ಮಗುವಿನ ಹುಟ್ಟು ಸಾವಿನ ಸುತ್ತ ಅನುಮಾನದ ಹುತ್ತ- Suspicion surrounds the birth and death of a child

SUDDILIVE || SHIVAMOGGA

ಮಗುವಿನ ಹುಟ್ಟು ಸಾವಿನ ಸುತ್ತ ಅನುಮಾನದ ಹುತ್ತ-  Suspicion surrounds the birth and death of a child

Suspicion, child



ಗಂಡು ಮಗುವೊಂದು ಜನ್ಮಿಸಿ  ಒಂದು ಗಂಟೆಯ ಒಳಗೆ ಮಗು ಸತ್ತುಹೋಗಿದ್ದು, ಈ ಮಗು ಅನುಮಾನ ಸ್ಪದ ಸಾವಿಗೆ ಕಾರಣವಾಗಿದೆ ಎಂಬ ಕಾರಣಕ್ಕೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಮರಣೋತ್ತರ ಪರೀಕ್ಷೆಗೆ  ಕರೆತರಲಾಗಿತ್ತು.

ಇದೊಂದು ಪೀಠಿಕೆ ಅಷ್ಟೆ, ಈ ಪೀಠಿಕೆಯ ಸುದ್ದಿ ಹುಡುಕ್ತಾಹೋದರೆ ತರೀಕೆರೆ, ಶಿವಮೊಗ್ಗಕ್ಕೂ ನಂಟು ಹುಟ್ಟಿಕೊಳ್ಳುತ್ತಾಹೋಗುತ್ತೆ. ಮಗು ಹುಟ್ಟಿದ್ದು ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಬಾವಿಕೆರೆಯಲ್ಲಿ ಜನ್ಮಿಸಿದೆ. ಅದೂ ಗಂಡು ಮಗು ಹುಟ್ಟಿದ್ದು, ಹುಟ್ಟಿ 1 ಗಂಟೆಯ ಅವಧಿಯ ಒಳಗೆ ಮಗು ಉಸಿರು ನಿಲ್ಲಿಸಿದೆ. ಉಸಿರು ನಿಲ್ಲಿಸಿದರ ಹಿಂದೆ ಕೊಲೆ ಮಾಡಲಾಗಿದೆಯ ಎಂಬ ಅನುಮಾನಕ್ಕೆ ಮೆಗ್ಗಾನ್ ನ ಮರಣೋತ್ತರ ಪರೀಕ್ಷೆಗೆ ಕರೆತರಲಾಗಿದೆ.

19 ವರ್ಷದ ಯುವತಿ ತನ್ನ ಗರ್ಭವನ್ನೇ ಮರೆಮಾಚಿದ್ಲಾ? ಮರೆಮಾಚಿ ಮಗುವಿಗೆ ಜನ್ಮ ನೀಡುದ್ಲಾ? ಒಂದು ಗಂಟೆಯ ಒಳಗೆ ಹುಟ್ಟಿದ ಮಗು ಸಾವನ್ನಪ್ಪಿದ್ದು ಯಾಕೆ? ಹಾಗಾದರೆ ಆ ಯುವತಿಯಾರು? ಮದುವೆಯಾಗಿರಲಿಲ್ಲವಾ? ಮಗುವಿನ ತಂದೆಯಾರು? ಶಿವಮೊಗ್ಗಕ್ಕೆ ಹೇಗೆ ಈಸಾವು ಅಂಟಿಕೊಳ್ಳುತ್ತೆ?  ಹೀಗೆ ಸಾಲು ಸಾಲು ಪ್ರಶ್ನೆಗಳು ಅನಾವರಣಗೊಳ್ಳಲು ಆರಂಭಿಸಿದೆ.

