ಹಂತ ಹಂತವಾಗಿ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್, ಬೆಂಗಳೂರು ಹೊರತುಪಡಿಸಿ ಉಳಿದೆಲ್ಲೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ಧ-ಮಧು ಬಂಗಾರಪ್ಪ-Step-by-step crackdown on illegal activities

 SUDDILIVE || SHIVAMOGGA

ಹಂತ ಹಂತವಾಗಿ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್, ಬೆಂಗಳೂರು ಹೊರತುಪಡಿಸಿ ಉಳಿದೆಲ್ಲೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ಧ-ಮಧು ಬಂಗಾರಪ್ಪ-Step-by-step crackdown on illegal activities, committed to holding local elections everywhere except Bengaluru - Madhu Bangarappa

Madhu, Bangarappa


ಸ್ಥಳೀಯಸಂಸ್ಥೆಗಳ ಚುನಾವಣೆಗಳನ್ನ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. 

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರೊಂದನ್ನ ಬಿಟ್ಟು ಬೇರೆ ಎಲ್ಲೆಡೆ ಗ್ರಾಪಂ, ಜಿಪಂ ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ದಿವಿದೆ. ಎಲ್ಲಾವನ್ನ ಒಬ್ಬ ಶಾಸಕನ ಕೈಯಲ್ಲಿ ನೋಡಿಕೊಳ್ಳಲು ಆಗೋದಿಲ್ಲ.  ಗ್ರಾಮೀಣ ಭಾಗದಲ್ಲಿ  ಒಬ್ಬ ಜನಪ್ರತಿನಿಧಿಯಿಂದ ನೋಡಿಕೊಳ್ಳುವ ಸ್ಥಿತಿಯಿಲ್ಲವಾಗಿದೆ.  ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ಮಾಡಲೇ ಬೇಕಾದ ಸ್ಥಿತಿಯಿದೆ. ಗ್ರಾಮಪಂಚಾಯಿತಿ ಅವಧಿಗಳು ಇನ್ನು 15 ದಿನಗಳು ಅಥವಾ ತಿಂಗಳುಗಳಲ್ಲಿ ಅವಧಿ ಮುಗಿಯಲಿದೆ. ಎನು ನಡೆಸದಿದ್ದರೂ ಗ್ರಾಪಂ ಎಲೆಕ್ಷನ್ ನಡೆಸಲೇ ಬೇಕು ಎಂದು ಹೇಳಿದರು. 

ಚುನಾವಣೆ ನಡೆಸಲು ನ್ಯಾಯಾಲಯವೇ ಸರ್ಕಾರಕ್ಕೆ ನಿರ್ದೇಶನ ನೀಡುವ ಸ್ಥಿತಿ ನಿರ್ಮಾಣವಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೀಸಲಾತಿಯನ್ನ ಉಳಿಸಿಕೊಂಡು ಬೇರೆಕಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಇವುಗಳ ಚುನಾವಣೆ ಬಿಟ್ಟು ಬಹಳದಿನ ಕಳೆದಿವೆ ಎಂದರು. 

ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಪೀಟು, ಅಕ್ರಮ‌ಮರಳು ಸಾಗಾಣಿಕೆ, ಗಾಂಜಾಗಳನ್ನ ಹಂತ ಹಂತವಾಗಿ ತಡೆಯಲಾಗುವುದು. ಈ ಮರಳು ವಿಚಾರದಲ್ಲಿ ನಾವುಗಳು ಇಕ್ಕಟ್ಟಿನ ಸ್ಥಿತಿಗೆ ತಲುಪಿದ್ದೇವೆ. ಇದರ ಬಗ್ಗೆ ಏನು ಮಾಡಿದ್ದೇವೆ ಎಂಬುದನ್ನ ಹೇಳಲ್ಲಿ ಅವ್ಯವಹಾರ ನಡೆಸಿದರೆ ಆತ ಮನೆಗೆ ಹೋಗುತ್ತಾನೆ ಎಂದು ಎಚ್ಚರಿಸಿದರು. 

ಯಾವುದೇ ಪತ್ರಿಕಾ ಮಾಧ್ಯಮದವರು, ಜನಪ್ರತಿನಿಧಿಗಳು ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರೆ ಅದರ ಬಗ್ಗೆ ಆಕ್ಷನ್ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವೆ. ಎರಡು ಬಾರಿ ಕೊಟ್ಟ ಮಾಹಿತಿ ಸುಳ್ಳಾದಾಗ ಪರಿಶೀಲನೆ ಮಾಡುವ ಮನಸ್ಥಿತಿಯಲ್ಲಿ ಅಧಿಕಾರಿಗಳು ಇರಲು ಸೂಚಿಸಲಾಗಿದೆ ಎಂದರು. 

ಈಗಿನ ಆದೇಶಕ್ಕೆ ಸಹಕರಿಸಲು ಕೋರಿಕೆ

ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಬೇರೆ ನಡೆಯುತ್ತಿದೆ. ಇದನ್ನ ಡಿಸ್ಟರ್ಬ್ ಮಾಡಿ ಮತ್ತೊಂದು ಆದೇಶ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಈಗಿನ ಆದೇಶಕ್ಕೆ ಸಹಕಾರ ನೀಡುವಂತೆ ಕೋರಿಕೊಂಡರು.

ಪರಿಹಾರ ನೀಡುವ ಬಗ್ಗೆ ಪರಿಶೀಲನೆ

ಮೊನ್ನೆ ಭದ್ರಾವತಿಯ ಅರೆಬಿಳಚಿಯಲ್ಲಿ ಭದ್ರ ಎಡದಂಡೆ ನಾಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೋಡಿದೆ. ಇವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. 

Step-by-step crackdown on illegal activities

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close