ ನೆನಪಾಗದ ಗಾಂಧಿಜಿ,  ಹಿಂದಿನ ಬಹುತೇಕ ಸ್ಕೀಮ್ ಗೆ ಗಾಂಧಿಜಿ ಎಂದು ಹೆಸರು ಇಡಲಿಲ್ಲ. ಎನ್ ಡಿ ಡಬ್ಲು ಎಂ ಎಂದು 1986 ರಲ್ಲಿ ಕುಡಿಯುವ ನೀರಿನ ಯೋಜನೆಗೆ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆ ಎಂದು ಹೆಸರಿಡಲಾಯಿತು. ಕುಟೀರ ಯೋಜನೆಗೆ ರಾಜೀವ್ ಗಾಂಧಿ ವಸತಿ ಯೋಜನೆ ಎಂದು ಹೆಸರಿಟ್ಟ ಕಾಂಗ್ರೆಸ್ ಗೆ ಮಹಾತ್ಮಗಾಂಧಿ ನೆನಪಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು. 

SIR ಬಗ್ಗೆನೂ ಇದೇ ರೀತಿ ವಿರೋಧ ಮಾಡಲಾಯಿತು. ಅಧಿಕಾರಿಗಳನ್ನ ಕೂಡಿ ಹಾಕಲಾಯಿತು. 9 ರಾಜ್ಯ 3 ಕೇಂದ್ರ ಆಡಳಿತ ಪ್ರದೇಶದಲ್ಪಿ SIR ಮುಗಿದಿದೆ. 50 ಕೋಟಿ 90 ಲಕ್ಷ ಮತದಾರರಲ್ಲಿ 6 ಕೋಟಿ 56 ಲಕ್ಷ ಮತದಾರರನ್ನ ಕೈಬಿಡಲಾಗಿದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ್ ಸೇರಿದಂತೆ ಪ.ಬಂಗಾಳ, ಇತರೆಡೆ ಎಲ್ಲಾ ಸೇರಿ SIR ನಡೆಸಿದರೂ ಜನ ಮಾತ್ರ ವಿರೋಧಿಸಲಿಲ್ಲ. ಆದರೆ ಕಾಂಗ್ರೆಸ್ ವಿರೋಧಿಸಿದೆ. ವೇದಿಕೆ ಮೇಲೆ ಮಾತನಾಡುವ ವೇಳೆ ಮತ್ತು ಸಂಸತ್ ನಲ್ಲಿ ಮಾತನಾಡುವಾಗ ಕಾಂಗ್ರೆಸ್ ನ ನಾಯಕ ಸಂವಿಧಾನ ಪುಸ್ತಕ ಹಿಡಿದುಕೊಂಡು ಮಾತನಾಡುತ್ತಾರೆ. ಬಾಬಾ ಸಾಹೇಬರು ಇದ್ದಾಗ ಕಾಂಗ್ರೆಸ್ ಅವರನ್ನ ಸರಿಯಾಗಿ ನಡೆದುಕೊಂಡಿದ್ದರೆ ಅವರಿಗೆ ಹೀಗೆಲ್ಲಾ ಸಂವಿಧಾನದ ಪುಸ್ತಕ ಹಿಡಿಯುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ವ್ಯಂಗ್ಯವಾಡಿದರು. 

ಬಹಿರಂಗ ಚರ್ಚೆಗೆ ಬಿಜೆಪಿ ಸಿದ್ದ

ನೆಹರೂ ಮನೆತನಕ್ಕೆ ಭಾರತ ರತ್ನ ಪ್ರಶಸ್ತಿ ನೀಡುತ್ತಾ ಬಂದ  ಕಾಂಗ್ರೆಸ್ ಗೆ ಬಾಬಾ ಸಾಹೇಬರು ಕಣ್ಣಿಗೆ ಕಾಣಲಿಲ್ಲವಾ? ವಿಬಜಿ ರಾಮ್ ಜಿ ಯೋಜನೆಯಲ್ಲಿ ಕೆಲಸ ಮಾಡುವ ಹಕ್ಕನ್ನ ಕಸಿದುಕೊಳ್ಳಲಾಗಿದೆ. ಗ್ರಾಪಂ ಅಧಿಕಾರವನ್ನ ಕಸಿದುಕೊಳ್ಳಲಾಗಿದೆ ಎಂಬ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನ ಯೋಜನೆಯಲ್ಲೇ ನಿರಾಕರಿಸಲಾಗಿದೆ. ದುರ್ಬಳಕೆ, ಭ್ರಷ್ಠಾಚಾರವನ್ನ ಈ ಯೋಜನೆಯಲ್ಲಿ ತಡೆಹಿಡಿಯಲಾಗಿದೆ. ನಿಗದಿತ ಸಮಯದಲ್ಲಿ ಉದ್ಯೋಗ ಸಿಗದಿದ್ದರೆ ಭತ್ಯೆಯನ್ನ ನೀಡಲು ಈ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ಕಾರ್ಯಕ್ರಮವನ್ನ ಒಪ್ಪಿಕೊಂಡು ಹೋದರೆ ಕಾಂಗ್ರೆಸ್ ಗೆ ಒಳ್ಳೆಯದು‌‌. ಮೋದಿಜಿಯನ್ನ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಎಲ್ಲದನ್ನೂ ವಿರೋಧಿಸುತ್ತಿದೆ.

