ಖಾಸಗಿ ಬಸ್ ನಲ್ಲಿ ಕಾಣಿಸಿಕೊಂಡ ದಿಡೀರ್ ಬೆಂಕಿ-Sudden fire breaks out in private bus

 SUDDILIVE || SAGARA

ಖಾಸಗಿ ಬಸ್ ನಲ್ಲಿ ಕಾಣಿಸಿಕೊಂಡ ದಿಡೀರ್ ಬೆಂಕಿ-Sudden fire breaks out in private bus      

Sudden, fire

ಸಿಗಂದೂರಿನಿಂದ ಸಾಗರ ಕಡೆ ಹೋಗುತ್ತಿರುವ ಎಸ್ ಬಿ ಕೆ ಖಾಸಗಿ ಬಸ್  ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಪ್ರಯಾಣಿಕರು ಆತಂಕದಿಂದ ಬಸ್ ನಿಂದ ಇಳಿದು ಹೋಗಿರುವ ಘಟನೆ ಹುಲಿದೇವರಬನದಲ್ಲಿ ರವಿವಾರ ಸಂಜೆ ನಡೆದಿದೆ.

ಬಸ್ ನ ಬಲಭಾಗದ ಹಿಂಬದಿಯ ಟಯರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ  ಗಮನಿಸಿದ ಗ್ರಾಮಸ್ಥರು ಬಸ್ ನಿಲ್ಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ.  ಬಸ್ ನಿಲ್ಲುತ್ತಿದ್ದಂತೆ ಪ್ರಯಾಣಿಕರು ಆತಂಕದಿಂದ ಬಸ್ ಖಾಲಿ ಮಾಡಿದ್ದಾರೆ. 


 ಗ್ರಾಮಸ್ಥರ ಸಹಾಯ ಮತ್ತು ಬಸ್ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

Sudden fire breaks out in private bus

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close