SUDDILIVE || SHIVAMOGGA
ರಸ್ತ ಸುರಕ್ಷಿತ ಅಭಿಯಾನಕ್ಕೆ ಚಾಲನೆ- Road safety campaign launched
ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಚಾಲನ ತರಬೇತಿ ಸಂಘ, ಸಾರಿಗೆ ಇಲಾಖೆ, ಶಂಕರ ಕಣ್ಣಿನ ಆಸ್ಪತ್ರೆ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ವತಿಯಿಂದ 37 ನೇ ರಾಷ್ಟ್ರೀಯ ಸುರಕ್ಷತಾ ಜಾಗೃತಿ ಕಾರ್ಯಕ್ರಮ ನಡೆದಿದೆ.
ಎಸ್ಪಿ ಕಚೇರಿ ಮುಂದುಗಡೆಯಿಂದ ಅಶೋಕ ಸರ್ಕಲ್, ಅಮೀರ್ ಅಹಮದ್ ಸರ್ಕಲ್, ಗೋಪಿ ಸರ್ಕಲ್, ಮಹಾವೀರ ಸರ್ಕಲ್, ಮೂಲಕ ಆರ್ ಟಿಒ ಕಚೇರಿಯ ವರೆಗೆ ಅಭಿಯಾನ ನಡೆಯಲಿದೆ. ಕಾನೂನು ಸೇವ ಪ್ರಾಧಿಕಾರದ ನ್ಯಾಯಾಧೀಶ ಸಂತೋಷ್ ಮತ್ತು ಅಡಿಷನಲ್ ಎಸ್ಪಿ ಕಾರ್ಯಪ್ಪ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ನ್ಯಾ.ಸಂತೋಷ್, ರಸ್ತೆ ಅಪಘಾತದಲ್ಲಿ ಈಡಾಗಿ ಅವರಿಗೆ ಮತ್ತೊರ್ವರು ಸೇವೆ ಮಾಡುವ ಸ್ಥಿತಿಗೆ ಇಂದಿನ ಯುವಕರು ತಲುಪಿದ್ದಾರೆ. ಮತ್ತೋರ್ವ ಜೀವನಕ್ಕೆ ಆಧಾರವಾಗಬೇಕಿದ್ದ ಯುವಕರು ರಸ್ತೆ ಅಪಘಾತದಲ್ಲಿ ಸಿಲುಕಿ ಮತ್ತೋರ್ವ ಆಶ್ರಯಪಡೆಯುತ್ತಿದ್ದರುವುದು ಬೇಸರ ತರುವಂತಹ ವಿಷಯವಾಗಿದೆ ಎಂದರು.
ಜ.1 ರಿಂದ 31 ರವರೆಗೆ ರಸ್ತ ಸುರಕ್ಷತಾ ಅಭಿಯಾನ ನಡೆಯಿತ್ತಿದೆ. ಪ್ರತಿವರ್ಷ ಜಿಲ್ಲೆಯಲ್ಲಿ 3500-3800 ಅಪಘಾತಗಳು ಸಂಭವಿಸುತ್ತದೆ. 800 ಕ್ಕೂ ಹೆಚ್ಚು ಗಾಯಗಳಾಗಿವೆ. ಪಾದಚಾರಿ, ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲನೆ ಮಾಡುವಾಗ ಜವಬ್ದಾರಿಯನ್ನ ಅರಿತು ವಾಹನ ಚಾಲನೆ ಮಾಡಬೇಕಿದೆ ಎಂದು ಕರೆ ನೀಡಿದರು.
ಬೇಗ ಮನೆ ಬಿಡಿ, ನಿಧಾನವಾಗಿ ಚಲಿಸಿ, ತಲುಪುವ ಸ್ಥಳವನ್ನ ಸುರಕ್ಷಿತವಾಗಿ ತಲುಪಿ, ಅತಿವೇಗ, ತಿಥಿ ಬೇಗ, ಚಾಲನೆ ವೇಳೆ ಮೊಬೈಲ್ ಕರೆ ಸ್ವೀಕರಿಸಿದರೆ ಯಮನ ಕರೆ ಸ್ವೀಕರಿಸಿದಂತೆ ಎಂಬುದನ್ನ ಅಭಿಯಾನದಲ್ಲಿ ಹೇಳಲಾಗುತ್ತಿದೆ. ಈ ಘೋಷಣೆಗಳನ್ನ ಯುವಕರು ಮತ್ತು ವಾಹನ ಸವಾರರು ಪಾಲಿಸುವಂತೆ ಕೋರಿದರು.
ಸುಮಾರು 40 ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರು 30 ಕ್ಕೂ ಹೆಚ್ಚು ಕಾರುಗಳಲ್ಲಿ ಅಭಿಯಾನದಲ್ಲಿ ಭಾಗಿಯಾಗಿದ್ದರು. ಸಿಪಿಐ ದೇವರಾಜ್ ಹೆಲ್ಮೆಟ್ ಧರಿಸಿ ಬುಲೆಟ್ ಚಲಾಯಿಸಿದರು.
Road safety campaign launched



