ಹಕ್ರೆ ಬಳಿ ಈಜಲು ಹೋಗಿ ಪಶು ವೈದ್ಯಾಧಿಕಾರಿ ನೀರಲ್ಲಿ ಮುಳುಗಿ ಸಾವು- Veterinary officer drowns while swimming near Hakre

 SUDDILIVE || SAGARA

ಹಕ್ರೆ ಬಳಿ ಈಜಲು ಹೋಗಿ ಪಶು ವೈದ್ಯಾಧಿಕಾರಿ ನೀರಲ್ಲಿ ಮುಳುಗಿ ಸಾವು- Veterinary officer drowns while swimming near Hakre  

Veterinary, swimming

ಸ್ನೇಹಿತರ ಜೊತೆ ಕುಟುಂಬ ಸಮೇತ ಶರಾವತಿ ಹಿನ್ನೀರಿಗೆ ತೆರಳಿದ್ದ ವೈದ್ಯಾಧಿಕಾರಿ ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 

ಸಾಗರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ರೆ ಬಳಿಗೆ ಬ್ಯಾಕ್ ವಾಟರ್ ಗೆ ಕುಟುಂಬ ಸಮೇತರಾಗಿ ಮಾಸೂರಲ್ಲಿ ಪಶು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ಡಾ.ಸುನಿಲ್(38) ಮತ್ತು ಡಾ ಬಸವರಾಜ್ ಕುಟುಂಬ ಸಮೇತ ತೆರಳಿದ್ದರು. 


ಈಜು ಬರುತ್ತದೆ ಎಂಬುದಾಗಿ ಬ್ಯಾಕ್ ವಾಟರ್ ಗೆ ಇಳಿದಂತ ಡಾ.ಸುನಿಲ್, ಮಧ್ಯಾಹ್ನ 2 ಗಂಟೆಯ ವೇಳೆಗೆ  ನೀರಲ್ಲಿ ಮುಳುಗಿದ್ದರು. ಈ ವೇಳೆ ಡಾ.ಬಸವರಾಜ್ ಊಟತರಲು ಹೋದಾಗ ಡಾ.ಸುನೀಲ್ ನೀರುಪಾಲಾಗಿದ್ದರು. 

ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಸಂಜೆ ವೇಳೆ ಸುಮಾರು 5 ಗಂಟೆಗೆ ಡಾ.ಸುನಿಲ್ ಅವರ ಮೃತದೇಹ ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Veterinary officer drowns while swimming near Hakre  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close