ಜ.18 ರಿಂದ ಫೆ.8 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಹಿಂದೂ ಸಂಗಮ- Hindu Sangama will be held in Shivamogga from January 18 to February 8

 SUDDILIVE || SHIVAMOGGA

ಜ.18 ರಿಂದ ಫೆ.8 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಹಿಂದೂ ಸಂಗಮ-  Hindu Sangama will be held in Shivamogga from January 18 to February 8  

Hindu, sangama

ಹಿಂದೂ ಸಮಾಜದ ಸಂಘಟನಿ ಸ್ವಾವಲಂಬಿವತಿಯಿಂದ ಸಂಸ್ಕಾರಯುಕ್ತ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿರುವ ರಾಷ್ಟ್ರೀರ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಹಿಂದೂ ಸಮಾಜವೇ ಒಟ್ಟುಗೂಡಿ ಕಾರ್ಯಕ್ರಮಗಳನ್ನು ಮಂಡಲ ಪಂಚಾಯಿತಿ, ನಗರಗಳಲ್ಲಿ ವಸತಿ ಮಟ್ಟದಲ್ಲಿ ನಡೆಸಲಾಗುತ್ತಿದ್ದು ಜ.18 ರಿಂದ ಫೆ.8 ರವರೆಗೆ ವಿವಿಧ ದಿನಗಳಂದು ನಡೆಸಲಾಗುತ್ತಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಸಂಗಮ ಆಯೋಜನಾ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಮಾತನಾಡಿ,  ಸಂಗಮದ ಉದ್ದೇಶ ಧರ್ಮ, ಸಂಸ್ಕೃತಿ, ಸಮಾಜದ ನಡುವಳಿಕೆಯಲ್ಲಿ ಜವಬ್ದಾರಿ ನಿರ್ವಹಿಸಬೇಕು ಎಂಬಿದಾಗಿದೆ. ಶಿವಮೊಗ್ಗ ನಗರದ ಹಿಂದೂ ಸಂಗಮ ಆಯೋಜನಾ ಸಮಿತಿಯು, ನಗರದ ಪ್ರತಿನಿಧಿಸುವಂತೆ ಆಯ್ದ 28 ಸ್ಥಳಗಳಲ್ಲಿ ಹಿಂದೂ ಸಂಗಮಗಳನ್ನು ವಿವಿಧ ದಿನಗಳಂದು ಆಯೋಜಿಸುತ್ತಿದೆ ಎಂದರು. 

ನಮ್ಮ ದೇವಾಲಯಗಳು ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವುದಲ್ಲದೆ, ಮೌಲ್ಯಗಳನ್ನು ಆಚರಣೆಗೆ ತರುವಲ್ಲಿ ಜಾಗೃತಿಯ, ಶಕ್ತಿಯ ಕೇಂದ್ರವಾಗಬೇಕು. ಮತ್ತು ಸಮಾಜದ ನಡವಳಿಕೆಯಲ್ಲಿ ಪರಿವರ್ತನೆಯನ್ನು ತರುವಲ್ಲಿ ನಿರ್ವಹಿಸಬೇಕಿದೆ. ಇದಕ್ಕೆ ಬಿಜೆಪಿ ಪಕ್ಷ ಸಹ ಕೈಜೋಡಿಸಿದೆ ಎಂದರು. 

ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಂವರ್ಧನೆ, ಪರಿಸರದ ಒ ಬಳಕೆ ಮತ್ತು ಜೀವನ ಪದ್ಧತಿಯ ವಿಕಾಸ, ಸಮಾಜದ ಎಲ್ಲರೊಂದಿಗೆ ಕರ್ತವ್ಯಗಳನ್ನು ನಿತ್ಯ ಪಾಲಿಸುವುದು; ಈ ಪಂಚ ಪರಿವರ್ತನೆಯ ಅಂಶಗಳನ್ನ ಪ್ರತಿ ವ್ಯಕ್ತಿಯೂ ತನ್ನ ಮನೆ. ವೃತ್ತಿಯ ಕ್ಷೇತ್ರ, ಸಮಾಜದಲ್ಲಿ ಮೇಲ್ಕಂಡ ವಾತಾವರಣ ನಿರ್ಮಾಣವಾಗುವ ಮಹತ್ತರ ಉದ್ದೇಶವನ್ನೂ ಹಿಂದೂ ಸಂಗಮ ಹೊಂದಿದೆ ಎಂದರು. 