ಮೊದಲೇ ಹೇಳಿದಂತೆ ಗಂಡು ಮಗು ಸಾವಾಗಿದ್ದಕ್ಕೆ ಜನ್ಮ ನೀಡಿದ ತಾಯಿಯ ಏರಿಯಾದಲ್ಲಿರುವವರು ಒಬ್ಬರು 112 ಗೆ ಕರೆ ಮಾಡಿದ ಪರಿಣಾಮ ಪೊಲೀಸರು ಬಂದಿದ್ದಾರೆ. ಪೊಲೀಸರ ಎಂಟ್ರಿಯಿಂದ ಆ ಮಗು ಮೊದಲು ತರೀಕೆರೆಯ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ನಂತರ ಹೆಚ್ಚಿನ ತಪಾಸಣೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿದೆ.

ಇಲ್ಲಿಗೆ ಒಂದಿಷ್ಟು ಪ್ರಶ್ನೆಗಳಿಗೆ ಸಣ್ಣಪ್ರಮಾಣಕ್ಕೆ ಉತ್ತರ ದೊರತಿದೆ. ಆದರೆ ಮಗುವಿನ ತಂದೆ ಮತ್ತು ಅದರ ಸಾವಿಗೆ ಕಾರಣ ಕಂಡುಕೊಳ್ಳಲು ಪೊಲೀಸರ ತನಿಖೆ ನಡೆಯಬೇಕಿದೆ. ತನಿಖೆಗಾಗಿ ತರೀಕೆರೆ ಠಾಣೆಯ ಪಿಎಸ್ಐ ವಿಶ್ವನಾಥ್ ಮತ್ತು ಸಿಡಿಪಿಒ ಚರಣ್ ರಾಜ್ ಮಗುವಿನ ಅನುಮಾನಸ್ಪದ ಸಾವಿಗೆ ಮರಣೋತ್ತರ ಪರೀಕ್ಷೆಗೆ ಬಂದು ಪರೀಕ್ಷೆ ಮುಗಿಸಿಕೊಂಡು ತೆಗೆದುಕೊಂಡು ಹೋಗಿದ್ದಾರೆ. ಸಿಡಿಪಿಒದಿಂದ ದೂರು ದಾಖಲಾಗಿದೆ.

ಈ ಯುವತಿ ನರ್ಸಿಂಗ್ ಓದಲು ಶಿವಮೊಗ್ಗಕ್ಕೆ ಬಂದಿದ್ದಳು. ನರ್ಸಿಂಗ್ ಓದಬೇಕಾದರೆ ಗರ್ಭಾವತಿಯಾದ್ಲಾ? ಈ ಪ್ರಶ್ನೆಗೆ ಉತ್ತರಸಿಕ್ಕಿಲ್ಲ. ತಾಯಿ ಮಗುವಿನ ತಂದೆ ಯಾರು ಎಂಬುದನ್ನ‌ ಮರೆ ಮಾಚಿದ್ದಾಳೆ.  ಶಿವಮೊಗ್ಗದಲ್ಲಿ ಓದುವಾಗಲೆ ದಿಡೀರ್ ಎಂದು ಮೂರು ನಾಲ್ಕು ದಿನ ಇರುವಾಗ ಬಾವಿಕೆರೆಗೆ ತೆರಳಿದ್ದಳು.‌ ನಿನ್ನೆ ಬೆಳಿಗ್ಗೆ ಮಗುವಿಗೆ ಜನ್ಮ‌ನೀಡಿದ್ದಾಳೆ.  ಜನ್ಮನೀಡಿ ಒಂದು ಗಂಟೆಯ ಒಳಗೆ ಸಾವನ್ನಪ್ಪಿದ ಮಗುವಿನ ಬಗ್ಗೆ ಅಲ್ಲಿನ ಸುತ್ತಮುತ್ತ ಸ್ಥಳೀಯರಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಮಗು ಸ್ವಾಭಾವಿಕವಾಗಿ ಸಾಯಿತಾ? ಅಥವಾಗುವಿನ ಜನ್ಮ ಮುಚ್ಚಲು ಸಾಯಿಸಲಾಯಿತ ಮೊದಲಾದ ವಿಷಯ ತಿಳಿಯ ತನಿಖೆ ನಡೆಯಲಿದೆ.

Suspicion surrounds the birth and death of a child

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close