ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ-Sankranti celebrations at home

SUDDILIVE || SHIVAMOGGA

ತಾಯಿಮನೆಯಲ್ಲಿ ಸಂಕ್ರಾಂತಿ ಸಂಭ್ರಮ-Sankranti celebrations at home    

Sankranthi, celebration

ಮಕರ ಸಂಕ್ರಾಂತಿ ಹಬ್ಬವು ಕರ್ನಾಟಕದ ಪ್ರಮುಖ ಸುಗ್ಗಿಯ ಹಬ್ಬ ವಾಗಿದ್ದು, ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಗುರುತಿಸುತ್ತದೆ. ಇದು ಉತ್ತರಾಯಣದ ಪ್ರಾರಂಭ, ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಶಿವಮೊಗ್ಗದ ಆಲ್ಕೊಳದಲ್ಲಿ ಇರುವ ತಾಯಿಮನೆ ಸಂಸ್ಥೆಯಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ, ತಾಯಿಮನೆ ಸಂಸ್ಥೆ, ಜೆಸಿಐ ಶಿವಮೊಗ್ಗ ರಾಯಲ್ಸ್ ಮತ್ತು ಜೆಸಿಐ ಶಿವಮೊಗ್ಗ ವಿವೇಕ್ ಘಟಕಗಳ ಸಮಾಗಮದಲ್ಲಿ ಆಚರಿಸಲಾಯಿತು. 

ಕಣ್ಣಿಗೆ ಮುದ ನೀಡುವಂತೆ ತಾಯಿ ಮನೆ ಕಂಗೊಳಿಸುತ್ತಿತ್ತು. ಭತ್ತ, ರಾಗಿಯ ರಾಶಿ ಮಾಡಿ, ದವಸಧಾನ್ಯಗಳನ್ನು ಇಟ್ಟು ಪೂಜೆ ಮಾಡಲಾಯಿತು. ಹೂವು ಹಣ್ಣು ಕಬ್ಬುಗಳನ್ನು ಕಟ್ಟಿ, ಚಿತ್ತಾರ ಬಿಡಿಸಿದ ಮಡಿಕೆಗಳನ್ನು ಇಟ್ಟು ಅಲಂಕರಿಸಿದ್ದರು. ಎಳ್ಳು ಬೆಲ್ಲವನ್ನು ಹಂಚಿ ಹಬ್ಬವನ್ನು ಆಚರಿಸಲಾಯಿ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ  ಪತ್ರಕರ್ತರಾದ  ಶ್ರೀಯುತ ರಘುರಾಜ್ ರವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ ಸಂಕ್ರಾಂತಿ ಹಬ್ಬದ ಆಚರಣೆ ಕುರಿತು ಮತ್ತು ಹಬ್ಬದ ಹಿನ್ನೆಲೆ, ವೈಜ್ಞಾನಿಕ ದೃಷ್ಟಿಕೋನ, ನಮ್ಮ ಸಂಸ್ಕೃತಿ, ಹಬ್ಬ ಮತ್ತು ರೈತರ ಸಂಬಂಧಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. 


ಈ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಾಗೆ ದೇಸಿ ಆಟಗಳನ್ನು ಆಡಿಸಲಾಯಿತು. ಸಂಕ್ರಾಂತಿ ಹಾಡುಗಳು, ಕೋಲಾಟದ ನೃತ್ಯಗಳಿಂದ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಮೂಡಿಬಂದಿತು. ಈ ಕಾರ್ಯಕ್ರಮದಲ್ಲಿ ತಾಯಿಮನೆ ಸಂಸ್ಥೆಯ ಮುಖ್ಯಸ್ಥರಾದ  ಸುದರ್ಶನ್ ತಾಯಿ ಮನೆ, ರಾಯಲ್ಸ್ ಘಟಕದ ಅಧ್ಯಕ್ಷರಾದ JFD ಗಾನವಿ ಸುದರ್ಶನ್, ವಿವೇಕ್ ಘಟಕದ ಅಧ್ಯಕ್ಷರಾದ ಜೆ ಸಿ ವಿಜಯಲಕ್ಷ್ಮಿ ಉದಯ್ ಕಡಂಬ , 

ವಿವೇಕ್ ಮತ್ತು ರಾಯಲ್ಸ್ ಘಟಕಗಳ ನಿಕಟ ಪೂರ್ವ ಅಧ್ಯಕ್ಷರುಗಾಳದ Jc ಮಂಜುಳ ಮತ್ತು JFD ಸ್ಮಿತಾ, ಮಹಿಳಾ ಘಟಕದ ನಿರ್ದೇಶಕರುಗಳಾದ  ಜೆಸಿ ನಿರ್ಮಲ ಮತ್ತು ಜೆಸಿ ಮೇಘ,  ಮೋಹನ್ ಕಲ್ಪತರು, ಶೋಭಾ ಸತೀಶ್, ಉದಯ್ ಕಡಂಬ, ಭಾರತಿ, ಜಗದೀಶ್,ವಾಣಿ, ಡಾ. ವಿಜಯಶ್ರೀ, ಗಿರಿ ಮಲ್ಲಿಕಾ, ಶ್ವೇತಾ  ಹಾಗೂ ಸದಸ್ಯರು, ಮಕ್ಕಳು ಉಪಸ್ಥಿತರಿದ್ದರು.

Sankranti celebrations at home 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close