ಪ್ರಸನ್ನ ಕೆರೆಕೈ ಅವರನ್ನ ಕೊನೆಗೂ ಗುರುತಿಸಿದ್ದು ಕೇಂದ್ರ ಬಿಜೆಪಿ-Prasanna Kerekai has finally been recognized by the central BJP

 SUDDILIVE || SHIVAMOGGA

ಪ್ರಸನ್ನ ಕೆರೆಕೈ ಅವರನ್ನ ಕೊನೆಗೂ ಗುರುತಿಸಿದ್ದು ಕೇಂದ್ರ ಬಿಜೆಪಿ-Prasanna Kerekai has finally been recognized by the central BJP     

Prasanna, Kumar

ಸಿಗಂದೂರು ಸೇತುವೆ ಉದ್ಘಾಟನೆಯ ವೇಳೆ ಆಡಳಿತ ಪಕ್ಷದ ಬಾಯಿಯಲ್ಲೇ ನಾಟ್ಯವಾಡುತ್ತಿದ್ದ ಪ್ರಸನ್ನ ಕೆರೆಕೈನನ್ನ ಕೇಂದ್ರ ಬಿಜೆಪಿ ಕೊನೆಗೂ ಗುರುತಿಸಿದೆ.

ಸಾಗರ ತಾಲ್ಲೂಕು ಬಿಜೆಪಿಯ ಮಾಜಿ ಅಧ್ಯಕ್ಷರಾದ ಶ್ರೀ ಪ್ರಸನ್ನ ಕೆರೆಕೈ ರವರನ್ನು ಕೇಂದ್ರ ಸಾಂಬಾರು ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಕಾರ್ಯಕರ್ತರ ಸಾಮರ್ಥ್ಯದ ಬಲದಿಂದಲೇ ಬೆಳೆದಿರುವ ಕೇಂದ್ರದ ಬಿಜೆಪಿ ಕೊನೆಗೂ ಗುರುತಿಸುವ ಕೆಲಸಕ್ಕೆ ಕೈಹಾಕಿದೆ. 

ಸಂಸದರ ಪ್ರಚಾರದ ಆರ್ಭಟದಲ್ಲಿ ಎಲೆಮರೆಕಾಯಿಯಾಗಿ ಕೆಲಸ ಮಾಡಿಕೊಂಡಿದ್ದ ಪ್ರಸನ್ನ ಕುಮಾರ್ ಕೆರೆಕೈಯನ್ನ ಸೇತುವೆ ಉದ್ಘಾಟನೆಯ ವೇಳೆ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳು ಇತಿಹಾಸವನ್ನ ಬಗೆದು ತೋರಿದಾಗ ಸ್ಥಳೀಯ ಬಿಜೆಪಿಗೆ ಪ್ರಸನ್ನ ಕುಮಾರ್ ಕೆರೆಕೈ ಕಂಡುಬಂದಿದ್ದರು. ದಿಡೀರ್ ಎಂದು ಕಾಂಗ್ರೆಸ್ ಪಕ್ಷದ ಸಚಿವರು ಶಾಸಕರು ಮಾತನಾಡಲು ಆರಂಭಿಸಿದ ಪರಿಣಾಮ ಜಿಲ್ಲಾ ಬಿಜೆಪಿಗರು ಗುರುತಿಸಲು ಆರಂಭಿಸಿದರು. 

ಕಾರ್ಯಕರ್ತರನ್ನ ಬಾಳೆಹಣ್ಣನ್ನ ತಿಂದು ಸಿಪ್ಪೆ ಬಿಸಾಕುವ ರೀತಿಯ ಸ್ಥಿತಿತಲುಪಿರುವ ಬಿಜೆಪಿ ಮತ್ತೊಂದು ಕಾಂಗ್ರೆಸ್ ಪಕ್ಷವಾಗಿ ತಿರುಗುವ ಅಪಾಯದ ಅಂಚಿಗೆ ತಲುಪಿದೆ. ಈ ಸ್ಥಿತಿಗೆ ತಲುಪಿದ ಅಪಾಯದಲ್ಲಿರುವಾಗಲೆ ಕೇಂದ್ರ ನಾಯಕರು ಗುರುತಿಸಿರುವುದು ಸ್ವಾಗತಾರ್ಹ. ಉಂಡ್ರು ತಿಂದ್ರು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಪಡೆಯುವ ಜಿಲ್ಲಾ ಬಿಜೆಪಿ ನಾಯಕರು ಪ್ರಸನ್ನ ಕುಮಾರ್ ಕೆರೆಕೈಗೆ ಅಭಿನಂದಿಸುವ ಸೌಜನ್ಯವನ್ನೂ ತೋರದೆ ಇರುವುದು ದುರಂತ...

Prasanna Kerekai has finally been recognized by the central BJP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close