ಎಸ್ಪಿ ಮತ್ತು ಡಿಸಿ ಒಟ್ಟಿಗೆ ಪ್ರಯಾಣ ಬೆಳೆಸಿದರು ಪ್ರೀಪೇಯ್ಡ್ ಆಟೋದಲ್ಲಿ-SP and DC traveled together in a prepaid auto

 SUDDILIVE || SHIVAMOGGA

ಎಸ್ಪಿ ಮತ್ತು ಡಿಸಿ ಒಟ್ಟಿಗೆ ಪ್ರಯಾಣ ಬೆಳೆಸಿದರು ಪ್ರೀಪೇಯ್ಡ್ ಆಟೋದಲ್ಲಿ-SP and DC traveled together in a prepaid auto      

SP, DC


ಶಿವಮೊಗ್ಗ ನಗರದ  KSRTC ಬಸ್ ನಿಲ್ದಾಣ ಹಾಗೂ ಖಾಸಗಿ ಬಸ್ ನಿಲ್ದಾಣದ ಪ್ರಯಾಣಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಇಂದಿನಿಂದ ಪ್ರೀಪೇಯ್ಡ್ ಆಟೋ ಸೆಂಟರ್ ಗಳನ್ನ ಆರಂಭಿಸಲಾಗಿದೆ. ಈ ಎರಡೂ ಪ್ರೀಪೇಯ್ಡ್ ಸೆಂಟರ್ ಗಳನ್ನ ಡಿಸಿ ಪ್ರಭುಲಿಂಗ ಕವಲಕಟ್ಟಿ ಮತ್ತು ಎಸ್ಪಿ ನಿಖಿಲ್ ಲೋಕಾರ್ಪಣೆ ಮಾಡಿದರು.   

ಶಿವಮೊಗ್ಗ ಜಿಲ್ಲಾ ಪೊಲೀಸ್, ಜಿಲ್ಲಾಡಳಿತ, ಸಾರಿಗೆ ಇಲಾಖೆ ಹಾಗೂ ಚೈತನ್ಯ ರೂರಲ್ ಮಡೆವೆಲಪ್ ಮೆಂಟ್ ಸೊಸೈಟಿ ರವರ ಸಹಯೋಗದೊಂದಿಗೆ ಶಿವಮೊಗ್ಗ ನಗರದ KSRTC  ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ, Pre Paid Auto Counter ಗೆ ಚಾಲನೆ ನೀಡಲಾಯಿತು.    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ  ಸಿಇಓ ಜಿಲ್ಲಾ ಪಂಚಾಯತ್ ಸಹಾ ರವರು ಉಪಸ್ಥಿತರಿದ್ದರು.

ನಂತರ ಸುದ್ದಿಲೈವ್ ಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಕಟ್ಟಿ, ಖಾಸಗಿ ಮತ್ತು KSRTC ಬಸ್ ನಿಲ್ದಾಣದಲ್ಲಿ ಎರಡು ಪ್ರೀಪೇಯ್ಡ್ ಆಟೋಗಳು ಇಂದಿನಿಂದ ಆರಂಭವಾಗಿದೆ. ಇಲ್ಲಿ ಐದು ರೂ.ಗಳು ಹೆಚ್ಚು ಪಡೆಯಲಾಗುತ್ತಿದೆ. ನಂತರ ಪ್ರಯಾಣದ ಅಂತರದ ಮೇಲೆ ಹಣವನ್ನ‌ ನಿಗದಿಪಡಿಸಲಾಗಿದೆ. ಅದನ್ನ ಸಾರ್ವಜನಿಕರು ಪ್ರಯಾಣದ ಮೊದಲೇ ಕಟ್ಟಬೇಕಾಗಿದೆ ಎಂದು ತಿಳಿಸಿದರು. 

ಎಸ್ಪಿ ನಿಖಿಲ್ ಮತ್ತು ಜಿಲ್ಲಾಧಿಕಾರಿಗಳು ಒಟ್ಟಿಗೆ ಜನಸಾಮಾನ್ಯರಂತೆ ಒಂದು ಪ್ರೀಪೇಯ್ಡ್ ಪಾಯಿಂಟ್ ನಿಂದ ಮತ್ತೊಂದು ಪ್ರೀಪೇಯ್ಡ್ ಪಾಯಿಂಟ್ ವರೆಗೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು. ಈ ವೇಳೆ ಜಿಪಂನ ಸಿಇಒ ಹೇಮಂತ್ ಕುಮಾರ್ ಸಹ ಸಾಥ್ ನೀಡಿದರು. 

SP and DC traveled together in a prepaid auto

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close