ಗ್ರಾಮ ಮತ್ತು ವಸತಿಯ ಮಟ್ಟದಲ್ಲಿ ಹಿಂದೂ ಧರ್ಮ, ಸಂಸ್ಕೃ ಮತ್ತು ಸಮಗ್ರ ವಿಕಾಸದ ದೃಷ್ಟಿಯಿಂದ ಜಾಗೃತ ಹಿಂದೂ ಸಮಾವೇಶದ ಆಶಯದೊಂದಿಗೆ ಹಿಂದೂ ಸಮಾಜದ ಉತ್ಸವಗಳನ್ನು ಆಯೋಜಿಸಲಾಗಿದೆ. ಹಿಂದೂ ಧರ್ಮದ  ಪದ್ಧತಿಯಂತೆ ಜಾಗೃತಿ ಮೂಡಿಸಲಾಗುವುದು. ಸಂಗಮದಲ್ಲಿ ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮೊದಲಾದ ಸ್ಪರ್ಧೆ ನಡೆಸಲಾಗುವುದು. 28 ಸಾರ್ವಜನಿಕ ಸಭೆ ಸಮಾರಂಭ ನಡೆಸಲಾಗುವುದು. ಹಿಂದೂ ಸಂಘಟನೆಯ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ಟರು ಜನವರಿ 25ಕ್ಕೆ ಸಿದ್ದಯ್ಯ ಸರ್ಕಲ್ ನಲ್ಲಿ ನಡೆಯುವ ಹಿಂದೂ ಸಂಗಮದಲ್ಲಿ ಭಾಗಿಯಾಗಲಿದ್ದಾರೆ.  ಫೆ.5 ರಂದು ಸಂಸದ ತೇಜಸ್ವಿ ಸೂರ್ಯರನ್ನ ಕರೆಸಲಾಗುವುದು ಎಂದರು.

ಸಮಾಜ ಯಾವುದನ್ನ ಒಗ್ಗಟ್ಟಾಗಿ ಕೆಲಸಗಳನ್ನ ಮಾಡಲಗುವುದು. ಸಂಸ್ಕೃತಿ ಕ್ಷೀಣವಾಗುತ್ತಿರುವುದನ್ನ ಗಮನಿಸಿ ಮತ್ತೊಮ್ಮೆ ಸಮಾಜೋತ್ಸವದಲ್ಲಿ ಸಮಾಜದ ಪ್ರತಿಷ್ಠಿತ ಗಣ್ಯರೂ, ಯುವ ಗುರುತಿಸಿ ಸನ್ಮಾನಿಸಲಾಗುತ್ತದೆ. ಎಲ್ಲಾ ಹಿಂದೂ ಬಾಂಧವರು ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತನ್ಮೂಲಕ ಸಮಾಜದ ಜಾಗೃತಿಯ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ಸಮಿತಿಯು ಕೋರಿದೆ. ವ್ಯಕ್ತಿಗತ ಜೀವನ ಮತ್ತು ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳಲಾಗುವುದು ಇದರ ಮುಖ್ಯ ಉದ್ದೇಶವಾಗಿದೆ.  35 ವಾರ್ಡ್ ಗಳಲ್ಲಿ ರಸ್ತೆ, ದೇವಸ್ಥಾನ ಮೈದಾನಗಳಲ್ಲಿ ಹಿಂದೂ ಸಂಗಮವನ್ನ ನಡೆಸಲಾಗುವುದು ಎಂದರು. 

ಹಿಂದೂ ಸಂಘಟಬೆಯ ಮಧುಕರ್, ವರ್ಣೇಕರ್, ಪ್ರತಿಭಾ ಅರುಣ್ ಮೊದಲಾದವರು ಉಪಸ್ಥಿತರಿರಲಿರುವರು. 

Hindu Sangama will be held in Shivamogga from January 18 to February 8  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close