ಕಾಂಗ್ರೆಸ್ ಬಹಿರಂಗ ಚರ್ಚೆಗೆ ಬಿಜೆಪಿ ತಯಾರಿದೆ. ಕಾಂಗ್ರೆಸ್ ಯಾವತ್ತೂ ಚರ್ಚೆಗೆ ಬಂದಿರುವ ದಾಖಲೆಗಳೆ ಇಲ್ಲ. ಬಹಿರಂಗ ಚರ್ಚ್ಎಗೆ ಬೇಡ, ಈ ಯೋಜಬೆಯನ್ನ ವಿರೋಧಿಸಲು ಮಾಧ್ಯಮಗಳ ಬಗ್ಗೆನೇ ಸಕಾರಣ ನೀಡಲಿ ಎಂದ ಅವರು ರಾಜ್ಯ ಸರ್ಕಾರವೂ ಸ್ಲೀಪಿಂಗ್ ಪಾರ್ಟನರ್ ಆಗೋದು ಬೇಡ, ಆಕ್ಟಿವ್ ಪಾರ್ಟನರ್ ಆಗಲಿ ಎಂದು 60-40% ರೇಶ್ಯುವಿನಲ್ಲಿ ಸಹಭಾಗಿತ್ವವನ್ನ ನಿರೀಕ್ಷಿಸಲಾಗಿದೆ ಎಂದರು.

ಕಾಮಗಾರಿಗೆ ಗ್ರಾಮಾಂತರ ಭಾಗದಲ್ಲಿ ಪ್ರವಾಸ

ಕಳೆದ ಬಾರಿ ಎರಡನೇ ಸ್ಥಾನದಲ್ಲಿ ಸಂಸದರು ಅನುದಾನ ಬಳಕೆಯಲ್ಲಿ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಸದರು,  ಕಾಮಗಾರಿ ಏನೂ ಆಗಿಲ್ಲೆಂದು ಕೆಲ ಮಾಧ್ಯಮಗಳಲ್ಲಿ ಬಂದಿದೆ. ಇದು ಸತ್ಯಕ್ಕೆ ದೂರವಾದ ಮಾತಾಗಿದ್ದು, 2024 ರಿಂದ ಸಂಸದನಾಗಿ ಆಯ್ಕೆಯಾದಾಗಿನಿಂದ  36 ಕಾಮಗಾರಿ ಪೂರ್ಣವಾಗಿದೆ. ಒಟ್ಟು 248 ಕಾಮಗಾರಿ, ಬಂದಿದ್ದು 11 ಸಾವಿರ ಕೋಟಿ ನನ್ನ ಲೋಕಸಭಾ ಕ್ಷೇತ್ರಕ್ಕೆ ಅನುದಾನಬಂದಿದ್ದು 3 ಕೋಟಿ 10 ಲಕ್ಷ ವೆಚ್ಚವಾಗಿದೆ. ಪ್ರೋಗ್ರೆಸ್ ನಡೆಸುವಾಗ ತಾಂತ್ರಿಕ ದೋಷಗಳು ಕಂಡುಬಂದಿದೆ. ನಾಳೆಯಿಂದಲೇ ಗ್ರಾಮಾಂತರ ಪ್ರವಾಸ ಕೈಗೊಂಡು ಬಾಕಿ ಉಳುದಿರುವ ಕಾಮಗಾರಿಯ ಭೂಮಿಪೂಜೆ, ಶಂಕುಸ್ಥಾಪನೆ ಉದ್ಘಾಟನೆ ಉಳಿದಿವೆ ನೋಡಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. 

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಹರಿಕೃಷ್ಣ, ಚಂದ್ರಶೇಖರ್ ಎಸ್ ಮೊದಲದವರು ಉಪಸ್ಥಿತರಿದ್ದರು.

Why didn't Congress remember Mahatma Gandhi's name for other projects - MP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close